ತರಬೇತಿಗಳಿಂದ ಮನುಷ್ಯನ ಸ್ಥಾನಮಾನ ಹೆಚ್ಚಳ: ಮುಗುಳಿ ನಾರಾಯಣ ರಾವ್

   

“ಜೀವನ ಕೌಶಲ್ಯ” ತರಬೇತಿ ಶಿಬಿರ ಸಮಾರೋಪ
ಬೆಳ್ತಂಗಡಿ: ತರಬೇತಿಗಳು ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ನಾವು ಮಕ್ಕಳಾಗಿದ್ದಾಗ ನಮಗೇ ಯಾವ ಬಗ್ಗೆಯೂ ಪರಿಜ್ಞಾನ ಇರುವುದಿಲ್ಲ, ಆದರೆ ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಜೀವನ, ಮೌಲ್ಯ, ಕನಸುಗಳು, ಆತ್ಮವಿಶ್ವಾಸ, ನಂಬಿಕೆ, ಸಾಧನೆ ಮಾಡುವ ಪ್ರೇರಣೆ ದೊರೆಯುತ್ತದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಹೇಳಿದರು.
ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ಮತ್ತು ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘ ಮುಂಡಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ಮಹಿಳಾ ವೃಂದ ಕಟ್ಟಡದಲ್ಲಿ ಮಾ. 19  ರಿಂದ 7 ದಿನಗಳವರೆಗೆ ನಡೆದ “ಜೀವ ಕೌಶಲ್ಯ” ತರಬೇತಿ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ್ಸ್   ಅಧ್ಯಕ್ಷ ಲ. ಅಶ್ರಫ್ ಆಲಿಕುಂಞಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅನುಗ್ರಹ ಟ್ರೈನಿಂಗ್ ಕಾಲೇಜು ಪ್ರಾಂಶುಪಾಲ ತಲ್‌ಹತ್ ಎಂ.ಜಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಜೇಸಿ ಕಿರಣ್ ಕುಮಾರ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಕೋರಿದರು.
ಕಾರ್ಯಕ್ರಮ ಸಂಯೋಜಕ ಸಾಂತಪ್ಪ ಕಲ್ಮಂಜ ಸ್ವಾಗತಿಸಿ ಧನ್ಯವಾದವಿತ್ತರು. ಇನ್ನೋರ್ವ ಸಂಘಟಕ ಲೋಹಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.