ಬಂಗಾಡಿ ಕೊಲ್ಲಿ ಸೂರ್ಯ-ಚಂದ್ರ ಜೋಡುಕರೆ ಕಂಬಳಕ್ಕೆ ಚಾಲನೆ

 

ಮಿತ್ತಬಾಗಿಲು : ಬಂಗಾಡಿ ಕೊಲ್ಲಿಯ ನೇತ್ರಾವತಿ ನದಿ ಕಿನಾರೆಯ ವಿಶಾಲ ಪ್ರದೇಶದ ಕಂಬಳ ಕ್ರೀಡಾಂಗಣದಲ್ಲಿ ನಡೆಯಲಿರುವ ಸೂರ್ಯ ಚಂದ್ರ ಜೋಡುಕರೆ ಬಯಲು ಕಂಬಳವನ್ನು ಮಾ.3 ರಂದು ಉಜಿರೆ ಶ್ರೀ ಜನಾರ್ದನ ದೇವಾಲಯದ ಆನುವಂಶೀಯ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಉದ್ಘಾಟಿಸಿದರು.
ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ, ಬೆಳ್ತಂಗಡಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಕುವೆಟ್ಟು ಕ್ಷೇತ್ರದ ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಲಾಲ ಕ್ಷೇತ್ರದ ಜಿ.ಪಂ. ಸದಸ್ಯೆ ಸೌಮ್ಯಲತಾ, ಉದ್ಯಮಿ ಜಯಂತ ಗೌಡ, ತಾ| ಪತ್ರಕರ್ತ ಸಂಘದ ಅಧ್ಯಕ್ಷ ಮನೋಹರ ಬಳೆಂಜ, ಸುದ್ದಿ ಪತ್ರಿಕೆಯ ವರದಿಗಾರ ಲ. ಅಶ್ರಫ್ ಆಲಿಕುಂಞಿ, ಉದಯವಾಣಿ ವರದಿಗಾರ ಹರ್ಷಿತ್ ಪಿಂಡಿವನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ, ಕಂಬಳ ಸಮಿತಿಯ ಕಾರ್ಯದರ್ಶಿ ಕಿಶೋರ್ ಕುಮಾರ್ ವಳಂಬ್ರ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕಾಸಿಂ ಮಲ್ಲಿಗೆಮನೆ, ಎಸ್.ಕೆ.ಡಿ.ಆರ್.ಡಿ.ಪಿ. ಯೋಜನಾಧಿಕಾರಿ ಜಯಕರ ಶೆಟ್ಟಿ, ಕಂಬಳ ಸಮಿತಿಯ ಕೋಶಾಧಿಕಾರಿ ಭರತ್ ಕುಮಾರ್ ಇಂದಬೆಟ್ಟು ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನದ ಅರ್ಚಕ ಶಂಕರ ನಾರಾಯಣ ತೋಡ್ತಿಲ್ಲಾಯ ನೇತೃತ್ವದಲ್ಲಿ ಕರೆ ಪೂಜೆ, ಶ್ರೀ ದೇವರ ಪ್ರಸಾದ ವಿತರಣೆ ನಡೆಯಿತು. ಸ್ವಾಗತ ಸಮಿತಿಯ ಹಮೀದ್, ಬಾಬು ಎಂ.ಕೆ, ಜಮಾಲುದ್ದೀನ್, ಧರ್ಣಪ್ಪ ಗೌಡ, ಸಂತೋಷ್ ಗೌಡ, ವಿಜಯ ಗೌಡ, ಅಝೀಝ್, ಇ.ಎಂ. ಜೋಸ್, ಶ್ರೀಧರ ದೇವಾಡಿಗ, ಕಿಶೋರ್ ಗೌಡ ಉಪಸ್ಥಿತರಿದ್ದರು.
ಕಂಬಳ ಸಮಿತಿ ಪದಾಧಿಕಾರಿಗಳಾದ ಸೀತಾರಾಮ ಹಾರ್ತಕಜೆ, ತುಂಗಪ್ಪ ಪೂಜಾರಿ ಕಾಜೂರು, ಕಿಶೋರ್ ಹೂರ್ಜೆ, ವಿನಯಚಂದ್ರ ಸೇನೆರೊಟ್ಟು, ಅಶ್ವಿತಾ ಮೊದಲಾದವರೂ ಉಪಸ್ಥಿತರಿದ್ದರು. ಕಂಬಳ ಸಮಿತಿಯ ಅಧ್ಯಕ್ಷ ಡಾ| ಎಂ.ಎಂ. ದಯಾಕರ್ ಸ್ವಾಗತಿಸಿ, ಉಮೇಶ್ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಭರತ್ ಕುಮಾರ್ ಬಂಗಾಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.