ಎಂಜಿರದಲ್ಲಿ ರಸ್ತೆಗೆ ಶಿಲಾನ್ಯಾಸ: ಶಾಸಕರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮತದಾರರ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ: ಶಾಸಕ ಬಂಗೇರ

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳ್ತಂಗಡಿ ತಾ| ಗ್ರಾಮೀಣ ಬ್ಲಾಕ್‌ನ ಕಿಸಾನ್ ಘಟಕದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ರೆಖ್ಯ, ಈ ಭಾಗದ ಜನರ ಭಾರೀ ಹಳೆಯ ಬೇಡಿಕೆಯಾಗಿದ್ದ ಈ ರಸ್ತೆಯನ್ನು ಶಾಸಕರು ಮಾಡಿಕೊಟ್ಟಿದ್ದು ಅಭಿನಂದನಾರ್ಹ. ನಮ್ಮ ಶಾಸಕರು ನಿರಂತರ ಬಡವರ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದು ಅಪರೂಪದ ವ್ಯಕ್ತಿತ್ವ ಹೊಂದಿದ್ದಾರೆ. ತಮ್ಮ ಬಳಿ ಬರುವ ಜನತೆಯ ಪಕ್ಷ ಜಾತಿ ನೋಡದೆ ಅವರ ಕೈಯಿಂದಾಗುವ ಕೆಲಸ ಮಾಡಿಕೊಡುವ ಏಕೈಕ ಶಾಸಕ ವಸಂತ ಬಂಗೇರರು. ಸರಕಾರದ ಹಲವು ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಅವರ ಪಾತ್ರ ಮಹತ್ತರವಾದುದು ಎಂದು ಶ್ಲಾಘಿಸಿದರು.

ರೆಖ್ಯ: ಈ ಕ್ಷೇತ್ರದಿಂದ ಜನ ನನ್ನನ್ನು ಐದು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದು ಅವರು ನನ್ನ ಮೇಲೆ ಇಟ್ಟಿದ್ದ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನಡೆದುಕೊಂಡಿದ್ದೇನೆ. ಒಂದೇ ಒಂದು ಭ್ರಷ್ಟಾಚಾರ ಅಥವಾ ಹಗರಣಗಳಿಗೆ ಅವಕಾಶ ಕೊಡದೆ ಕ್ಷೇತ್ರದ ಮತದಾರರ ಗೌರವ ಕಾಪಾಡುತ್ತಾ ನಿಸ್ವಾರ್ಥದಿಂದ ಜನರ ಸೇವೆ ಮಾಡಿದ್ದೇನೆ ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಎಂಜಿರ ಉಪ್ಪರಡ್ಕ ರಸ್ತೆಗೆ ಸರಕಾರದಿಂದ 2.85 ಕೋಟಿ ರೂ ಮಂಜೂರಾಗಿದ್ದು ಸದ್ರಿ ರಸ್ತೆಗೆ ಎಂಜಿರದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಪಕ್ಕದಲ್ಲಿ ಶಿಲಾನ್ಯಾಸ ನೆರವೇರಿಸಿ, ಜನತೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ರಸ್ತೆ ಗ್ರಾಮಸ್ಥರ ಬಹುವರ್ಷಗಳ ಬೇಡಿಕೆ. ಸದ್ರಿ ಲಭ್ಯ ಅನುದಾನದಲ್ಲಿ 4.10 ಕಿ.ಮೀ ಡಾಂಬರೀಕರಣಗೊಳ್ಳಲಿದೆ. ಪ್ರಸ್ತುತ ಸರಕಾರದಲ್ಲಿ ನನ್ನ ಶಾಸಕತ್ವದ 4.8 ವರ್ಷದಲ್ಲಿ ಈ ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ತರುವಲ್ಲಿ ಪ್ರಯತ್ನ ಮಾಡಿದ್ದೇನೆ. ಇದೀಗ ಮತ್ತೆ ಮಂತ್ರಿಯವರಿಗೆ ಒತ್ತಡ ತರುವ ಮೂಲಕ ಇನ್ನೂ 500 ಕೋಟಿ ಬೇಡಿಕೆ ಇಟ್ಟಿದ್ದೇನೆ. ಗ್ರಾಮೀಣ ರಸ್ತೆಗಳಲ್ಲದೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಬಡವರಿಗಾಗಿ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದು ಈವರೆಗಿನ ಇತಿಹಾಸದಲ್ಲಿಯೇ ಅತೀ ಹೆಚ್ಚಿನ ಪ್ರಗತಿ ಸಾಧಿಸಿದ ಸರಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ವೇದಿಕೆಯಲ್ಲಿ ಶೀನಪ್ಪ ರೈ, ರೆಖ್ಯಾ ಮಿಲ್ಕ್ ಸೊಸೈಟಿ ಅಧ್ಯಕ್ಷ ಪಿ.ಟಿ. ಮ್ಯಾಥ್ಯೂ, ಜಿಲ್ಲಾ ಪಂ. ಮಾಜಿ ಸದಸ್ಯ ಟಿ.ಕೆ. ಮಹೇಂದ್ರನ್, ರಾಮಣ್ಣ ಗೌಡ ಬಾಳ್ತಿಮಾರು ಗುತ್ತು, ಸುಂದರ ಗೌಡ ಕೊಳೆಚ್ಚಾವು, ಸೇಸಪ್ಪ ಗೌಡ ಪೆರ್ಗಡೆಮಾರು ಗುತ್ತು, ಹತ್ಯಡ್ಕ ಗ್ರಾ.ಪಂ. ಸದಸ್ಯರುಗಳಾದ, ಪ್ರಕಾಶ್ ಪಿ.ಕೆ, ಪುಷ್ಪಾವತಿ, ಪ್ರಮುಖರಾದ ಜೋಸೆಫ್ ನೇಲ್ಯಡ್ಕ, ಸೂರಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಡೇನಿಯಲ್ ಜಾರ್ಜ್ ವಂದಿಸಿದರು. ಪಿ.ಸಿ. ಚಾಕೋ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.