ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಜಾತ್ರೋತ್ಸವ

Advt_NewsUnder_1
Advt_NewsUnder_1
Advt_NewsUnder_1

 ಮಾ.17 ರಂದು ವರ್ಷಾವಧಿ ಜಾತ್ರೋತ್ಸವ, ಮಧ್ಯಾಹ್ನ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ, ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ಮಾ.18 ರಂದು ಧಾರ್ಮಿಕ ಸಭೆಯ ಬಳಿಕ ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ, ರಾತ್ರಿ ಸ್ವಾತಿ ಮ್ಯೂಸಿಕಲ್ಸ್ ಕಾರ್ಯಾನ ಉಡುಪಿ ಮತ್ತು ದ.ಕ ಜಿಲ್ಲಾ ದೂರದರ್ಶನ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಪೆರಿಂಜೆ: ಹಬ್ಬ, ಹರಿದಿನಗಳು, ನಮ್ಮ ಆಚರಣೆಗಳಲ್ಲಿ ಭಕ್ತಿಯ ವಿಷಯವನ್ನು ಪ್ರತಿಷ್ಠೆಯಾಗಿ ಮಾರ್ಪಡಿಸಿ, ಆಧುನಿಕತೆಯ ಹೆಸರಿನಲ್ಲಿ ನಮ್ಮ ಸಂಸ್ಕೃತಿ, ಜೀವನ ಮೌಲ್ಯಗಳು ವಿನಾಶದಂಚಿಗೆ ತಲುಪುತ್ತಿವೆ ಇದರ ಬಗ್ಗೆ ನಾವೆಲ್ಲ ಜಾಗೃತರಾಗಬೇಕಾದ ಅಗತ್ಯವಿದೆ ಎಂದು ಆಳ್ವಾಸ್ ಕಾಲೇಜು ಮೂಡಬಿದ್ರೆಯ ಉಪನ್ಯಾಸಕಿ ಡಾ| ಮೌಲ್ಯ ಜೀವನ್ ಹೇಳಿದರು.
ಅವರು ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನ ಪೆರಿಂಜೆ ಇದರ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಮಾ.19 ರಂದು ನಡೆದ ಧಾರ್ಮಿಕ ಸಭೆಯಲ್ಲಿ `ಜನಸಾಮಾನ್ಯರು ಮತ್ತು ಧಾರ್ಮಿಕ ನಂಬಿಕೆಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಕಾಲ ಬದಲಾದ ಹಾಗೆ ನಮ್ಮ ಸಮಾಜ, ಧರ್ಮ, ಪ್ರಕೃತಿಯಲ್ಲೂ ಹಲವು ಬದಲಾವಣೆಗಳಾಗುತ್ತಿದೆ. ನಮ್ಮ ಹಿರಿಯರು ಪ್ರಕೃತಿ ಪೂಜೆ, ಭತ್ತದ ಪೂಜೆ, ತುಳಸಿ ಪೂಜೆ ಮಾಡುತ್ತಿದ್ದರು. ಇದೆಲ್ಲವೂ ಪ್ರಕೃತಿ ಪೂಜೆಯಾಗಿತ್ತು. ಇದರಿಂದ ಪ್ರಕೃತಿ ಉಳಿದಿತ್ತು. ಇಂದು ಪ್ರಕೃತಿ ಉಳಿವಿಗಾಗಿ ನಾವು ಹೋರಾಟ, ಪ್ರತಿಭಟನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ನಂಬಿಕೆಗಳೆಲ್ಲ ಮೂಢ ನಂಬಿಕೆಗಳಲ್ಲ, ಉಪವಾಸ ನಮ್ಮ ದೇಹದ ಸಮತೋಲನಕ್ಕೆ ಸೂಕ್ತ ಮಾರ್ಗ, ನಮ್ಮ ಆಚರಣೆಗಳಲ್ಲಿ ವೈಜ್ಞಾನಿಕ ಸತ್ಯವಿದೆ. ಒಂದು ಕಡೆಯಲ್ಲಿ ಭಕ್ತಿಯ ದುರುಪಯೋಗವೂ ನಡೆಯುತ್ತಿದೆ. ನಾಗನಿಗೆ ಸಿಮೆಂಟ್ ಕಟ್ಟೆ ಕಟ್ಟಿ ನಾಗರ ಹಾವೂ ವಾಸಿಸದ ಹಾಗೆ ಮಾಡಿದ್ದೇವೆ. ಇಂದಿನ ಮೋಡರ್ನ್
