ಮಧ್ಯವರ್ತಿಗಳ ಮೋಸಕ್ಕೆ ಬಲಿ ಬೀಳಬೇಡಿ: ಬಂಗೇರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಹಕ್ಕುಪತ್ರ ವಿತರಣೆ- ಅಹವಾಲು ಸ್ವೀಕಾರ
ಮನೆಗಳ ಗ್ರಾ.ಪಂ ಹಂಚಿಕೆ- ಹಕ್ಕುಪತ್ರ ಸಿಕ್ಕಿದವರಿಗೆ ಆದ್ಯತೆ
ಬೆಳ್ತಂಗಡಿ ತಾಲೂಕಿಗೆ ಈಗಾಗಲೇ ಬಂದ 1 ಸಾವಿರ ಮನೆಗಳನ್ನು ಗ್ರಾ.ಪಂ ವಾರು ಹಂಚಿಕೆ ಮಾಡಲಾಗಿದೆ. ಮತ್ತೆ 1018 ಮನೆಗಳು ಮಂಜೂರುಗೊಂಡಿದೆ ಇನ್ನೂ 500 ಮನೆಗಳು ಬರಲಿದೆ. ಇದನ್ನು ಹೇಗೆ? ವಿತರಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಅದರ ಪ್ರಕಾರ ವಿತರಣೆ ಮಾಡಬೇಕು. ಅದರಲ್ಲಿಯೂ ಮುಖ್ಯವಾಗಿ ಈಗಾಗಲೇ ಹಕ್ಕುಪತ್ರ ಪಡೆದುಕೊಂಡವರಿಗೆ ಮೊದಲ ಆದ್ಯತೆಯಲ್ಲಿ ನೀಡಬೇಕು. – ಶಾಸಕ ಕೆ. ವಸಂತ ಬಂಗೇರ

38 ಸಾವಿರ ಅರ್ಜಿಗಳ ವಿಲೇ
ಅಕ್ರಮ ಸಕ್ರಮದಲ್ಲಿ ತಾಲೂಕಿನಲ್ಲಿ 42 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ. ಈಗಾಗಲೇ 38 ಸಾವಿರ ಅರ್ಜಿಗಳ ವಿಲೇವಾರಿ ನಡೆದು ಹಕ್ಕುಪತ್ರ ವಿತರಿಸಿದ್ದೇನೆ. ಇನ್ನೂ 4 ಸಾವಿರ ಅರ್ಜಿಗಳು ಬಾಕಿಯಾಗಿದೆ. ಚುನಾವಣೆಗೆ ಮೊದಲು ಎಲ್ಲಾ ಅರ್ಜಿಗಳ ವಿಲೇ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ನಾನು 9 ವರ್ಷ 10 ತಿಂಗಳು ಅಕ್ರಮ-ಸಕ್ರಮದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದು, ಅತೀ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ್ದೇನೆ ಎಂದು ಶಾಸಕರು ಈ ಸಂದರ್ಭ ನುಡಿದರು.ಮಾ.

22 ಮತ್ತೆ ಬೈಠಕ್
ಮಾ.22 ರಂದು ಬೆಳ್ತಂಗಡಿ ನಗರ ಪಂಚಾಯತು ಸಭಾಂಗಣದಲ್ಲಿ ಮತ್ತೆ ಅಕ್ರಮ-ಸಕ್ರಮ ಬೈಠಕ್ ನಡೆಯಲಿದೆ. ಈಗಾಗಲೇ ಕಂದಾಯ ಇಲಾಖೆಯಲ್ಲಿ ಉಳಿಕೆಯಾಗಿರುವ ಅರ್ಜಿಗಳ ವಿಲೇ ಈ ದಿನ ನಡೆಯಲಿದೆ. ಅರ್ಜಿ ಸಲ್ಲಿಸಿದ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹದು.

