ಗುರುವಾಯನಕೆರೆಯಲ್ಲಿ ಎ.ಎಂ. ಇಂಟರ್ ನ್ಯಾಷನಲ್ ಏಂಡ್ ಡಾಕ್ಯುಮೆಂಟರಿ ಸರ್ವಿಸ್ ಪ್ರಾರಂಭ

Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ : ಗುರುವಾಯ ನಕೆರೆ ಪೇಟೆಯಲ್ಲಿ ನೂತನವಾಗಿ ಎ.ಎಂ. ಇಂಟರ್ ನ್ಯಾಷನಲ್ ಏಂಡ್ ಡಾಕ್ಯುಮೆಂಟರಿ ಸರ್ವಿಸ್ ನೂತನ ಸಂಸ್ಥೆ ಮಾ. 1 ರಂದು ಉದ್ಘಾಟನೆಗೊಂಡಿತು. ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸೀದಿ ಖತೀಬ್ ಸಯ್ಯಿದ್ ಸಾದಾತ್ ತಂಙಳ್ ದುಆ ಪ್ರಾರ್ಥನೆಯೊಂದಿಗೆ ಶಾಸಕ ವಸಂತ ಬಂಗೇರ ಉದ್ಘಾಟಿಸಿದರು. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಲ್ಫೊನ್ಸ್ ಪ್ರಾಂಕೋ, ತಾಲೂಕು ಸಮಿತಿ ನಿಕಟಪೂರ್ವ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಜಿ.ಪಂ. ಮಾಜಿ ಸದಸ್ಯ ಇಚ್ಚಿಲ ಸುಂದರ ಗೌಡ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸಾಂತಪ್ಪ ಪೂಲ್ಯ, ಹಿಕ್ಮಿ ಇಂಟರ್‌ನ್ಯಾಷನಲ್ ಸ್ಕೂಲ್ ಮಂಗಳೂರು ಇಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಸನ್ ಯೂಸುಫ್, ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಿಕರಾಗಿರುವ, ವಿದೇಶದ ಕುವೈಟ್‌ನಲ್ಲಿ ಸೇವೆ ಸಲ್ಲಿಸಿ ವಾಪಸಾಗಿರುವ ಅಶ್ರಫ್ ಪೆರಾಲ್ದರಕಟ್ಟೆ, ಅವರ ತಂದೆ ಪಿ.ಕೆ. ಉಂಞಿ ಹಾಗೂ ಬಂಧುವರ್ಗದವರು ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು. ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರೂ ಆಗಿರುವ ಸಾಮಾಜಿಕ ಕಾರ್ಯಕರ್ತ ನವಾಝ್ ಶರೀಫ್ ಪೆರಾಲ್ದರಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.