ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಾಚಾರು ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂದಿರಕ್ಕೆ ಸಹಾಯಧನ ವಿತರಣೆ

ಮಾಚಾರು: ಇಲ್ಲಿನ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂದಿರದ ಕಟ್ಟಡ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಡಾ.ವೀರೇಂದ್ರ ಹೆಗ್ಗಡೆಯವರು ನೀಡಿದ ಒಂದು ಲಕ್ಷ ರೂಪಾಯಿ ಅನುದಾನದ ಡಿ.ಡಿ‌.ಯನ್ನು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣಕನ್ನಡ ಜಿಲ್ಲಾ ನಿರ್ದೇಶಕರಾದ ಶ್ರೀ ಚಂದ್ರಶೇಖರ ನೆಲ್ಯಾಡಿ ವಿತರಿಸಿದರು. ಈ ಸಂದರ್ಭದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ.ಯ ತಾಲೂಕು ಯೋಜನಾಧಿಕಾರಿ ಶ್ರೀ ಜಯಕರ ಶೆಟ್ಟಿ, ಮೇಲ್ವಿಚಾರಕಿ ಶ್ರೀಮತಿ ಅಶ್ವಿತಾ,ಮಾಚಾರು ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರಾದ ಕೇಶವ ಗೌಡ ಉಪಸ್ಥಿತರಿದ್ದರು. ಮಂಡಳಿಯ ಪರವಾಗಿ ಮಾಜಿ ಅಧ್ಯಕ್ಷರಾದ ರಾಮಯ್ಯ ಗೌಡ, ಕಾರ್ಯದರ್ಶಿ ಸೋಮಶೇಖರ್,ನಿವೃತ್ತ ಶಿಕ್ಷಕರಾದ ಬಾಬುಗೌಡ ಬಾಜಿಮಾರು, ಪ್ರಗತಿ ಯುವಕ ಮಂಡಲದ ಅಧ್ಯಕ್ಷ ಸುಂದರ ಬಂಗೇರ,ಸದಸ್ಯರಾದ ಸುರೇಶ್ ಮಾಚಾರ್,ಲೋಹಿತ್ ದೇಣಿಗೆ ಸ್ವೀಕರಿಸಿ ಶ್ರೀ ಕ್ಷೇತ್ರಕ್ಕೆ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.