ಶ್ರೀ ಮಾಯಾ ಮಹಾದೇವ ದೇವಸ್ಥಾನ ಶಿಲಾಫಲಕ ಅನಾವರಣ

ಬೆಳ್ತಂಗಡಿ : ಶ್ರೀ ಮಾಯಾ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ.26 ರಂದು ಧ್ವಜಾರೋಹಣ ಮೂಲಕ ಪ್ರಾರಂಭಗೊಂಡಿತು. ಇದೇ ದಿನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ದಾನಿಗಳ ಶಿಲಾಫಲಕ ಅನಾವರಣ ಮತ್ತು ಅಭಿನಂದನಾ ಕಾರ್ಯಕ್ರಮ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯರು ವಹಿಸಿ ಮಾತನಾಡುತ್ತಾ ವಿದ್ಯಾಕೆಂದ್ರ ಮತ್ತು ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಯಿಂದ ಊರಿನ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಶ್ರದ್ಧಾ ಕೇಂದ್ರದ ಅಭಿವೃದ್ಧಿಯ ಬಳಿಕ ಊರವರ ಸಹಕಾರ ನಿತ್ಯ ಅನುಷ್ಠಾನದ ಮೂಲಕ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದರು.
ಶಿಲಾಫಲಕವನ್ನು ಅನಾವರಣ ಗೊಳಿಸಿದ ಉಜಿರೆ ಶ್ರೀ ಧ.ಮಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೋ| ಎಸ್.ಪ್ರಭಾಕರ್ ಮಾತನಾಡುತ್ತಾ ದೇವಾಲಯ ವಿದ್ಯಾಲಯಗಳು ಊರಿಗೆ ಶ್ರೇಯೋಭಿವೃದ್ಧಿ ನೀಡುತ್ತದೆ. ದೇವಸ್ಥಾನ ಕಟ್ಟಿದ ನಂತರ ಬೆಳೆಸುವ ಸಂಕಲ್ಪ ಮಾಡಬೇಕು ಎಂದರು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹೆಚ್. ಪದ್ಮ ಗೌಡ ಸ್ವಾಗತಿಸುತ್ತಾ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಸಹಕಾರ ನೀಡಿದ ಎಲ್ಲರನ್ನೂ ಅಭಿನಂದಿಸಿದರು. ಶ್ರೀ ಧ.ಮಂ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಹೆಚ್.ರಾಮಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಜಿ.ಸೋಮೇಗೌಡ, ವ್ಯವಸ್ಥಾಪನಾ ಸಮಿತಿ ಸದಸ್ಯ ಗುತ್ತಿನ ಮನೆ ಪುಷ್ಪದಂತ ಜೈನ್, ಸೀಮೆಯ ಅಸ್ರಣ್ಣ ಶಿವ ಪ್ರಕಾಶ್ ಬಾರಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ದಾಮೋದರ ಗೌಡ ಎಸ್., ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಎ.ಗಂಗಾಧರ ಸಾಲಿಯಾನ್, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಗಂಗಯ್ಯ ಗೌಡ, ರಾಜಪ್ಪ ಗೌಡ, ನಾಣ್ಯಪ್ಪ ಪೂಜಾರಿ, ದಿನೇಶ್ ಎಂ.ಕೆ, ಶ್ರೀಮತಿ ಸುಕನ್ಯಾ ನಾರಾಯಣ ಸುವರ್ಣ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶೇಖರ ಗೌಡ ಕೊಲ್ಲಿಮಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಾಪಕ ಮಹೇಶ್ ಪುಳಿತ್ತಡಿ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ಕುಮಾರ್ ವಂದಿಸಿದರು. ಊರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅದೇ ದಿನ ರಾತ್ರಿ ಧ್ವಜಾರೋಹಣದ ಮೂಲಕ ವಾರ್ಷಿಕ ಜಾತ್ರೆ ಪ್ರಾರಂಭಗೊಂಡಿತು. ಆಲಂಬಾಡಿ ವೇದಮೂರ್ತಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.೨ ರವರೆಗೆ ಜಾತ್ರೋತ್ಸವ ನಡೆಯಲಿದ್ದು ಮಾ.1 ರಂದು ಬೆಳಿಗ್ಗೆ ದರ್ಶನ ಬಲಿ, ರಾತ್ರಿ ರಥೋತ್ಸವ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.