ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ 58 ನೇ ವರ್ಷದ ಶ್ರೀರಾಮ ನಾಮ ಸಪ್ತಾಹ ಪ್ರತಿಷ್ಠಾ ಜಾತ್ರಾ ಮಹೋತ್ಸವ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ : ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನ ನಿತ್ಯಾನಂದ ನಗರ ಇಲ್ಲಿ 58 ನೇ ವರ್ಷದ ಶ್ರೀರಾಮ ತಾರಕ ಮಂತ್ರ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವ ಮಾ.18 ರಂದು ಕ್ಷೇತ್ರದ ನಿರ್ಮಾತೃ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಕ್ಷೇತ್ರದ ಮಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ವೇ| ಮೂ| ಲಕ್ಷ್ಮೀಪತಿ ಗೋಪಾಲಾಚಾರ್ಯರ ವೈದಿಕ ವಿಧಿ ವಿಧಾನಗಳೊಂದಿಗೆ ಉದ್ಘಾಟನೆಗೊಂಡಿತು.
ಬೆಳ್ತಂಗಡಿ ಕ್ಷೇತ್ರದ ಶಾಸಕ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ.ವಸಂತ ಬಂಗೇರ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಶ್ರೀ ರಾಮ ಜಯರಾಮ ಜಯಜಯರಾಮ ತಾರಕ ನಾಮೋಚ್ಛಾರಣೆಯ ಮೂಲಕ ಚಾಲನೆ ನೀಡಿದರು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಜಿ.ಪಂ ಸದಸ್ಯ ಕೊರಗಪ್ಪ ನಾಕ, ಭಾ.ಜ.ಪ ಜಿಲ್ಲಾ ಮುಖಂಡ ವಕೀಲ ಕೆ.ಪ್ರತಾಪಸಿಂಹ ನಾಯಕ್, ಬಿಲ್ಲವ ಮಹಿಳಾ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಶ್ರೀಮತಿ ಸುಜಿತಾ ವಿ. ಬಂಗೇರ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ ಜಿ.ಪಂ ಮಾಜಿ ಸದಸ್ಯ ಕೆ.ಶೈಲೇಶ್ ಕುಮಾರ್, ಶ್ರೀ ಧ.ಮಂ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೊಲ್ಪಾಡಿತ್ತಾಯ, ವಿಟ್ಲದ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಬಿಜೆಪಿ ತಾಲೂಕು ಅಧ್ಯಕ್ಷ ರಂಜನ್ ಜಿ.ಗೌಡ, ಮಂಗಳೂರಿನ ಹಿರಿಯ ವಾಹನ ನಿರೀಕ್ಷಕ ಚರಣ್ ಕುಮಾರ್, ಟ್ರಸ್ಟಿ ಮೋಹನ್ ಉಜ್ಜೋಡಿ, ಶ್ರೀರಾಮ ಕ್ಷೇತ್ರ ಸಮಿತಿ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಗುರುದೇವ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ, ಬ್ಲಾಕ್ ಕಾಂಗ್ರೇಸ್‌ನ ಪ್ರಧಾನ ಕಾರ್ಯದರ್ಶಿ ಗ್ರೇಸಿಯನ್ ವೇಗಸ್, ಧರ್ಮಸ್ಥಳ ಗ್ರಾ.ಪಂ. ಪಿಡಿಓ ಉಮೇಶ್ ಕೆ., ಅನಂತರಾವ್ ಚಾರ್ಮಡಿ, ಶ್ರೀ ರಾಮಕ್ಷೇತ್ರ ಬಂಟ್ವಾಳ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಭಗೀರಥ ಜಿ, ರವೀಂದ್ರ ಪೂಜಾರಿ ಆರ್ಲ, ಗ್ರಾ,ಪಂ ಸದಸ್ಯರಾದ ಹರೀಶ್ ಸುವರ್ಣ ಕನ್ಯಾಡಿ, ರವಿಕುಮಾರ್ ಬರೆಮೇಲು, ಡಿ.ಪ್ರಭಾಕರ ಪೂಜಾರಿ, ಟೆಲಿಕಾಂ ಎಸ್‌ಡಿಇ ಅಣ್ಣಿ ಪೂಜಾರಿ, ಜಯರಾಮ ಬಂಗೇರ, ಟ್ರಸ್ಟಿ ತುಕರಾಮ ಸಾಲಿಯಾನ್, ಶೇಖರ ಬಂಗೇರ ಹೇರಾಜೆ, ಪುರುಷೋತ್ತಮ ಧರ್ಮಸ್ಥಳ, ಕೃಷ್ಣಪ್ಪ ಗುಡಿಗಾರ್, ಯುವ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷ ವಸಂತ ಪೂಜಾರಿ ಪುದುವೆಟ್ಟು, ಚಿದಾನಂದ ಇಡ್ಯಾ, ಶ್ರೀಮತಿ ಸುಜಾತಾ ಅಣ್ಣಿ ಪೂಜಾರಿ, ಶ್ರೀಮತಿ ಸುಕನ್ಯಾ ಭಗೀರಥ, ಎಪಿಎಂಸಿ ಸದಸ್ಯ ಪಲ್ಲವಿರಾಜ್, ಶ್ರೀ ರಾಮಕ್ಷೇತ್ರ ರಥಬೀದಿ ವ್ಯಾಪಾರಸ್ಥರು, ಆತ್ಮಾನಂದ ಸರಸ್ವತಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾ.18 ರಿಂದ ಮಾ.25 ರವರೆಗೆ ಪ್ರತಿಷ್ಠಾ ಜಾತ್ರಾ ಮಹೋತ್ಸವ ನಡಯಲಿದ್ದು, ರಥೋತ್ಸವ ಮಾ. 21 ರಿಂದ ೫ದಿನ ಪುಪ್ಪ ರಥೋತ್ಸವ, ಚಂದ್ರ ಮಂಡಲ ರಥೋತ್ಸವ, ಬೆಳ್ಳಿ ರಥೋತ್ಸವ, ಶ್ರೀ ಹನುಮಾನ್ ರಥೋತ್ಸವ ನಡೆಯಲಿದ್ದು, ಮಾ.25 ರಂದು ಮಹಾಬ್ರಹ್ಮ ರಥೋತ್ಸವ ಮತ್ತು ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಮಾ.27 ರಂದು ಶ್ರೀ ಗುರುದೇವ ಮಠದ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಹಾಗೂ ನೇಮೋತ್ಸವ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.