ಮೇ 12: ವಿಧಾನ ಸಭಾ ಚುನಾವಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಎ.17 ಅಧಿಸೂಚನೆ ಪ್ರಕಟ ಎ.24 ನಾಮಪತ್ರ ಸಲ್ಲಿಕೆಗೆ ಕೊನೆ

ಚುನಾವಣಾ ವೇಳಾ ಪಟ್ಟಿ

ಎ.17 : ಅಧಿಸೂಚನೆ ಪ್ರಕಟ, ನಾಮಪತ್ರ ಆರಂಭ
ಎ.24 : ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.
ಎ.25 : ನಾಮಪತ್ರಗಳ ಪರಿಶೀಲನೆ
ಎ.27 : ನಾಮಪತ್ರ ವಾಪಸ್ ಪಡೆಯಲು ಕೊನೆ
ಮೇ.12 : ಮತದಾನ
ಮೇ.15 : ಮತ ಎಣಿಕೆ – ಫಲಿತಾಂಶ ಘೋಷಣೆ

ಚುನಾವಣಾ ಕಂಟ್ರೋಲ್ ರೂಮ್ ಆರಂಭ
ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ನಂಬರ್- 18004252099 ಅಥವಾ 0824-2420002 ಸಂಖ್ಯೆಯನ್ನು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಬಹುದು.

ಅಭ್ಯರ್ಥಿಗಳಿಗೆ
ರೂ.28  ಲಕ್ಷ ಖರ್ಚು
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಗಳು ರೂ. 28  ಲಕ್ಷ ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಜಾಹೀರಾತು ಪ್ರಕಟಿಸಲು ಅಥವಾ ಪ್ರಸಾರ ಮಾಡುವ ಮೊದಲು ಜಿಲ್ಲಾ ಚುನಾವಣಾಧಿಕಾರಿಯ ನೇತೃತ್ವದ ಸಮಿತಿಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಭಾರೀ ಶಬ್ದದ ಧ್ವನಿ ವರ್ಧಕಗಳನ್ನು ಬಳಸುವಂತಿಲ್ಲ.

