1978 ರಲ್ಲಿ ಮಂಜೂರು ಮಾಡಿದ ಕ್ರೀಡಾಂಗಣ ಈಗಲೂ ಅಭಿವೃದ್ಧಿಯಾಗದ್ದು ಬೇಸರ: ಮಾಜಿ ಸಚಿವ ಗಂಗಾಧರ ಗೌಡ

ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ

ನಾನು ಮಂತ್ರಿಯಾಗಿದ್ದಾಗ ಪ್ರತೀ ತಾಲೂಕಿಗೊಂದು ಇಂತಹಾ ಕ್ರೀಡಾಂಗಣ, ಗರಡಿ ಮನೆಗಳು ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದೆ. ಇಂತಹಾ ಬೇಡಿಕೆ ಪೂರೈಕೆಯ ಅಗತ್ಯವೂ ಇದೆ. ಕೃಷಿ ಮತ್ತು ಇತರೆ ಚಟುವಟಿಕೆಯಲ್ಲಿ ಯಶಸ್ಸು ಕಂಡಿರುವ ಕ್ರಿಶ್ಚಿಯನ್ ಸಮಾಜ ಈ ರೀತಿ ಸಂಘಟಿತರಾಗಿ, ಬಹಳ ಶ್ರಮವಹಿಸಿ ಈ ಸುಂದರ ಕ್ರೀಡಾಕೂಟ ಹಮ್ಮಿಕೊಂಡಿರುವುದು ಸಂತೋಷದಾಯಕ. ಎಂತಹಾ ಅನ್ಯಾಯ ನಡೆದಾಗಲೂ ಅದನ್ನು ಮೆಟ್ಟಿ ನಿಂತು ಈ ಸಮಾಜ ಮೇಲೆ ಬಂದಿದೆ. ಈ ಸಮಾಜಕ್ಕೆ ಅಕಾಡಮಿ ಮೂಲಕ ಈಗ ಸರಕಾರ ಮಟ್ಟದಲ್ಲೂ ಮಾನ್ಯತೆ ಬಂದಿದೆ ಎಂಬುದು ಸಂತೋಷದಾಯಕ ವಿಚಾರ. -ಮಾಜಿ ಸಚಿವ ಕೆ. ಗಂಗಾಧರ ಗೌಡ

ನಾನು ಮಂತ್ರಿಯಾಗಿದ್ದಾಗ ಪ್ರತೀ ತಾಲೂಕಿಗೊಂದು ಇಂತಹಾ ಕ್ರೀಡಾಂಗಣ, ಗರಡಿ ಮನೆಗಳು ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದೆ. ಇಂತಹಾ ಬೇಡಿಕೆ ಪೂರೈಕೆಯ ಅಗತ್ಯವೂ ಇದೆ. ಕೃಷಿ ಮತ್ತು ಇತರೆ ಚಟುವಟಿಕೆಯಲ್ಲಿ ಯಶಸ್ಸು ಕಂಡಿರುವ ಕ್ರಿಶ್ಚಿಯನ್ ಸಮಾಜ ಈ ರೀತಿ ಸಂಘಟಿತರಾಗಿ, ಬಹಳ ಶ್ರಮವಹಿಸಿ ಈ ಸುಂದರ ಕ್ರೀಡಾಕೂಟ ಹಮ್ಮಿಕೊಂಡಿರುವುದು ಸಂತೋಷದಾಯಕ. ಎಂತಹಾ ಅನ್ಯಾಯ ನಡೆದಾಗಲೂ ಅದನ್ನು ಮೆಟ್ಟಿ ನಿಂತು ಈ ಸಮಾಜ ಮೇಲೆ ಬಂದಿದೆ. ಈ ಸಮಾಜಕ್ಕೆ ಅಕಾಡಮಿ ಮೂಲಕ ಈಗ ಸರಕಾರ ಮಟ್ಟದಲ್ಲೂ ಮಾನ್ಯತೆ ಬಂದಿದೆ ಎಂಬುದು ಸಂತೋಷದಾಯಕ ವಿಚಾರ.

ಬೆಳ್ತಂಗಡಿ: 1978 ರಲ್ಲಿ ನಾನು ಬೆಳ್ತಂಗಡಿ ಕ್ಷೇತ್ರದ ಶಾಸಕನಾಗಿದ್ದು ಯುವಜನ ಸಚಿವನಾಗಿದ್ದಾಗ ಮಂಜೂರುಗೊಳಿಸಿದ ಈ ತಾಲೂಕು ಕ್ರೀಡಾಂಗಣ ಇನ್ನೂ ಅಭಿವೃದ್ಧಿಯಾಗದೇ ಇರುವುದು ಬೇಸರದ ವಿಚಾರ ಎಂದು ಮಾಜಿ ಸಚಿವ ಕೆ. ಗಂಗಾಧರ ಗೌಡ ಹೇಳಿದರು.
ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಮಾ. 4 ರಂದು ಬೆಳ್ತಂಗಡಿ ತಾ. ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಆಹ್ವಾನಿತ ತಂಡಗಳ ಪುರುಷರ ಕಬಡ್ಡಿ ಪಂದ್ಯಾಟದ ಕ್ರೀಡಾಂಗಣನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ಅಜಯ್ ಎ.ಜೆ. ವಹಿಸಿದ್ದರು. ವೇದಿಕೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಸಂಘಟನೆಯ ರಾಜ್ಯಾಧ್ಯಕ್ಷ ಎ.ಸಿ. ಜಯರಾಜ್, ರಾಜ್ಯ ಸಂಯೋಜಕ ಎ.ಸಿ. ಕುರಿಯನ್, ಜಿಲ್ಲಾ ಉಪಾಧ್ಯಕ್ಷ ಎ.ಸಿ. ಮ್ಯಾಥ್ಯೂ, ರಾಜ್ಯ ಯುವ ಘಟಕದ ಅಧ್ಯಕ್ಷ ಸಜೇಶ್, ಕಬಡ್ಡಿ ಸಂಸ್ಥೆಯ ಜಿಲ್ಲಾ ಉಪಾಧ್ಯಕ್ಷ ಲ| ನಾಮದೇವ ರಾವ್ ಮುಂಡಾಜೆ, ತಾಲೂಕು ಸಂಘದ ಪ್ರ. ಕಾರ್ಯದರ್ಶಿ ವಿನ್ಸೆಂಟ್ ಬಂಗಾಡಿ, ಕಬಡ್ಡಿ ತೀರ್ಪುಗಾರರ ಮಂಡಳಿ ಜಿಲ್ಲಾಧ್ಯಕ್ಷ ಕೃಷ್ಣಾನಂದ ರಾವ್, ತಾ| ಅಧ್ಯಕ್ಷ ಜಯರಾಜ್ ಜೈನ್ ಲಾಲ, ಕಬಡ್ಡಿ ಸಂಸ್ಥೆಯ ತಾ| ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು, ಕ್ರೀಶ್ಚಿಯನ್ ಅಸೋಸಿಯೇಶನ್ ಸದಸ್ಯ ರಾದ ದೇವಸ್ಯ ಧರ್ಮಸ್ಥಳ, ಅಗಸ್ಟಿನ್ ಕೆ.ಜೆ. ಮಂಜೊಟ್ಟಿ, ಬರ್ಕುಮೆನ್ಸ್, ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಫ್ರಾನ್ಸಿಸ್ ವಿ.ವಿ. ಸ್ವಾಗತಿಸಿ ಪ್ರಸ್ತಾವನೆಗೈದರು. ಜೇಮ್ಸ್ ಅಬ್ರಾಹಾಂ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.