ದೇವಸ್ಥಾನಗಳಲ್ಲಿ ದೇವರ ಮೂರ್ತಿ ವಸ್ತುಪ್ರದರ್ಶನದಲ್ಲಿ ಇಟ್ಟಂತೆ ಕಾಣುತ್ತದೆ ಯಾವ ಭಕ್ತಿಯೂ ಉಂಟಾಗುವುದಿಲ್ಲ. ಆಧುನಿಕತೆಯ ಹೆಸರಿನಲ್ಲಿ ನಮ್ಮ ಸಂಸ್ಕೃತಿ, ಆಚರಣೆಗಳು ವಿನಾಶಕ್ಕೆ ತಲುಪದಂತೆ ಎಚ್ಚರಿಕೆ ಅಗತ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಮಾತನಾಡಿ ತೌಳವ ಜನಾಂಗ ಯಾವುದೇ ಭಾಷೆ, ಸಂಸ್ಕೃತಿ, ಧರ್ಮ, ನಡವಳಿಕೆಯನ್ನು ಸ್ವೀಕರಿಸುವ ಸಂಸ್ಕೃತಿ ನಮ್ಮದು. ಯಾವ ದೇಶಕ್ಕೆ ಹೋದರೂ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದೇವೆ. ನಮ್ಮ ಮನೋಭೂಮಿಕೆ, ಮನೋ ಚಿಂತನೆ ಹಾಳಾಗಿದೆಯೇ ಹೊರತು ಜನ ಹಾಗೂ ಊರು ಹಾಳಾಗಿಲ್ಲ. ನಮ್ಮ ಸಂಸ್ಕೃತಿ, ಬದುಕು, ಪರಂಪರೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು ಎಂದು ತಿಳಿಸಿದರು.
ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ ಪಡ್ಡ್ಯಾರಬೆಟ್ಟ ದೈವಸ್ಥಾನ ಬಹಳಷ್ಟು ಅಭಿವೃದ್ಧಿಯಾಗಿದೆ. ದೈವಸ್ಥಾನದ ಅನುವಂಶೀಯ ಆಡಳಿತದಾರ ಜೀವಂಧರ್ ಕುಮಾರ್ ಅವರ ನೇತೃತ್ವದಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ ಸೇರಿದಂತೆ ಅನೇಕ ಸಮಾಜಮುಖಿ ಚಟುವಟಿಕೆಗಳು ನಡೆಯುತ್ತಿದೆ. ಇಲ್ಲಿಯ ಕಟ್ಟುಕಟ್ಟಳೆಯನ್ನು ಅವರು ಉಳಿಸುತ್ತಾ ಬಂದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜೈನ್ ಮಿಲನ್ ವಲಯ-೮ರ ಉಪಾಧ್ಯಕ್ಷ ಪುಷ್ಪರಾಜ ಜೈನ್ ಅವರು ಇದೊಂದು ಜಿಲ್ಲೆಯ ಕಾರಣಿಕ ಹಾಗೂ ಪುಣ್ಯ ಕ್ಷೇತ್ರವಾಗಿದ್ದು, ಇಲ್ಲಿಯ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ಜೀವಂಧರ ಕುಮಾರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ರಾಜಗುತ್ತಿನ ಡಾ| ಶ್ರೀಧರ ಕಂಬಳಿ ಉಪಸ್ಥಿತರಿದ್ದರು. ದೈವಸ್ಥಾನದ ಪ್ರಧಾನ ಅರ್ಚಕ ರಾಮದಾಸ ಅಸ್ರಣ್ಣ ಇವರ ಪ್ರಾರ್ಥನೆ ಬಳಿಕ ಅನುವಂಶೀಯ ಆಡಳಿತದಾರ ಎ. ಜೀವಂಧರ ಕುಮಾರ್ ಯಾನೆ ಕಂಚಿ ಪೂವಣಿ ಪಡ್ಡ್ಯೋಡಿಗುತ್ತು ಸ್ವಾಗತಿಸಿದರು. ಮಹಾವೀರ ಕಾರ್ಯಕ್ರಮ ನಿರೂಪಿಸಿ, ಉದ್ಯಮಿ ವಿಕಾಸ್ ಜೈನ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.