ಸದೃಢ ಸಮಾಜ ನಿರ್ಮಾಣಕ್ಕೆ ವೀರಕೇಸರಿ ಯುವಕರ ಕೊಡುಗೆ ಅಪಾರ: ಹರೀಶ್ ಪೂಂಜ

Advt_NewsUnder_1
Advt_NewsUnder_1
Advt_NewsUnder_1

ವೀರಕೇಸರಿ ಶಾಖೆ ಕಲ್ಮಂಜ: ಸಾರ್ವಜನಿಕ ಶ್ರೀ ದುರ್ಗಾಪೂಜೆ-ಮ್ಯಾಟ್ ಕಬಡ್ಡಿ ಪಂದ್ಯಾಟ
ಕಲ್ಮಂಜ: ವೀರಕೇಸರಿ ಕಲ್ಮಂಜ ಇದರ ಆಶ್ರಯಲ್ಲಿ ಕಲ್ಮಂಜ ಅಂತರಬೈಲು ಮೂರ್ತಿಲ್ಲಾಯ ದೈವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಹಾಗೂ ಆಹ್ವಾನಿತ ತಂಡಗಳ ಅಂತರ್‌ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವು ಮಾ. 17 ರಂದು ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆ ತುಮಕೂರು ಅನ್ನಪೂರ್ಣ ಹಾಸ್ಪಿಟಾಲಿಟಿ ಸರ್ವೀಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹರೀಶ್ ಶೆಟ್ಟಿ ನೆರವೇರಿಸಿ ವೀರಕೇಸರಿಯ ಕಾರ್ಯಕ್ರಮ ತುಂಬಾ ಶಿಸ್ತುಬದ್ದವಾಗಿದೆ. ಯುವಜನತೆಯಲ್ಲಿ ಸಮಾಜ ಸೇವೆಯ ಮನೋಭಾವವನ್ನು ಸಂಘಟನೆ ಮೂಡಿಸಿದೆ ಎಂದರು.
ಮುಖ್ಯ ಅತಿಥಿ ಜಿಲ್ಲಾ ಬಿ.ಜೆ.ಪಿ. ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಮಾತನಾಡಿ ವೀರಕೇಸರಿ ಕಲ್ಮಂಜದ ಸೇವಾ ಕಾರ್ಯವು ಇಂದು ತಾಲೂಕಿನಾದ್ಯಂತ ಜನಾನು ರಾಗಿಯಾಗಿದೆ. ಯಾವುದೇ ಕಾರ್ಯಸಾಧನೆಯಾಗಬೇಕಾದರೆ ಮಾತೃಶಕ್ತಿಯ ಸಹಕಾರ ಮುಖ್ಯವಾಗಿದೆ. ಆ ಮಾತೃಶಕ್ತಿಯ ಆಶೀರ್ವಾದ ಇಲ್ಲಿ ವೀರಕೇಸರಿ ಸಂಘಟನೆಯ ಮೇಲಿರುವುದು ಇಂತಹ ಉತ್ತಮ ಕಾರ್ಯಕ್ರಮ ನಡೆಸಲು ಸಹಕಾರಿಯಾಗಿದೆ. ಸದೃಢವಾದ ಸಮಾಜ ನಿರ್ಮಾಣಕ್ಕೆ ಕಲ್ಮಂಜ ವೀರಕೇಸರಿ ಶಾಖೆಯ ಕೊಡುಗೆ ಅಪಾರವಾಗಿದೆ. ಈ ಸಂಘಟನೆಯ ಎಲ್ಲಾ ಕಾರ್ಯಕರ್ತರು ನಾನು ಎನ್ನುವ ಭಾವವನ್ನು ತೊರೆದು ನಾವು ನಮ್ಮದು ಎನ್ನುವ ಒಗ್ಗಟ್ಟಿನಿಂದ ಕೆಲಸ ಮಾಡಿದ ಕಾರಣದಿಂದ ಇಂದು ಇಲ್ಲಿ ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಲು ಸಾಧ್ಯವಾಗಿದೆ ಎಂದರು.
