ಬೆಳ್ತಂಗಡಿ ತಾಲೂಕು 15 ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಸಂಯೋಜನಾ ಸಮಿತಿ ಪದಾಧಿಕಾರಿಗಳ ಆಯ್ಕೆ

 

 

 

 

 

ಬೆಳ್ತಂಗಡಿ: ಬೆಳ್ತಂಗಡಿ ತಾ| ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾ. ೨೫ ರಂದು ಬೆಳ್ತಂಗಡಿ ಎಸ್‌ಡಿಎಂ ಕಲಾಭವನದಲ್ಲಿ ೧೫ ನೇಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಇದರ ಸಂಯೋಜನಾ ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ವಸಂತ ಬಂಗೇರ, ಗೌರವ ಸಂಚಾಲಕರಾಗಿ ಬಿಷಪ್ ಲಾರೆನ್ಸ್ ಮುಕ್ಕುಯಿ, ಅಧ್ಯಕ್ಷರಾಗಿ ನಿವೃತ ಪೊಲೀಸ್ ವರಿಷ್ಠಾಧಿಕಾರಿ ಪಿತಾಂಬರ ಹೆರಾಜೆ, ಪ್ರ. ಕಾರ್ಯದರ್ಶಿಯಾಗಿ ಡಾ. ಸುಧೀರ್ ಆರ್ ಪ್ರಭು, ಕೋಶಾಧಿಕಾರಿಯಾಗಿ ಯಶವಂತ ಪಟವರ್ಧನ್ ಅವರನ್ನು ಸರ್ವಾನುಮತದಿಂದ ಅರಿಸಲಾಗಿದೆ.
ಉಳಿದಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಬಿ ಯಶೋವರ್ಮ, ಕಸಾಪ ಗೌರವ ಕಾರ್ಯದರ್ಶಿಗಳು ರಾಮಕೃಷ್ಣ ಭಟ್ ಚೊಕ್ಕಾಡಿ ಮತ್ತು ಅಶ್ರಫ್ ಆಲಿಕುಂಞಿ ಮುಂಡಾಜೆ, ಸಂಯೋಜನಾ ಸಮಿತಿ ಉಪಾಧ್ಯಕ್ಷರುಗಳಾಗಿ ಮುಗುಳಿ ನಾರಾಯಣ ರಾವ್, ಮಂಜುನಾಥ ರೈ ಎನ್ “ಸುದ್ದಿ”, ಬಿ.ಕೆ ಧನಂಜಯ ರಾವ್, ಸಂಪತ್ ಬಿ ಸುವರ್ಣ, ಶೇಖರ್ ಕುಕ್ಕೇಡಿ, ವಿವೇಕಾನಂದ ಪ್ರಭು ಮೂರ್ಜೆ, ರಂಜನ್ ಜಿ ಗೌಡ, ಹರೀಶ ಪೂಂಜ, ಅಲ್ಫೋನ್ಸ್ ಫ್ರಾಂಕೋ, ಚಂದು ಎಲ್, ಮುಹಮ್ಮದ್ ರಫಿ ಮಾಜಿ ಸೈನಿಕರು ಬೆಳ್ತಂಗಡಿ, ಶಶಿಕಿರಣ್ ಜೈನ್ ಬೆಳ್ತಂಗಡಿ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಮಾಜಿ ಶಾಸಕ ಕೆ ಪ್ರಭಾಕರ ಬಂಗೇರ, ರಮಾನಂದ ಸಾಲಿಯಾನ್ ಬೆಳ್ತಂಗಡಿ, ಜಯಕೀರ್ತಿ ಜೈನ್ ಧರ್ಮಸ್ಥಳ, ರೆ. ಫಾ. ಜೋಸ್ ವಲಿಯಪರಂಬಿಲ್, ಕೆ. ಹರೀಶ್ ಕುಮಾರ್ ನಡ, ಸೋಮೇ ಗೌಡ, ರಘುರಾಮ ಶೆಟ್ಟಿ “ಸಾಧನಾ” ಉಜಿರೆ, ರಾಜು ಶೆಟ್ಟಿ ಬೆಂಗೆತ್ಯಾರು, ರಾಜಗುರು ಹೆಬ್ಬಾರ್ ನಿಡ್ಲೆ, ಲ್ಯಾನ್ಸಿ ಎ ಪಿರೇರಾ ಬೆಳ್ತಂಗಡಿ, ಭಗೀರಥ ಜಿ ಮತ್ತು ಈಶ್ವರ ಭೈರ ಲಾಲ ಇವರನ್ನು ಆಯ್ಕೆಮಾಡಲಾಯಿತು.
ಕಾರ್ಯದರ್ಶಿಗಳಾಗಿ ಪ್ರಮೋದ್ ಆರ್ ನಾಯಕ್, ಅಭಿನಂದನ್ ಹರೀಶ್ ಕುಮಾರ್, ಸಚಿನ್ ಕಮಾರ್ ನೂಜೋಡಿ, ಕಿರಣ್ ಕುಮಾರ್ ಶೆಟ್ಟಿ, ಸಂತೋಷ್ ಕುಮಾರ್ ಜೈನ್ ಬೆಳ್ತಂಗಡಿ, ರಾಕೇಶ್ ಮೂಡುಕೋಡಿ ಮತ್ತು ಜೋನ್ ಅರ್ವಿನ್ ಡಿಸೋಜಾ ರನ್ನು ಆಯ್ಕೆಮಾಡಲಾಗಿದೆ.
ಕಾರ್ಯಕ್ರಮ ನಿರ್ವಹಣಾ ಸಮಿತಿಗೆ ಪ್ರ. ಸಂಚಾಲಕರಾಗಿ ಗಣಪತಿ ಭಟ್ ಕುಳಮರ್ವ, ಸಂಚಾಲಕರುಗಳಾಗಿ ಅಜಿತ್ ಕುಮಾರ್ ಕೊಕ್ರಾಡಿ, ಪ್ರಭಾಕರ ನಾರಾವಿ, ಮುಹಮ್ಮದ್ ರಿಯಾಝ್, ಲಕ್ಷ್ಮೀನಾರಾಯಣ ಕೆ ಹಳೆಕೋಟೆ ಬೆಳ್ತಂಗಡಿ, ಬಿ ಸೋಮಶೇಖರ ಶೆಟ್ಟಿ ಉಜಿರೆ ಮತ್ತು ಶೀನಾ ನಾಡೋಳಿ, ಮತ್ತು ರಾಜೇಶ್ ಪಿ ಎಸ್‌ಕೆಡಿಆರ್‌ಡಿಪಿ,
ಆರ್ಥಿಕ ನಿರ್ವಹಣಾ ಸಮಿತಿ ಪ್ರ. ಸಂಚಾಲಕರಾಗಿ ಶ್ರೀಕಾಂತ ಕಾಮತ್ ಹೆಳೆಕೋಟೆ, ಸಂಚಾಲಕರುಗಳಾಗಿ ಪುಷ್ಪರಾಜ್ ಶೆಟ್ಟಿ “ಪ್ರಕಾಶ್”, ರಾಜೇಶ್ ಶೆಟ್ಟಿ “ನವಶಕ್ತಿ” ಗುರುವಾಯನಕೆರೆ, ಡಾ. ಶಶಿಧರ ಡೋಂಗ್ರೆ, ಡಾ. ಎಂ.ಎಂ ದಯಾಕರ್ ಉಜಿರೆ, ನಿತ್ಯಾನಂದ ನಾವರ, ಕೇಶವ ಪಿ ಬೆಳಾಲು ಮತ್ತು ಯು.ಕೆ ಮುಹಮ್ಮದ್ ಹನೀಫ್ ಕಾಶಿಬೆಟ್ಟು, ಮಾಧ್ಯಮ ಸಮಿತಿಯ
ಪ್ರ. ಸಂಚಾಲಕರಾಗಿ ಮನೋಹರ ಬಳೆಂಜ, ಸಂಚಾಲಕರುಗಳಾಗಿ ಬಿ.ಎಸ್ ಕುಲಾಲ್, ದೀಪಕ್ ಆಠವಳೆ, ಆಚುಶ್ರೀ ಬಾಂಗೇರು, ಹರ್ಷಿತ್ ಕುಮಾರ್ ಪಿಂಡಿವನ ಮತ್ತು ಭುವನೇಶ್ವರ ಜಿ ಗೇರುಕಟ್ಟೆ,
