ಎ.6-15 : ಕಾಜೂರು ಉರೂಸ್

ಬೆಳ್ತಂಗಡಿ : ಸುಮಾರು 800 ವರ್ಷಗಳ ಇತಿಹಾಸವಿರುವ ದ.ಕ. ಜಿಲ್ಲೆಯ ಸರ್ವಧರ್ಮೀಯ ಸೌಹಾರ್ದ ಕೇಂದ್ರವಾಗಿರುವ ಕಾಜೂರು ರಹ್ಮಾನಿಯಾ ಜುಮಾ ಮಸೀದಿ ಮತ್ತು ದರ್ಗಾ ಶರೀಫ್‌ನಲ್ಲಿ ಈ ವರ್ಷದ ಉರೂಸ್ ಮಹಾ ಸಂಭ್ರಮ ಮತ್ತು ಸರ್ವ ಧರ್ಮೀಯರ ಸೌಹಾರ್ದ ಸಂಗಮ ಕಾರ್ಯಕ್ರಮಗಳು ಮುಂದಿನ ಏ. 6 ರಿಂದ ಪ್ರಾರಂಭಗೊಂಡು ಎ. 15ರ ವರೆಗೆ ನಡೆಯಲಿದೆ ಎಂದು ವಕ್ಫ್ ಮಂಡಳಿ ನಿಯೋಜಿತ ದರ್ಗಾ ಶರೀಫ್ ಆಡಳಿತಾಧಿಕಾರಿ, ಮಾಜಿ ಸೈನಿಕ ಮುಹಮ್ಮದ್ ರಫಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಕಾಜೂರಿನಲ್ಲಿ ಕಳೆದ ನಾಲ್ಕೂವರೆ ವರ್ಷದಿಂದ ಕಾರಣಾಂತರಗಳಿಂದ ಉರೂಸ್ ನಡೆದಿಲ್ಲವಾದರೂ ಉಳಿದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಯಥಾವತ್ತಾಗಿ ನಡೆದುಕೊಂಡು ಬರುತ್ತಿದೆ. ಕಾಜೂರು ಗೌರವಾಧ್ಯಕ್ಷರಾಗಿದ್ದ, ಕುಂಬೋಳ್ ಕೆ.ಎಸ್. ಅಟಕೋಯ ತಂಙಳ್, ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಅವರ ಮಾರ್ಗದರ್ಶನದಂತೆ ಅವರ ಆಶಯದಂತೆ, ದೀರ್ಘ ವರ್ಷಗಳಿಂದ ಇಲ್ಲಿ ಖತೀಬರಾಗಿ ಸೇವೆಸಲ್ಲಿಸುತ್ತಿರುವ ಸಯ್ಯಿದ್ ಕೆ.ಪಿ.ಎಸ್. ಝೈನುಲ್ ಆಬಿದೀನ್ ಜಮಲುಲ್ಲಲಿ ತಂಙಳ್ ಕಾಜೂರು, ಸಯ್ಯಿದ್ ಶಿಹಾಬುದ್ದೀನ್ ಅಲ್‌ಹೈದ್ರೋಸಿ ಸಖಾಫಿ ತಂಙಳ್ ಕಿಲ್ಲೂರು, ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಕೆ.ಯು. ಮೋನು ಹಾಜಿ ಕಣಚೂರು, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಮುಂತಾದವರ ಸಮ್ಮುಖ ಕಾಜೂರು ಮತ್ತು ಕಿಲ್ಲೂರು ಉಭಯ ಜಮಾಅತ್ ಬಾಂಧವರ ಸಭೆ ನಡೆದು, ಮಾಜಿ ಸೈನಿಕರು ಹಾಗೂ ದರ್ಗಾ ಆಡಳಿತಾಧಿಕಾರಿ ಮಹಮ್ಮದ್ ರಫಿ ಅವರ ಮೂಲಕ, ಸದ್ರಿ ಜಮಾಅತ್‌ನವರ ಎಲ್ಲಾ ಸಮಸ್ಯೆಗಳನ್ನು ಒಮ್ಮತದಿಂದ ಸೌಹಾರ್ದತೆಯಿಂದ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ವಿವರ ನೀಡಿದರು.
ಮಾತುಕತೆಯ ಪ್ರಕಾರ 2018ರ ಉರೂಸ್ ಸಮಾರಂಭವನ್ನು ನಡೆಸುವುದರೊಂದಿಗೆ ಕಾಜೂರು ಪುಣ್ಯ ಕ್ಷೇತ್ರದ ಗತವೈಭವವನ್ನು ಮರುಕಳಿಸುವಂತೆ ಮಾಡಲು ಒಮ್ಮತದ ತಿರ್ಮಾಣ ಕೈಗೊಳ್ಳಲಾಗಿರುತ್ತದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕಾಜೂರು ಜಮಾಅತ್ ಕಡೆಯಿಂದ ಕೆ.ಯು. ಇಬ್ರಾಹಿಂ ಮತ್ತು ಬಿ.ಎ. ಯುಸೂಫ್ ಶರೀಫ್, ಕಿಲ್ಲೂರು ಜಮಾಅತ್ ಕಡೆಯಿಂದ ಬಿ.ಎಚ್. ಹಮೀದ್ ಮತ್ತು ಎಮ್. ಅಬೂಬಕ್ಕರ್ ಮಲ್ಲಿಗೆಮನೆ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.