ಸಭಾಧ್ಯಕ್ಷತೆಯನ್ನು ನೋಟರಿ ವಕೀಲರಾದ ಗೋಪಾಲಕೃಷ್ಣ ಬಿ. ಗುಲ್ಲೋಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾದ ಪದ್ಯಾಣ ಕೇಶವ ಭಟ್ ಶಾಂತಿವನ ಟ್ರಸ್ಟ್ ಧರ್ಮಸ್ಥಳ, ತಾಲೂಕು ಬಿ.ಜೆ.ಪಿ. ಯುವಮೋರ್ಚಾ ಅಧ್ಯಕ್ಷ ಸಂಪತ್ ಸುವರ್ಣ, ಶ್ರೀಕ್ಷೇತ್ರ ಪಜಿರಡ್ಕದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತುಕಾರಾಮ್ ಸಾಲಿಯಾನ್, ಸಾಮಾಜಿಕ ಕಾರ್ಯಕರ್ತ ಪ್ರಭಾಕರ್ ಸಿ.ಜಿ., ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷ ಬಿ. ಕೃಷ್ಣಪ್ಪ ಗುಡಿಗಾರ್ ಅಲೆಕ್ಕಿ, ಕರ್ನಾಟಕ ರಕ್ಷಣಾ ವೇದಿಕೆ ಬೆಳ್ತಂಗಡಿಯ ಅಧ್ಯಕ್ಷ ಶ್ರೀನಿವಾಸ್ ಗೌಡ, ಪಡ್ಪು ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹರ್ಷೇಂದ್ರ ಕುಮಾರ್, ಉಜಿರೆ ಸಂಪೂರ್ಣ ಟೆಕ್ಸ್‌ಟೈಲ್ಸ್ ಮಾಲಕ ಅನಿಲ್ ಕುಮಾರ್, ಉದ್ಯಮಿಗಳಾದ ಪುಷ್ಪರಾಜ್ ಶೆಟ್ಟಿ, ಧರ್ಮಸ್ಥಳ ಗ್ರಾ.ಪಂ. ಸದಸ್ಯ ಹರೀಶ್ ಸುವರ್ಣ ಕನ್ಯಾಡಿ||, ಉಜಿರೆ ತ್ರಿಶೂಲ್ ಎಲೆಕ್ಟ್ರಾನಿಕ್ಸ್ ಮಾಲಕ ರಾಜೇಶ್, ತಾಲೂಕು ಬಜರಂಗದಳ ಸಹಸಂಚಾಲಕ ಯಶೋಧರ ಬೆಳಾಲು, ವೀರಕೇಸರಿ ಧರ್ಮಸ್ಥಳ ಮಂಡಲ ಸಂಚಾಲಕರ ವರದಾಕ್ಷ ಆಚಾರ್ಯ ಉಪಸ್ಥಿತರಿದ್ದರು. ಗೌರವ ಉಪಸ್ಥಿತರುಗಳಾಗಿ ಶ್ರೀಕ್ಷೇತ್ರ ಪಜಿರಡ್ಕದ ಅರ್ಚಕರಾದ ದಿನೇಶ್ ಭಟ್, ಮಧುರ ಕನ್‌ಸ್ಟ್ರಕ್ಷನ್ ಉಜಿರೆಯ ಶ್ರೀನಿವಾಸ ಗೌಡ, ಕಲ್ಮಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮೀ, ಶ್ರೀ ಗಣೇಶ್ ಪೈಂಟಿಂಗ್ & ಫ್ಲೋರಿಂಗ್ ಗ್ರೂಪ್ಸ್‌ನ ರವಿ ಆರ್ಲ, ಸಿಂಧೂ ಸಿಮೆಂಟ್ ಪ್ರಿ-ಕಾಸ್ಟಿಂಗ್ ವರ್ಕ್ಸ್ ನಿಡಿಗಲ್‌ನ ಪರಮೇಶ್ವರ್, ರಾಘವೇಂದ್ರ ಗೌಡ ಉಂಕ್ರೊಟ್ಟು, ಸುನಿಲ್ ಹೊಸಹೊಕ್ಲು, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ. ಸದಸ್ಯ ಶಶಿಧರ್ ಎಂ., ಉದ್ಯಮಿ ಸುರೇಂದ್ರ ಕುಡ್ವ, ಧರ್ಮಸ್ಥಳ ಗ್ರಾ.ಪಂ. ಸದಸ್ಯ ಸುಧಾಕರ ಗೌಡ, ಸಿವಿಲ್ ಕಂಟ್ರಾಕ್ಟರ್ ವಿಶ್ವನಾಥ ಶೆಟ್ಟಿಗಾರ್, ಸಿಂಧೂ ಇಲೆಕ್ಟ್ರಿಕಲ್ಸ್‌ನ ಯತೀಶ್ ಸುವರ್ಣ, ಉದ್ಯಮಿ ಪ್ರಭಾಕರ್ ಗೌಡ ಬಜಿಲ, ಬೆಳಾಲು ಗ್ರಾ.ಪಂ.ಸದಸ್ಯ ದಾಮೋದರ ಗೌಡ ಸುರುಳಿ, ಕಲ್ಮಂಜ ಗ್ರಾ.ಪಂ. ಉಪಾಧ್ಯಕ್ಷ ದಿನೇಶ್ ಗೌಡ, ಓಂಕಾರೇಶ್ವರ ಭಜನಾ ಮಂಡಳಿ ಸಂಚಾಲಕ ರಾಜೇಶ್ ಎಂ.ಕೆ. ಪಜಿರಡ್ಕ, ರಾಮ್‌ಪ್ರಸಾದ್ ಮರೋಡಿ ಸಂಚಾಲಕರು ಭಜರಂಗದಳ ವೇಣೂರು ಪ್ರಖಂಡ, ಸುದರ್ಶನ್ ಕೆ.ವಿ ಕನ್ಯಾಡಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಅಧ್ಯಕ್ಷರಾದ ಸತ್ಯನಾರಾಯಣ ಗುಡಿಗಾರ್, ಗೌರವಾಧ್ಯಕ್ಷರಾದ ರವಿ ಭಟ್, ಕೋಶಾಧಿಕಾರಿ ಹರ್ಷಲ್ ಹೆಗ್ಡೆ, ಸುರೇಂದ್ರ ಊಂಕ್ರೊಟ್ಟು ಹಾಗೂ ವೀರಕೇಸರಿಯ ಸಂಚಾಲಕರು ಮತ್ತು ಸರ್ವ ಸದಸ್ಯರು ಸಂಪೂರ್ಣ ಸಹಕಾರ ನೀಡಿದರು. ವಿಜಯ ಕುಲಾಲ್ ಸ್ವಾಗತಿಸಿದರು, ಕಾರ್ಯದರ್ಶಿ ಚೇತನ್ ಗುಡಿಗಾರ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.