ಸೇವೆಯಾಧಾರಿತ ವಿಶಾಲ ದೃಷ್ಟಿಕೋನದ ನಾಯಕತ್ವ ಮುಖ್ಯ: ಆರ್ಚ್ ಬಿಷಪ್ ಪೀಟರ್ ಮಚಾದೋ ಕರೆ

ಕೆಎಸ್‌ಎಮ್‌ಸಿಎ ಪದಾಧಿಕಾರಿಗಳ ಪದಗ್ರಹಣ

ಪದಗ್ರಹಣ ನಡೆಸಿಕೊಟ್ಟ ಬಿಷಪ್ ರೆಮೀಜಿಯೋಸ್ ಇಂಚಾನಾನಿಯಿಲ್ ಮಾತನಾಡಿ, ಬೈಬಲ್‌ನಲ್ಲಿ ಪ್ರಭು ಏಸು ಕ್ರಿಸ್ತರು ನಮಗೆ ಸಂಘಟನೆಯ ಪಾಠವನ್ನು ಹೇಳಿಕೊಟ್ಟಿದ್ದಾರೆ. ವ್ಯಕ್ತಿಗಳು ಇಬ್ಬರಿದ್ದಾಗ ಶಕ್ತಿ ಸಿಗುತ್ತದೆ. ಒಬ್ಬರು ಬಿದ್ದರೆ ಅವರನ್ನು ಮೇಲಕ್ಕೆತ್ತುವ ಜನ ನಮ್ಮೊಂದಿಗೇ ಇದ್ದಂತಾಗುತ್ತದೆ. ಒಬ್ಬರೇ ಆದರೆ ಆ ಸಹಾಯ ನಮಗೆ ಅಲಭ್ಯ, ಕೇರಳ ರಾಜ್ಯದಲ್ಲಿ ಸಂಘಟನೆಯ ಮೂಲಕ ನಡೆಸಿದ ಹೋರಾಟ, ಚಳವಳಿಗಳಿಂದಾಗಿ ಕ್ರೈಸ್ತ ಸಮಾಜ ಇಂದು ಅವಕಾಶ, ಅಧಿಕಾರಗಳನ್ನು ಪಡೆದುಕೊಂಡು ಬದುಕಿನ ಸ್ವಾತಂತ್ರ್ಯಗಳನ್ನು ಪಡೆದುಕೊಂಡಿದೆ. ಸಂಘಟನೆಯಿಂದ ಇಂತಹಾ ಸಮುದಾಯ ಏಳಿಗೆ ಕಂಡುಕೊಳ್ಳಬಹುದಾಗಿದೆ ಎಂದರು.

ಕ್ರೈಸ್ತ ಸಮುದಾಯದಿಂದ ಅನ್ಯಾಯವಾಗಿಲ್ಲ
ಸಮುದಾಯದಲ್ಲಿರುವ ಬಡವರು ಅಶಕ್ತರನ್ನು ಮೇಲೆತ್ತುವುದಕ್ಕಾಗಿ ಜಾತಿ ಸಂಘಟನೆಗಳು ಅಗತ್ಯವಾಗಿದೆ. ರಬ್ಬರ್, ಮರಗೆಣಸು ಕೃಷಿಯನ್ನು ನಾಡಿಗೆ ಪರಿಚಯಿಸಿದ್ದೂ ಅಲ್ಲದೆ ಗುಡ್ಡದಲ್ಲೂ ಕೃಷಿ ಮಾಡಬಹುದು ಎಂದು ತಿಳಿಸಿಕೊಟ್ಟವರು ಕ್ರೈಸ್ತ ಸಮಾಜ. ಈ ಸಮಾಜ ಇದ್ದಲ್ಲಿ ಚರ್ಚ್, ಶಾಲೆ, ಆಸ್ಪತ್ರೆ ನಿರ್ಮಾಣವಾಗಿದೆ. ಕ್ರೈಸ್ತರಿಂದಾಗಿ ಎಲ್ಲ ಸಮಾಜದವರಿಗೂ ಪ್ರಯೋಜವಾಗಿದೆ ಬಿಟ್ಟರೆ ಯಾರಿಗೂ ಅನ್ಯಾಯವಾಗಿಲ್ಲ.
-ವಸಂತ ಬಂಗೇರ, ಶಾಸಕರು.

