ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನ

ಸಂಘಟಿತ ಹೋರಾಟದಿಂದ ಧರ್ಮದ ಉಳಿವು: ಡಾ| ಪ್ರಭಾಕರ ಭಟ್

ಚಾರ್ಮಾಡಿ : ಹಿಂದೂ ಧರ್ಮ ಮತ್ತು ಶ್ರದ್ಧಾಕೇಂದ್ರಗಳ ಮೇಲೆ ನಿರಂತರವಾಗಿ ಆಕ್ರಮಣಗಳಾಗುತ್ತಿದ್ದು, ಹಿಂದು ಸಮಾಜ ಎದ್ದು ನಿಂತು ಇವುಗಳನ್ನು ಪ್ರತಿಭಟಿಸದಿದ್ದರೆ. ಈ ಧರ್ಮಕ್ಕೆ ಉಳಿಗಾಲವಿಲ್ಲ, ಇದಕ್ಕಾಗಿ ಹಿಂದೂ ಸಮಾಜ ಸಂಘಟಿತರಾಗಿ ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕ್ಷೇತ್ರಿಯ ಕಾಂiiಕಾರಿಣಿ ಸದಸ್ಯ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ ಇದರ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಫೆ.೧೭ರಂದು ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಧಾರ್ಮಿಕ ಉಪನ್ಯಾಸ ನೀಡಿದರು.
ಸನಾತನ ಹಿಂದೂ ಧರ್ಮದಲ್ಲಿ ಒಂದೇ ದೇವರನ್ನು ಹಲವು ಹೆಸರುಗಳಿಂದ ನೆನೆಯುವುದೇ ನಮ್ಮ ವೈಶಿಷ್ಟ್ಯತೆಯಾಗಿದೆ. ವಿವಿಧ ಧರ್ಮಗಳ ವಿಚಾರಗಳನ್ನು ಒಪ್ಪಿಕೊಂಡು, ಎಲ್ಲಾ ಧರ್ಮದವರಿಗೆ ಗೌರವ ಕೊಡುತ್ತೇವೆ. ಆದರೆ ನಮ್ಮ ಧರ್ಮದ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದೆ. ಹಿಂದೂ ಸಮಾಜ ದುರ್ಬಲ, ಹೇಡಿ ಸಮಾಜ ಎಂಬಲ್ಲಿಯವರೆಗೆ ಬಂದು ನಿಂತಿದೆ. ಹಿಂದುಗಳಿಗೆ ಹಿಂದೂಗಳೇ ವೈರಿಗಳಾಗುತ್ತಿರುವುದು ದೌರ್ಭಾಗ್ಯ. ನಮ್ಮ ಮನಸ್ಥಿತಿ ಬದಲಾಗಬೇಕು. ನಮ್ಮ ದೌರ್ಬಲ್ಯವನ್ನು ಮೆಟ್ಟಿ ನಿಂತು ಬಲಿಷ್ಠವಾಗಬೇಕು, ನಮ್ಮ ಸಾಮರ್ಥ್ಯವನ್ನು ತೋರಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಅವರು ಮಾತನಾಡಿ, ನಮ್ಮ ಹಿರಿಯರು ನಿರ್ಮಿಸಿರುವ ಇಂತಹ ಪುರಾತನ ದೇವಸ್ಥಾನಗಳ ಪವಿತ್ರತೆಯನ್ನು ಕಾಪಾಡುವುದರ ಜೊತೆಗೆ ಇನ್ನು ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯಬೇಕಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ ಅವರು ಜಾತಿ, ಮತ, ರಾಜಕೀಯ ಬಿಟ್ಟು ಎಲ್ಲರೂ ಒಟ್ಟಾಗಿ ದುಡಿದುದರಿಂದ ಇಂತಹ ಪವಿತ್ರ ದೇವಾಲಯದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹರೀಶ್ ಪೂಂಜ ಅವರು ಬ್ರಹ್ಮಕಲಶೋತ್ಸವದಿಂದ ಲೋಕ ಕಲ್ಯಾಣವಾಗಬೇಕು. ನಾನು ಎಂಬ ಅಹಂ ತೊಲಗಿ, ನಮ್ಮದು ಎಂಬ ಭಾವನೆಯಿಂದ ಎಲ್ಲರೂ ದುಡಿದು, ತನು, ಮನ, ಧನಗಳೊಂದಿಗೆ ಸೇವೆ ಮಾಡಿದ್ದರಿಂದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿದೆ ಎಂದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾಶಿವ ಭಟ್ ಅವರು ಬ್ರಹ್ಮಕಲಶೋತ್ಸವ ಯಶಸ್ವಿಗೆ ದುಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಆಡಳಿತ ಮೊಕ್ತೇಸರ ಕೃಷ್ಣ ರಾವ್ ಕೋಡಿತ್ತಿಲ್ ಅವರು ಸತತ ನಾಲ್ಕು ತಿಂಗಳಿಂದ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಶ್ರಮಪಟ್ಟಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು. ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಕುಡುಮಡ್ಕದ ರಾಘವ ಗೌಡ ಉಪಸ್ಥಿತರಿದ್ದರು. ಬೆನಕ ಆಸ್ಪತ್ರೆಯ ಡಾ| ಗೋಪಾಲಕೃಷ್ಣ ಭಟ್ ಆಗಮಿಸಿದ್ದರು.
ಶ್ರೀ ವಿದ್ಯಾ ಇವರ ಪ್ರಾರ್ಥನೆ ಬಳಿಕ ರಾಜೇಶ್ ಬಂಗ್ಲೆಗುಡ್ಡೆ ಸ್ವಾಗತಿಸಿದರು. ಶಿಕ್ಷಕ ದಿನೇಶ್ ಕಾರ್ಯಕ್ರಮ ನಿರೂಪಿಸಿ, ಚಪ್ಪರ ಸಮಿತಿ ಸಂಚಾಲಕ ಕೊರಗಪ್ಪ ಗೌಡ ಅರಣೆಪಾದೆ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.