ಅನಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ.ದೇವಸ್ಥಾನದ ಪರಿಕಲ್ಪನೆ ನಮ್ಮ ಬದುಕಿಗೆ ಮೂಲ ಶಕ್ತಿ: ಮಾಣಿಲ ಶ್ರೀ

Advt_NewsUnder_1
Advt_NewsUnder_1
Advt_NewsUnder_1

ಪಟ್ರಮೆ : ನಮ್ಮ ಮನಸ್ಸಿನ ಭಾವನೆ ಮತ್ತು ಕಲ್ಪನೆ ಒಂದಾದರೆ ಧಾರ್ಮಿಕ ಮೌಲ್ಯಗಳು ಉಳಿಯುತ್ತದೆ. ಭಕ್ತಿಯ ಶಕ್ತಿಯಿಂದ ಕ್ಷೇತ್ರಗಳು ಬೆಳಗುತ್ತದೆ. ದೇವಸ್ಥಾನದ ಪರಿಕಲ್ಪನೆ ನಮ್ಮ ಬದುಕಿನ ಮೂಲ ಶಕ್ತಿ ಅದಕ್ಕಾಗಿ ನಮ್ಮ ಹಿರಿಯರು ಅಲ್ಲಲ್ಲಿ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅನಾರು-ಪಟ್ರಮೆಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಮಾ.೪ರಂದು ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ದೇವಸ್ಥಾನಕ್ಕೆ ಹೋಗುವಾಗ ನಮ್ಮ ಮನಸ್ಸಿನಲ್ಲಿರುವ ಎಲ್ಲಾ ಜಂಜಾಟವನ್ನು ಬಿಟ್ಟು ಒಳಗೆ ಹೋಗಬೇಕು. ದೇವಸ್ಥಾನ ನಮ್ಮದು ಎಂಬ ಭಾವನೆ ಎಲ್ಲರಲ್ಲೂ ಇರಬೇಕು. ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ನಮ್ಮ ಆರಾಧನೆ, ಆಚಾರ, ಸಂಪ್ರಾದಾಯಗಳು ಉಳಿದರೆ ಮಾತ್ರ ನಮ್ಮ ಮುಂದಿನ ಜನಾಂಗ ಉಳಿಯಬಹುದು ಇದಕ್ಕಾಗಿ ಮಕ್ಕಳಿಗೆ ಸಂಪತ್ತನ್ನು ಕ್ರೋಢಿಕರಿಸದೇ ಮಕ್ಕಳನ್ನೇ ಸಂಪತ್ತು ಆಗಿ ಪರಿವರ್ತಿಸಬೇಕು ಎಂದು ಕರೆ ನೀಡಿದರು.
ಧರ್ಮಕ್ಕೆ ಚೈತನ್ಯ: ಹಿಂದೂ ಧರ್ಮವನ್ನು ಅವಹೇಳನ ಮಾಡುವ ಕೃತ್ಯವು ನಿರಂತರವಾಗಿ ನಡೆಯುತ್ತಿದೆ. ಬುದ್ಧಿ ಜೀವಿ ಎಂದು ಹೇಳಿಕೊಳ್ಳುತ್ತಿರುವ ಕೆಲವರು ಈ ಧರ್ಮವನ್ನು ಹೀಯಾಳಿಸಿ, ಅಧಃಪತನಕ್ಕೆ ತಳ್ಳುತ್ತಿದ್ದಾರೆ.ಹಿಂದೂ ಧರ್ಮ ಚೈತನ್ಯ ಸ್ವರೂಪಿ ಧರ್ಮವಾಗಿದೆ. ಬ್ರಹ್ಮಕಲಶೋತ್ಸವದಿಂದ ದೇವರ ಬಿಂಬಕ್ಕೆ ಹೊಸ ಶಕ್ತಿ ಬರುವುದರ ಜೊತೆಗೆ ನಮ್ಮ ಧರ್ಮಕ್ಕೂ ಚೈತನ್ಯ ಉಂಟು ಮಾಡುತ್ತದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ನುಡಿದರು.
ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಮಾತನಾಡಿ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವ ನಾವು ನಂತರದ ದಿನಗಳಲ್ಲೂ ದೇವಸ್ಥಾನಕ್ಕೆ ಬರುವ ಸಂಪ್ರಾದಾಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆಯಿತ್ತರು. ಜಾತ್ಯತೀತ ಜನತಾದಳ ದ.ಕ. ಜಿಲ್ಲಾ ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ ಮಾತನಾಡಿ ಭೀಕರ ಮಂಗನಕಾಯಿಲೆ ಪಟ್ರಮೆಯಲ್ಲಿ ಬಂದು ಅನೇಕ ಸಂಕಷ್ಟಗಳು ಜನರಿಗೆ ಬಂದರೂ ದೇವಿಯ ಆಶೀರ್ವಾದದಿಂದ ಎಲ್ಲವೂ ನಿವಾರಣೆಯಾಯಿತು. ದೇವರ ಮೇಲೆ ನಮಗೆ ಶ್ರದ್ಧಾ-ಭಕ್ತಿ ಅತೀ ಅಗತ್ಯ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಅನುವಂಶೀಯ ಆಡಳಿತ ಮೊಕ್ತೇಸರ ನಿತೇಶ್ ಬಲ್ಲಾಳ್ ಉಳಿಯಬೀಡು ಮಾತನಾಡಿ ದೇವಸ್ಥಾನಕ್ಕೆ ಬರುವಾಗ ಶುದ್ಧ ಮನಸ್ಸಿನಿಂದ ಬರಬೇಕು, ಪರಿಶುದ್ಧ ಮನಸ್ಸಿನ ಪ್ರಾರ್ಥನೆಯಿಂದ ನಮ್ಮ ಬಯಕೆಗಳು ಈಡೇರುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಪಟ್ರಮೆ ಗ್ರಾ.ಪಂ. ಅಧ್ಯಕ್ಷ ನವೀನ್ ಕಜೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡೀಗಯ್ಯ ಗೌಡ ಕಾಯಿಲ, ಕಾರ್ಯದರ್ಶಿ ಜಿನ್ನಪ್ಪ ಗೌಡ ನೆಕ್ಕಿಲು, ಪ್ರಧಾನ ಸಂಚಾಲಕ ರತ್ನವರ್ವ ಜೈನ್ ಉಳಿಯಬೀಡು ಉಪಸ್ಥಿತರಿದ್ದರು. ಪವಿತ್ರ ಪಾಣಿ ಸೂರ್ಯನಾರಾಯಣ ಶರ್ಮ ಎಲಿಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷೇತ್ರದ ಹಿನ್ನಲೆಯನ್ನು ವಿವರಿಸಿದರು. ಅಭಿರಾಮ್ ಮತ್ತು ಪ್ರೀತಂ ಇವರ ಪ್ರಾರ್ಥನೆ ಬಳಿಕ ಕಸ್ತೂರಿ ನಿತೇಶ್ ಬಲ್ಲಾಳ್ ಉಳಿಯಬೀಡು ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿ, ಕು| ಗೀತಾ ಕಲ್ಲಾಜೆ ವಂದಿಸಿದರು. ರಾತ್ರಿ ಊರ ಕಲಾವಿದರಿಂದ `ಅತಿಕಾಯ ಮೋಕ್ಷ ಮತ್ತು ಅಗ್ರಪೂಜೆ’ ಯಕ್ಷಗಾನ ಬಯಲಾಟ ಜರುಗಿತು. ಚಿತ್ರ: ರಾಜೇಶ್ ಪಟ್ರಮೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.