ಬೆಳ್ತಂಗಡಿ: ನಾಯಕತ್ವ ಸೇವೆಯಾಧರಿತವಾಗಿಬೇಕು, ಸೇವೆ ಮೌಲ್ಯಾಧಾರಿತವಾಗಿರಬೇಕು ಮತ್ತು ಜಾತಿ ಧರ್ಮಗಳ ಎಲ್ಲೆಯನ್ನು ಮೀರಿದ ವಿಶಾಲ ವ್ಯಾಪ್ತಿಹೊಂದಿರ ಬೇಕು ಎಂದು ಬೆಂಗಳೂರು ನಿಯೋಜಿತ ಆರ್ಚ್ ಬಿಷಪ್ ರೆ. ಫಾ. ಪೀಟರ್ ಮಚಾದೋ ಹೇಳಿದರು.
ಬೆಳ್ತಂಗಡಿ ಸಿವಿಸಿ ಹಾಲ್‌ನಲ್ಲಿ ಮಾ.26 ರಂದು ನಡೆದ ಕರ್ನಾಟಕ ಸೀರೊ ಮಲಬಾರ್ ಕೆಥೋಲಿಕ್ ಅಸೋಸಿಯೇಷನ್ (ಕೆಎಸ್‌ಎಮ್ ಸಿಎ) ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೇವೆನೀಡುವ ಮೂಲಕ ನಾಯಕತ್ವ ತಂದುಕೊಳ್ಳಬೇಕು, ಕ್ರೈಸ್ತರು ಪರಸ್ಪರರ ಪಾದ ತೊಳೆದು ಸರ್ವ ಸೇವೆ ಮಾಡುವ ಈ ವಾರದಲ್ಲಿ ಉನ್ನತ ಸೇವೆ ನೀಡುವಂತೆ. ಮೌಲ್ಯಾಧಾರಿತ ಸೇವೆ ಎಂದರೆ ತಾರತಮ್ಯವಿಲ್ಲದೆ ಮಾಡುವ ಮೂಲಕ ಸಿಗುವ ಸಾಮಾಜಿಕ ಗೌರವ, ಅಂತೆಯೇ ಎಲ್ಲ ಧರ್ಮಗಳಲ್ಲೂ ಬಡವರಿದ್ದಾರೆ. ಅವರ ಸೇವೆಯನ್ನು ಮಾಡುವ ಮೂಲಕ ತಮ್ಮ ಸೇವೆಗೆ ಕ್ರೈಸ್ತ ಧರ್ಮದ ಮಾತ್ರ ಚೌಕಟ್ಟು ಇಟ್ಟುಕೊಳ್ಳದೆ ವಿಶಾಲ ಅರ್ಥ ವ್ಯಾಖ್ಯಾನ-ವ್ಯಾಪ್ತಿ ಹೊಂದಬೇಕು ಎಂದು ಅವರು ವಿವರಿಸಿದರು.
ನಿರ್ಗಮನಾಧ್ಯಕ್ಷ ಸೇವಿಯರ್ ಪಾಲೇಲಿ, ನೂತನ ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ. ಮಾತನಾಡಿದರು.
ಕೆ.ಎಮ್. ಪೌಲ್, ಜೋರ್ಜ್ ವಡಕ್ಕಲ್, ಫಾ. ಬಿನೋಯ್ ಜೋಸೆಫ್, ಕೊಡಗು-ದ.ಕ- ಉಡುಪಿ ಜಿಲ್ಲಾ ವಿವಿಧ ತಾಲೂಕು ಶಾಖೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಅಧಿಕಾರ ಪದಗ್ರಹಣ ಪಡೆದರು.
ಅಭಿಲಾಷ್, ಮಾರ್ಗರೆಟ್ ಮತ್ತು S ಸ್ಯಾಂಡ್ರ ಪೌಲ್ ಕಾರ್ಯಕ್ರಮ ನಿರೂಪಿಸಿದರು. ಆರ್ಚ್ ಬಿಷಪ್ ಪೀಟರ್ ಮಚಾದೋ, ನಿರ್ಗಮನಾಧ್ಯಕ್ಷ ಸೇವಿಯರ್ ಪಾಲೇಲಿ ಜಾಗತಿಕ ಸಮಿತಿಗೆ ಕಾರ್ಯದರ್ಶಿಯಾಗಿ ನೇಮಕಗೊಂಡ ಲ| ಬೆಟ್ಟಿ ನೆಡುನಿಲಮ್ ಅವರಿಗೆ ಸನ್ಮಾನ ನಡೆಯಿತು. ದೇಣಿಗೆ ನೀಡಿದವರನ್ನು ಗುರುತಿಸಲಾಯಿತು. ಪ್ರ. ಕಾರ್ಯದರ್ಶಿ ಪ್ರದೀಪ್ ಕೆ.ಸಿ ಸ್ವಾಗತಿಸಿದರು.
ನೂತನ ಸಾಲಿನ ಕಾರ್ಯದರ್ಶಿ ಸೋಫಿಯಾ ಜೋಸೆಫ್ ವಂದಿಸಿದರು. ಚಿತ್ರ: ಕೆ.ಜೆ. ಕಕ್ಕಿಂಜೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.