ಬೆಳ್ತಂಗಡಿ : ಮಿನಿ ವಿಧಾನ ಸೌಧ ಉದ್ಘಾಟನೆಗೊಂಡರೂ ತಹಶೀಲ್ದಾರ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಅಲ್ಲೇ ಇದ್ದಾರೆ. ಇಲ್ಲಿ ಮಧ್ಯವರ್ತಿಗಳ ಹಾವಳಿ ವಿಪರಿತವಾಗಿದ್ದು, ಹಕ್ಕುಪತ್ರಕ್ಕಾಗಿ ಬಡವರಿಂದ ರೂ.40, ರೂ.50 ಸಾವಿರ ವಸೂಲು ಮಾಡುತ್ತಿರುವ ದೂರು ಬರುತ್ತಿದೆ. ನೀವು ಯಾರಿಗೂ ಲಂಚ ನೀಡಬೇಕಾದ ಅಗತ್ಯವಿಲ್ಲ. ಎಲ್ಲರಿಗೂ ಹಕ್ಕುಪತ್ರ ಕೊಡಿಸುವುದು ನನ್ನ ಜವಾಬ್ದಾರಿ ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು.
ಅವರು ಮಾ.17 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಸಭಾ ಭವನದಲ್ಲಿ ನಡೆದ ಅಕ್ರಮ-ಸಕ್ರಮ ಬೈಠಕ್‌ಗೆ ಮೊದಲು ಸಾರ್ವಜನಿಕರಿಗೆ ಹಕ್ಕುಪತ್ರ ವಿತರಣೆ, ಅಕ್ರಮ-ಸಕ್ರಮ, 94ಸಿ, 94ಸಿಸಿಯಲ್ಲಿ ಜನರಿಗೆ ಆಗುತ್ತಿರುವ ಸಮಸ್ಯೆಗಳ ಅಹವಾಲು ಸ್ವೀಕರಿಸಿ ಮಾತನಾಡಿದರು.
ಇಂದು 81 ಗ್ರಾಮಗಳ ಜನರಿಗೆ ಹಕ್ಕುಪತ್ರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಕೆಲವೊಂದು ಗ್ರಾಮಗಳಿಂದ ಫಲಾನುಭವಿಗಳು ಬಂದಿಲ್ಲ, ಅವರಿಗೆ ನಂತರದ ದಿನಗಳಲ್ಲಿ ನಾನೇ ವಿತರಣೆ ಮಾಡಲಿದ್ದೇನೆ ಎಂದ ಶಾಸಕರು ಕಳೆದ 60 ವರ್ಷಗಳಿಂದ ಜಾಗವನ್ನು ಹೊಂದಿ ವ್ಯಾಸ್ತವ್ಯವಿದ್ದರಿಗೆ ಅವರ ಜಾಗದ ಹಕ್ಕುಪತ್ರ ನೀಡುವ ಯೋಜನೆಯನ್ನು ಸರಕಾರ ಜಾರಿ ಮಾಡಿದೆ. ಇದು ಬಡವರಿಗೆ ಸರಕಾರ ಕೊಟ್ಟ ವರದಾನವಾಗಿದೆ. ಈಗಾಗಲೇ 21  ಸಾವಿರ ಮಂದಿಗೆ ಹಕ್ಕುಪತ್ರ ನೀಡಿದ್ದೇನೆ. 94ಸಿ, 94ಸಿಸಿಯಲ್ಲಿ ಕುಮ್ಕಿ, ಗೋಮಾಳ, ಪರಂಬೋಕನ್ನು ಮಂಜೂರಾತಿ ಮಾಡಬಹುದು. ಇನ್ನೂ ತಾಲೂಕಿನಲ್ಲಿ 4 ಸಾವಿರ ಅರ್ಜಿಗಳಿದ್ದು, ಇದನ್ನು ಶೀಘ್ರವಾಗಿ ವಿಲೇ ಮಾಡಲಾಗುವುದು ಎಂದು ತಿಳಿಸಿದರು.
ಜನಸಂದಣಿ: ಹಕ್ಕುಪತ್ರ ಪಡೆಯಲು ಮತ್ತು ಶಾಸಕರಿಗೆ ಅಹವಾಲು ಸಲ್ಲಿಸಲು ಭಾರೀ ಸಂಖ್ಯೆಯಲ್ಲಿ ವಿವಿಧ ಗ್ರಾಮಗಳಿಂದ ಜನರು ಆಗಮಿಸಿದ್ದರು. ಸಭಾಂಗಣ ಪೂರ್ತಿ ಕಿಕ್ಕಿರಿದು ತುಂಬಿ ಹೊರಗಡೆಯೂ ಜನರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು. ಹಕ್ಕುಪತ್ರ ಗ್ರಾಮವಾರು ವಿತರಣೆ ಬಳಿಕ, ಶಾಸಕರು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಂಡರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಣ್ಣರಂಗಯ್ಯ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಬಸವರಾಜ್, ಜಿ.ಪಂ ಸದಸ್ಯರಾದ ಕೆ.ಕೆ ಶಾಹುಲ್ ಹಮೀದ್, ಶೇಖರ ಕುಕ್ಕೇಡಿ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಸದಸ್ಯರಾದ ಗೋಪಿನಾಥ ನಾಯಕ್, ಪ್ರವೀಣ್ , ಕೃಷ್ಣಯ್ಯ ಆಚಾರ್ಯ, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರಾಜಶೇಖರ ಅಜ್ರಿ, ನಾಗರಾಜ್ ನಾಯ್ಕ ಮುಂಡಾಜೆ, ಉಮಾವತಿ, ಜಿ.ಪಂ ಮಾಜಿ ಸದಸ್ಯ ಸುಂದರ ಗೌಡ ಇಚ್ಚಿಲ, ಉಷಾ ಶರತ್‌ಕುಮಾರ್, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು, ಫಲಾನುಭವಿಗಳು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.