ಕರ್ನಾಟಕ ಸಿರೋ ಮಲಬಾರ್‌ ಕೆಥೋಲಿಕ್ ಅಸೋಸಿಯೇಶನ್ ಆಡಳಿತ ಕಛೇರಿ ಉದ್ಘಾಟನೆ

ಬೆಳ್ತಂಗಡಿ: ಕರ್ನಾಟಕ ಸಿರೋ ಮಲಬಾರ್ ಕೆಥೋಲಿಕ್ ಅಸೋಸಿಯೇಶನ್ ಆಡಳಿತ ಕಛೇರಿಯನ್ನು ಮಾ.26  ರಂದು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಝಿ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯೆ, ಡಿಸಿಸಿ ಸದಸ್ಯೆ ಶ್ರೀಮತಿ ರೀನಾ ಶಿಬಿ, ಚಿರಾಕುಝಿ ರಬ್ಬರ್ ನರ್ಸರಿಯ ರಿಜಿ ವಿ.ವಿ, ಕೆ.ಎಸ್.ಎಂ.ಸಿ.ಎ ನಿರ್ದೇಶಕ ವಂ. ಪಾ| ಬಿನಾಯ್ ಜೋಸೆಫ್ ಕುರಿಯಾಳಸ್ಸೆರಿ, ಡಿ.ಕೆ.ಆರ್.ಡಿ.ಎಸ್ ನಿರ್ದೇಶಕ ಜೋಸ್ ಆಯಾಂಕುಡಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಸೇವಿಯಾರ್ ಪಾಲೇಲಿ, ಉಪಾಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೆ.ಸಿ, ಜೊತೆ ಕಾರ್ಯದರ್ಶಿ ಬೀನಾ ಅಲೆಕ್ಸ್, ಕೋಶಾಧಿಕಾರಿ ಕೆ.ಎಂ ಪೌಲ್, ಆಡಳಿತ ಮಂಡಳಿಯ ಸದಸ್ಯೆ ಆಲ್ಪೋನ್ಸ ಲಾರೆನ್ಸ್ ಟೋಮಿ, ಜೋಸೆಫ್ ತಿರುಮಲನ್, ಎ.ಜೆ. ಜಾರ್ಜ್, ಹಾಗೂ ಎಲ್ಲಾ ಸೆಂಟ್ರಲ್ ಕಮಿಟಿ ಸದಸ್ಯರು, ತಾಲೂಕು ಕಮಿಟಿ ಸದಸ್ಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.