ಬೆಳ್ತಂಗಡಿ: ಭಾರೀ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ರಾಜ್ಯ ವಿಧಾನ ಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನ ನಿಗದಿಗೊಳಿಸಿದ್ದು, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸೇರಿದಂತೆ ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮೇ.12 ರಂದು ಚುನಾವಣೆ ನಡೆಸಲು ಪ್ರಕಟಣೆ ಹೊರಡಿಸಿದೆ.
ಅಧಿಸೂಚನೆ ಪ್ರಕಟ: ಎ.17 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು ಅಂದಿನಿಂದಲೇ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಎ.24 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಎ.25 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಎ.27 ನಾಮಪತ್ರಗಳ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿದೆ. ಮೇ.12 ರಂದು ಚುನಾವಣೆ ನಡೆಯಲಿದ್ದು, ಮೇ.15 ರಂದು ಮತ ಎಣಿಕೆ ನಡೆದು ವಿಜೇತ ಅಭ್ಯರ್ಥಿಗಳ ಘೋಷಣೆಯಾಗಲಿದೆ.
ನೀತಿ ಸಂಹಿತೆ ಜಾರಿ:
ಮಾ.27 ರಿಂದಲೇ ರಾಜ್ಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಜನಪ್ರತಿನಿಧಿಗಳು, ಶಾಸಕರು, ಸಚಿವರುಗಳು ಬಳಸುತ್ತಿದ್ದ ಸರಕಾರಿ ವಾಹನವನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಶಾಸಕರ, ಜನಪ್ರತಿನಿಧಿಗಳ ಭಾವಚಿತ್ರ ಅಥವಾ ಪಕ್ಷದ ಚಿಹ್ನೆ ಇರುವ ಬ್ಯಾನರ್ ಫಲಕಗಳನ್ನು ತೆರವುಗೊಳಿಸಲಾಗಿದೆ. ಪತ್ರಿಕೆ, ಟಿ.ವಿ, ವೆಬ್‌ಸೈಟ್‌ಗಳ ಮೇಲೂ ಹದ್ದಿನ ಕಣ್ಣು ಇಟ್ಟಿರುವ ಚುನಾವಣಾ ಆಯೋಗವು ವರದಿ, ಜಾಹೀರಾತು, ಪ್ರಕಟಣೆಯ ಮೇಲೂ ನಿಗಾ ಇರಿಸಿದೆ. `ಪೇಯ್ದ್ ನ್ಯಾಸ್’ ಬಗ್ಗೆ ಕಠಿಣ ಕ್ರಮ ಜಾರಿಗೊಳಿಸುವುದಾಗಿ ಈಗಾಗಲೇ ಆಯೋಗ ತಿಳಿಸಿದೆ. ಮಾತ್ರವಲ್ಲದೆ ಫೇಸ್‌ಬುಕ್, ವಾಟ್ಸಪ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರ ಮಾಡುವುದಕ್ಕೆ ನಿಬಂಧ ವಿಧಿಸಲು ಆಯೋಗ ಸಿದ್ಧತೆ ನಡೆಸಿದೆ. ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು ಯಾವುದೇ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸುವಂತಿಲ್ಲ, ಯಾವುದೇ ಹೊಸ ಯೋಜನೆಗಳನ್ನು ಘೋಷಿಸುವುದು, ಭರವಸೆ ನೀಡುವುದು ಮಾಡುವಂತಿಲ್ಲ.
ಇಲೆಕ್ಟ್ರಾನಿಕ್ ಮತ ಯಂತ್ರ: ಈಗಾಗಲೇ ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಕ್ಷೇತ್ರಕ್ಕೆ ತರಲಾಗಿದೆ. ಅವುಗಳ ಪರಿಶೀಲನೆ ನಡೆಸಲಾಗಿದೆ. ವಿವಿ ಪ್ಯಾಟ್ ಮೆಶಿನ್‌ನಿಂದಾಗಿ ಮತದಾರರು ತಾವು ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಚಲಾಯಿಸಿದ ಮತ ಅರ್ಹ ಅಭ್ಯರ್ಥಿಗೆ ಚಲಾವಣೆಯಾ ಗಿದೆಯೇ ಎಂಬುದನ್ನು ಪೇಪರ್ ಫಾರ್ಮ್ಯಾಟ್‌ನಲ್ಲಿ ಪರಿಶೀಲಿಸುವ ತಂತ್ರ ಇದರಲ್ಲಿದೆ. ಪ್ರತಿಯೊಂದು