ಕಡಿರುದ್ಯಾವರ ನಿವಾಸಿ ಸಬರಬೈಲ್ ಅನಂತ ನಾಯಕ್ ನಿಧನ

ಕಡಿರುದ್ಯಾವರ ನಿವಾಸಿ ಸಬರಬೈಲ್ ಅನಂತ ನಾಯಕ್ (65) ರವರು ಇಂದು ಬೆಳಿಗ್ಗೆ 9:15 ರ ಸುಮಾರಿಗೆ ಮಣಿಪಾಲದ ಕೆ. ಎಂ. ಸಿ. ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು.ಮೃತರು ಆರ್. ಎಸ್. ಎಸ್. ಕಾರ್ಯಕರ್ತರಾಗಿದ್ದು ಹಿಂದೂ ಸಮಾಜ ಬಾಂಧವರಲ್ಲಿ “ಅನಂತ್ ಮಾಮ್” ಎಂದೇ ಚಿರಪರಿಚಿತರಾಗಿದ್ದರು. ಮೃತರು ಅಡುಗೆ ಹಾಗೂ ಕೃಷಿ ವೃತ್ತಿಯಲ್ಲಿ ತೊಡಗಿದ್ದರು.

ಮೃತರು ಪತ್ನಿ ಹಾಗೂ ಎರಡು ಪುತ್ರರನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕಡಿರುದ್ಯಾವರದ ಸ್ವಗೃಹದಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.