ಸ್ಮರಣ ಸಂಚಿಕೆ: ಪ್ರ. ಸಂಪಾದಕರಾಗಿ ಡಾ. ಟಿ. ಕೆ ಶರತ್ ಕುಮಾರ್,
ಸಂಪಾದಕರುಗಳಾಗಿ ಡಾ. ಎಂ.ಪಿ ಶ್ರೀನಾಥ್, ಡಿ ಯದುಪಡಿ ಗೌಡ, ಮೋಹನ ಗೌಡ ಗುರುದೇವ ಬೆಳ್ತಂಗಡಿ, ರಾಮಕೃಷ್ಣ ಭಟ್ ಚೊಕ್ಕಾಡಿ
ಮತ್ತು ಅಶ್ರಫ್ ಆಲಿಕುಂಞಿ, ಆಮಂತ್ರಣ ಮುದ್ರಣ, ವಿತರಣೆ ಸಮಿತಿಗೆ ಪ್ರ. ಸಂಚಾಲರಾಗಿ ಡಾ. ಎಂ.ಪಿ ಶ್ರೀನಾಥ್, ಸಂಚಾಲಕರುಗಳಾಗಿ ಶಿಬಿ ಧರ್ಮಸ್ಥಳ ಮತ್ತು ಡಿ ಜಗದೀಶ್ ಬೆಳ್ತಂಗಡಿ, ಆತಿಥ್ಯ ಸಮಿತಿ ಪ್ರ. ಸಂಚಾಲಕರಾಗಿ ಧರಣೇಂದ್ರ ಕೆ ಜೈನ್, ಸಂಚಾಲಕರುಗಳಾಗಿ ಹೇಮಂತ ರಾವ್ ರೂಪಾ ಕ್ಯಾಟರಿಂಗ್, ಗಿರೀಶ್ ಡೋಂಗ್ರೆ ಲಾಲ, ನಾಮದೇವ ರಾವ್ ಮುಂಡಾಜೆ, ರಘುಪತಿ ರಾವ್, ಮತ್ತು ವಿನ್ಸೆಂಟ್ ಟಿ ಡಿಸೋಜಾ, ಸನ್ಮಾನ ಸಮಿತಿಯ ಪ್ರ. ಸಂಚಾಲಕರಾಗಿ ಬಿ ವಿಠಲ ಶೆಟ್ಟಿ ಲಾಲ, ಸಂಚಾಲಕರುಗಳಾಗಿ ಪಿ ಕಮಲಾಕ್ಷ ಆಚಾರ್ ಬೆಳ್ತಂಗಡಿ, ಗೋಪಾಲ ರಾವ್ ಬೆಳ್ತಂಗಡಿ, ಜಾರಪ್ಪ ಪೂಜಾರಿ ಬೆಳಾಲು, ರಮೇಶ್ ಮಯ್ಯ ಉಜಿರೆ, ಮನುಜಾ ಪ್ರಸಾದ್ ಗುರುದೇವ ಬೆಳ್ತಂಗಡಿ ಮತ್ತು ಮಲ್ಲಿಕಾ ಬಿ ರಾವ್ ಗುರುದೇವ ಬೆಳ್ತಂಗಡಿ, ಸಾಂಸ್ಕೃತಿಕ ಸಮಿತಿಯ ಪ್ರ. ಸಂಚಾಲಕರಾಗಿ ಸ್ಮಿತೇಶ್ ಎಸ್ ಬಾರ್ಯ, ಸಂಚಾಲಕರುಗಳಾಗಿ ಹೇಮಾವತಿ ದಮ್ಮಾನಂದ, ಚಂದ್ರಹಾಸ ಬಳೆಂಜ, ಸುಧಾಮಣಿ ಮುಂಡೂರು ಮತ್ತು ಉದಯ ಕುಮಾರ್ ಲಾಲ, ಸ್ವಯಂ ಸೇವಕರು ಮತ್ತು ನೋಂದಣಿ ಸಮಿತಿಯ ಪ್ರ. ಸಂಚಾಲಕರಾಗಿ ಶಮೀವುಲ್ಲಾ ಗುರುದೇವ ಬೆಳ್ತಂಗಡಿ, ಬಿ ಗೋಪಾಲಕೃಷ್ಣ ಗುರುವಾಯನಕೆರೆ, ದತ್ತಾತ್ರೇಯ ಗೊಲ್ಲ ಓಡಿಲ್ನಾಳ ಮತ್ತು ಲಲಿತಾ ಎಂ ಕೊಯ್ಯೂರು ಇವರನ್ನು ಆರಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.