ಪಿಯುಸಿ ಪ್ರಶ್ನೆಪತ್ರಿಕೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ಬೆಳ್ತಂಗಡಿ ಬಿಇಒ ಗುರುಪ್ರಸಾದ್ ಸಸ್ಪೆಂಡ್

ಗುರುಪ್ರಸಾದ್ ಎ.ಎನ್.

ಬೆಳ್ತಂಗಡಿ : ಮಾ. 1 ರಿಂದ 2ರ ಮಧ್ಯೆ ನಡೆದ ಪಿಯುಸಿ ಪರೀಕ್ಷೆಯ ಒಟ್ಟು 5 ಪರೀಕ್ಷಾ ದಿನಗಳಲ್ಲಿ ಪ್ರಶ್ನೆ ಪತ್ರಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ತ್ರಿಸದಸ್ಯ ಅಧಿಕಾರಿಗಳ ಸಮಿತಿಯಲ್ಲಿ ಕರ್ತವ್ಯ ಲೋಪವೆಸಗಿದ ಕಾರಣಕ್ಕಾಗಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಗುರುಪ್ರಸಾದ್ ಎ.ಎನ್. ಅವರನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಡಿ ನಾಗೇಂದ್ರ ಆದೇಶ ನೀಡಿದ್ದಾರೆ.
ಪಿಯುಸಿ ಪರೀಕ್ಷಾ ದಿನಗಳಲ್ಲಿ ಮಂಗಳೂರು ಭದ್ರತಾ ಕೊಠಡಿಯಿಂದ(ಖಜಾನೆ) ಪ್ರಶ್ನೆಪತ್ರಿಕೆ ಪಡೆದು ಪೊಲೀಸ್ ಭದ್ರತೆಯೊಂದಿಗೆ ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಬೇಕಾದ ಜವಾಬ್ಧಾರಿಯುತ ತ್ರಿಸದಸ್ಯ ನಿಯೋಜಿತ ಅಧಿಕಾರಿಗಳಾದ ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ, ತಹಶೀಲ್ದಾರ್ ಜೊತೆಗೆ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಬಿಇಒ ಗುರುಪ್ರಸಾದ್ ಅವರು ಒಟ್ಟು 5 ಪರೀಕ್ಷಾ ದಿನಗಳಲ್ಲಿ
3 ದಿನ ಗೈರುಹಾಜರಾಗಿದ್ದರು. ಕಳೆದ ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಮರುಪರೀಕ್ಷೆ ನಡೆಸಬೇಕಾಗಿ ಬಂದುದಲ್ಲದೆ ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಲೆತಗ್ಗಿಸುವಂತಹಾ ವಾತಾವರಣ ಏರ್ಪಟ್ಟಿದ್ದ ಕಾರಣದಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಮತ್ತು ಪ.ಪೂ. ನಿರ್ದೇಶಕರ ಪತ್ರದಂತೆ ಮೇಲಾಧಿಕಾರಿಗಳಿಂದ ಈ ಶಿಸ್ತುಕ್ರಮ ಜರುಗಿದೆ. ಸರಕಾರಿ ಕರ್ತವ್ಯದಲ್ಲಿ ವಿನಾಕಾರಣ ನಿರ್ಲಕ್ಷ್ಯ, ನಿರಾಸಕ್ತಿ, ಕರ್ತವ್ಯಲೋಪ, ಸರಕಾರಿ ನೌಕರರಿಗೆ ತರವಲ್ಲದ ರೀತಿ ನಡೆದುಕೊಂಡಿರುವುದಕ್ಕಾಗಿ ಈ ಕ್ರಮ ಎಂದು ಪತ್ರದಲ್ಲಿ ಉಲ್ಲೇಖವಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.