ಕೃಪಾ ಮತ್ತು ದೀಪಾ ಫಡ್ಕೆ ಸಹೋದರಿಯರಿಗೆ ಪಿ.ಎಚ್.ಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಸಂಗೀತಾ ಮತ್ತು ಭಾಷಾ ವಿಜ್ಞಾನ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕು ಲಾಲ ಗ್ರಾಮದ ಬಜಕ್ರೆಸಾಲ್ ಮೂಲದ ಕೃಪಾ ಮತ್ತು ದೀಪಾ ಫಡ್ಕೆ ಸಹೋದರಿಯರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ಪ್ರಾಪ್ತವಾಗಿದೆ. ಮಾ.12 ರಂದು ವಿವಿ ಯಲ್ಲಿ ನಡೆದ 98 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಇಬ್ಬರಿಗೂ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ಕೃಪಾ ಫಡ್ಕೆ ಅವರು ಸಂಗೀತ ವಿಭಾಗದಲ್ಲಿ ಸಂತ ನಾರಾಯಣ ತೀರ್ಥರ ಕೃಷ್ಣಲೀಲಾ ತರಂಗಿಣಿ ಒಂದು ಅಧ್ಯಯನ ವಿಷಯದಲ್ಲಿ, ಹಾಗೂ ದೀಪಾ ಫಡ್ಕೆ ಅವರು ಕನ್ನಡ ಭಾಷಾ ವಿಜ್ಞಾನ ವಿಭಾಗದಲ್ಲಿ ಕನಕ ಪುರಂದರರ ಕೀರ್ತನೆ ಮನೋವೈಜ್ಞಾನಿಕ ಅಧ್ಯಯನ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಈ ಪಿಎಚ್.ಡಿ ಗಳು ಲಭಿಸಿವೆ. ಇವರು ಗಂಗಾಧರ ಫಡ್ಕೆ ಮತ್ತು ಉಮಾ ಜಿ ಫಡ್ಕೆ ದಂಪತಿ ಪುತ್ರಿಯರಾಗಿದ್ದು, ಬಜಕ್ರೆಸಾಲ್ ದಿವಾಕರ ಫಡ್ಕೆ (ಚಿನ್ನು) ಅವರ ಸಹೋದರಿಯರಾಗಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.