ಮತಗಟ್ಟೆಯ ಲ್ಲಿಯೂ ಈ ವಿವಿ ಪ್ಯಾಟ್ ಯಂತ್ರವನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಮತದಾನದಲ್ಲಿ ಯಾವುದೇ ರೀತಿಯ ತೊಂದರೆ, ಅಕ್ರಮಗಳಾಗಲು ಸಾಧ್ಯವಿಲ್ಲ. ಮತದಾರರು ಮತ ಚಲಾವಣೆಯ ತಕ್ಷಣ ವಿವಿ ಪ್ಯಾಟ್‌ನ್ನು ಪರಿಶೀಲಿಸಿದಾಗ ತಾವು ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ತಿಳಿಯಬಹುದು. ಯಾವುದಾದರೂ ಆಕ್ಷೇಪಣೆಗಳಿದ್ದರೆ ಆಗಲೇ ಮತಗಟ್ಟೆಯ ಚುನಾವಣಾಧಿಕಾರಿಗಳ ಗಮನಕ್ಕೆ ತರಬಹುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾಹಿತಿ ನೀಡಿದ್ದಾರೆ.
ಬಿರುಸುಗೊಳ್ಳುತ್ತಿರುವ ಚುನಾವಣಾ ಕಣ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ಬಿರುಸುಗೊಳ್ಳುತ್ತಿದೆ. ಈಗಾಗಲೇ ವಿವಿಧ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭಗೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಶಾಸಕ ಕೆ. ವಸಂತ ಬಂಗೇರ ಅವರೇ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಜೊತೆಗೆ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಕೂಡಾ ಅಭ್ಯರ್ಥಿತನಕ್ಕಾಗಿ ಪಕ್ಷದ ಹೈಕಮಾಂಡ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಇದುವರೆಗೆ ಪಕ್ಷದ ಅಧಿಕೃತ ಅಭ್ಯರ್ಥಿ ಯಾರೂ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಬ್ಬರ ಹೆಸರು ಬರುತ್ತಿದ್ದು, ಕಳೆದ ಕೆಲ ಸಮಯಗಳಿಂದ ಚರ್ಚೆಗಳು ನಡೆಯುತ್ತಿದೆ. ಬಿಜೆಪಿಯಲ್ಲಿ ಈ ಹಿಂದೆ ಸ್ಪರ್ಧಿಸಿದ್ದ ರಂಜನ್ ಜಿ. ಗೌಡ ಮತ್ತು ಹರೀಶ್ ಪೂಂಜರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಇವರಿಬ್ಬರ ನಡುವೆ ಟಿಕೇಟ್‌ಗಾಗಿ ಪೈಪೋಟಿ ನಡೆಯುತ್ತಿರುವುದರಿಂದ ಒಬ್ಬರಿಗೆ ಕೊಟ್ಟರೆ ಇನ್ನೊಬ್ಬರಿಗೆ ಅಸಮಾಧಾನ ಆಗಬಹುದು ಎಂಬ ನಿಟ್ಟಿನಲ್ಲಿ ಮೂರನೇ ಅಭ್ಯರ್ಥಿಯ ಹುಡುಕಾಟವೂ ಇನ್ನೊಂದು ಕಡೆಯಿಂದ ನಡೆಯುತ್ತಿದೆ. ಹೀಗಾದಲ್ಲಿ ಮಾಜಿ ಸಚಿವ ಗಂಗಾಧರ ಗೌಡ ಮತ್ತು ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಹೆಸರು ಪ್ರಸ್ತಾಪ ವಾಗುತ್ತಿದ್ದು, ಗಂಗಾಧರ ಗೌಡರ ಕಡೆ ಒಲವು ಹೆಚ್ಚುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಎಸ್‌ಪಿ ಹೊಂದಾಣಿಕೆ ಮಾಡಿದ್ದರಿಂದ ಬೆಳ್ತಂಗಡಿ ಕ್ಷೇತ್ರ ಜೆಡಿಎಸ್‌ಗೆ ಸಿಕ್ಕಿದೆ. ಜೆಡಿಎಸ್‌ನಿಂದ ಪ್ರವೀಣ್ಚಂದ್ರ ಜೈನ್, ಅಡ್ಕಾಡಿ ಜಗನ್ನಾಥ ಗೌಡ ಹಾಗೂ ಸುಳ್ಯದ ಓರ್ವರ ಹೆಸರಿದೆ. ಕ್ಷೇತ್ರದ ಪ್ರತಿ ಚುನಾ ವಣೆಯಲ್ಲಿ ಪಕ್ಷಗಳ ಗಮನ ಸೆಳೆಯುತ್ತಿದ್ದ ಕಮ್ಯೂನಿಸ್ಟ್ ಪಕ್ಷದ ಧ್ವನಿ ಈ ಬಾರಿ ತಾಲೂಕಿನಲ್ಲಿ ಕ್ಷೀಣವಾಗಿದೆ. ಎಸ್.ಡಿ.ಪಿ.ಐ. ಪಕ್ಷದ ನಿರ್ಧಾರ ಇನ್ನೂ ಗೊತ್ತಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.