ಬೆಳ್ತಂಗಡಿಯಲ್ಲಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಶುಭಾರಂಭ

ಬೆಳ್ತಂಗಡಿ : 2003 ರಲ್ಲಿ ಪ್ರಾರಂಭಗೊಂಡು ದೇಶದಾದ್ಯಂತ 69 ಶಾಖೆಗಳನ್ನು ಹೊಂದಿರುವ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸಹಕಾರಿ ಸಂಘವು ಇದೀಗ ಬೆಳ್ತಂಗಡಿಯ ಸುವರ್ಣ ಆರ್ಕೇಡ್ ಎದುರಿನ ಜೈನ್ ರೆಸ್ಟೋರೆಂಟ್ ಬಳಿ ಇರುವ ವಿ.ಎನ್ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ 64ನೇ ಶಾಖೆಯನ್ನು ಶಾಸಕ ಕೆ.ವಸಂತ ಬಂಗೇರ ಉದ್ಘಾಟಿಸಿ ಶುಭ ಹಾರೈಸಿದರು.
ಇದರ ಪ್ರಧಾನ ಕಛೇರಿಯು ಕಾರವಾರದಲ್ಲಿದ್ದು ಇದರ ಸೇವಾ ಸಂಸ್ಥೆಗಳು ದೇಶದಾದ್ಯಂತ ವಿಸ್ತರಗೊಂಡಿದೆ ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕ ಜೋರ್ಜ್ ಫೆರ್ನಾಂಡಿಸ್ ತಿಳಿಸಿದರು. ನಾಳ ಸೈಂಟ್ ಆನ್ನಾ ಚರ್ಚ್‌ನ ಧರ್ಮಗುರು ವ| ಫಾ| ಥೋಮಸ್ ಸ್ವಿಕ್ವೇರಾ ಆಶೀರ್ವಚನಗೈದರು. ಮುಖ್ಯ ಅತಿಥಿಗಳಾಗಿ ಮಾಜಿ ತಾ.ಪಂ ಅಧ್ಯಕ್ಷೆ ಶ್ರೀಮತಿ ಜಯಂತಿ ಪಾಲೆದು, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಡಾ| ಎಮ್ ಸುಧೀರ್ ಪ್ರಭು, ಬಂಟರ ಸಂಘದ ಅಧ್ಯಕ್ಷ ರಘುರಾಮ್ ಶೆಟ್ಟಿ, ಬೆಳ್ತಂಗಡಿ ಕಥೋಲಿಕ್ ಸಭಾ ಅಧ್ಯಕ್ಷ ವಾಲ್ಟರ್ ಮೋನಿಸ್, ಕಟ್ಟಡದ ಮಾಲಕ ಜಯರಾಮ್ ಬಂಗೇರ, ಅಧ್ಯಕ್ಷೆ ಶ್ರೀಮತಿ ರೋಸಲಿನ್ ಫೆರ್ನಾಂಡಿಸ್, ಅಭಿವೃದ್ಧಿ ವ್ಯವಸ್ಥಾಪಕ ಪ್ರಕಾಶ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು. ಇಲ್ಲಿ ಒಂದೇ ಸ್ಥಳದಲ್ಲಿ ಬ್ಯಾಂಕ್‌ನ ಎಲ್ಲಾ ಸೌಲಭ್ಯದೊಂದಿಗೆ ಇತರ ಸೌಲಭ್ಯಗಳು ಕೇರ್ ನೆಟ್‌ವರ್ಕಿಂಗ್, ಆರ್.ಟಿ.ಜಿ.ಎಸ್ ಚಿನ್ನದ ನಾಣ್ಯ ಮಾರಾಟ, ಬಸ್ ಮತ್ತು ವಿಮಾನ ಟಿಕೆಟ್ ಬುಕ್ಕಿಂಗ್, ಜೀವ ವಿಮೆ, (ಎಲ್.ಐ.ಸಿ) ಪಾಲಿಸಿಗಳ ಮಾರಾಟ, ಜನರಲ್ ವಿಮೆ, ವಾಹನ, ಅಪಘಾತ, ಆರೋಗ್ಯ ಹಾಗೂ ಸರಕು(ಸ್ಟಾಕ್) ಪಾನ್‌ಕಾರ್ಡ್, ಇ-ಸ್ಟಾಂಪಿಂಗ್, ಹಣ ವರ್ಗಾವಣೆ-ವೆಸ್ಟರ್ನ್ ಯುನಿಯನ್, ಮನೀ ಗ್ರಾಮ್ ಎಕ್ಸ್‌ಪ್ರೆಸ್ ಮನೀ, ರಾಯಲ್ ಮನಿ, ಆರೋಗ್ಯ ಕಾರ್ಡ್ ಕೆ.ಎಂ.ಸಿ, ಮಣಿಪಾಲ್, ಫಾದರ್ ಮುಲ್ಲರ್ ಹಾಗೂ ಯಶಸ್ವಿನಿ ಹೆಲ್ತ ಕಾರ್ಡ್ ಮುಂತಾದ ಎಲ್ಲಾ ಸೇವೆಗಳು ಇಲ್ಲಿ ಲಭ್ಯವಿದೆ. ಹಾಗೂ ತ್ವರಿತವಾಗಿ ಸಾಲ ಸೌಲಭ್ಯಗಳ ವ್ಯವಸ್ಥೆ, ಗೃಹ ಸಾಲ, ಓವರ್ ಡ್ರಾಫ್ಟ್ ಸಾಲ, ಜಮೀನು ಹಾಗೂ ಕಟ್ಟಡ ಒತ್ತೆಸಾಲ ಗ್ರಹ ಬಳಕೆ ಸಾಮಾಗ್ರಿಗಳ ಮೇಲೆ ಸಾಲ, ವ್ಯಾಪಾರ ಸಾಲ, ವೈಯಕ್ತಿಕ ಸಾಲ, ಪಿಠೋಪಕರಣ ಸಾಲ, ವಿದ್ಯಾಭ್ಯಾಸ ಸಾಲ, ಸೋಲಾರ್ ಖರೀದಿಗೆ ಸಾಲ ಸೌಲಭ್ಯವಿದೆ. ಎಲ್.ಐ.ಸಿಯ ಪ್ರಿಮಿಯಂ ಕಲೆಕ್ಷನ್ ಸೌಲಭ್ಯ ಹಾಗೂ ವಿವಿಧ ಠೇವಣಿಗಳ ಸೌಲಭ್ಯದೊಂದಿಗೆ ಆಕರ್ಷಕ ಬಡ್ಡಿದರವನ್ನು ಹೊಂದಿದೆ ಎಂದು ಇಲ್ಲಿಯ ವ್ಯವಸ್ಥಾಪಕ ಪ್ರಶಾಂತ್ ಪಾಯಿಸ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.