ತ್ರಿಗುಣಾತ್ಮಿಕ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕಾವು ಕೌಕ್ರಾಡಿಯಲ್ಲಿ ಧಾರ್ಮಿಕ ಸಭೆ

ಕೌಕ್ರಾಡಿ: ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಾವು, ಕೌಕ್ರಾಡಿ ಇಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಧಾರ್ಮಿಕ ಸಭೆಯು ಮಾ.19 ರಂದು ಜರುಗಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ದೇವಸ್ಥಾನದ ಜೀರ್ಣೊದ್ಧಾರ ಸಮಿತಿ ಟ್ರಸ್ಟ್ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ವಹಿಸಿದ್ದರು. ಉಜಿರೆ ದಂತ ವೈದ್ಯಾಧಿಕಾರಿ ಡಾ| ಎಂ.ಎಂ. ದಯಾಕರ್ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ಶಾಸಕ ಎಸ್.ಅಂಗಾರ, ಬೆಂಗಳೂರು ಮಹಾಲಕ್ಷ್ಮಿ ನರಸಿಂಹ ಇಲೆಕ್ಟ್ರಿಕಲ್ಸ್‌ನ ಯನ್. ಸುರೇಶ್, ಮಂಗಳೂರು ಚಲನಚಿತ್ರ ನಿರ್ಮಾಪಕರಾದ ಚಂದ್ರಹಾಸ ಶೆಟ್ಟಿ ಪಿಲತ್ತಡ್ಕ ಆಗಮಿಸಿದ್ದರು. ವೇದಿಕೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಉಪ್ಪಿನಂಗಡಿ ರಾಜ್ ಬೋರ್‌ವೆಲ್ಸ್ ನ ಕೃಷ್ಣರಾಜ್, ಕೌಕ್ರಾಡಿ ಗ್ರಾ.ಪಂ ಸದಸ್ಯರಾದ ಶ್ರೀಮತಿ ವಿಮಲ, ಚೆನ್ನಪ್ಪ ಪೂಜಾರಿ, ಭಾರತೀಯ ಜೀವ ವಿಮಾ ನಿಗಮದ ಅಭಿವೃಧ್ದಿ ಅಧಿಕಾರಿ ಉದಯ ಶಂಕರ್ ಅರಸಿನಮಕ್ಕಿ , ಜೀರ್ಣೋದ್ಧಾರ ಸಮಿತಿ ಟ್ರಸ್ಟ್ ನ ಪ್ರಧಾನ ಸಲಹೆಗಾರ ಎನ್. ಈಶ್ವರ್ ಭಟ್ ಕೊಡೆಂಕಿರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ  ಪಿ. ಕುಶಾಲಪ್ಪ ಗೌಡ ಪೂವಾಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.