ಕುತ್ಯಾರು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ದೇವರ ಉತ್ಸವ-ಬ್ರಹ್ಮಕಲಶೋತ್ಸವದಿಂದ ಧರ್ಮ ಜಾಗೃತಿ: ಸುಬ್ರಹ್ಮಣ್ಯ ಸ್ವಾಮೀಜಿ

ಸೇವಾಕರ್ತೃಗಳಿಗೆ ಗೌರವಾರ್ಪಣೆ : ದೇವಸ್ಥಾನದ ಬ್ರಹ್ಮಕಲಶೋತ್ಸವ, ಪುಷ್ಪರಥ ನಿರ್ಮಾಣ ಮತ್ತು ಜಾತ್ರಾ ಮಹೋತ್ಸವಕ್ಕೆ ವಿವಿಧ ರೀತಿಯಲ್ಲಿ ಸೇವೆ ಮಾಡಿದ ಸೇವಾಕರ್ತೃಗಳನ್ನು ದೇವಸ್ಥಾನದ ವತಿಯಿಂದ ಸ್ವಾಮೀಜಿಯವರು ಗೌರವಿಸಿದರು.
ಪ್ರಸನ್ನ ಕುಮಾರ್ ಪಡಿವಾಳ್, ರಮಾನಂದ ಸಾಲಿಯಾನ್, ಎಂ. ರಾಮ ಅಲೆವೂರಾಯ ಭಟ್ಟ ಚೌಕದಬೆಟ್ಟು, ಶಮಂತ ಕುಮಾರ್ ಜೈನ್, ಎಂ. ಗೋವಿಂದ ಹೊಳ್ಳ, ಮುರಳೀಧರ ಬೆಳ್ಚಡ, ರಾಜೇಶ್ ಗಾಣಿಗ ಕೆಲ್ಲಗುತ್ತು, ಮೂರ್ಜೆ ವಿವೇಕಾನಂದ ಪ್ರಭು, ಶ್ರೀಮತಿ ಸುಶೀಲ ಓಬಯ್ಯ ಹೆಗ್ಡೆ, ವೈ. ನಾಣ್ಯಪ್ಪ ಪೂಜಾರಿ, ಸಂತೋಷ್ ಕುಮಾರ್ ಸಿಹಿಕನಸು, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್‌ನ ಶಂಕರ ಹೆಗ್ಡೆ, ಅನ್ನಸಂತರ್ಪಣಾ ಸಮಿತಿ ಕುತ್ಯಾರು, ಕೆ.ಬಿ ಹರಿಶ್ಚಂದ್ರ ಬಲ್ಲಾಳ್, ವಾಸುದೇವ ಭಟ್, ಅರಿಹಂತ ಜೈನ್ ಪಡಂಗಡಿ, ಮೋಹನ ರಾವ್ ಕುತ್ಯಾರು, ದೇಜಪ್ಪ ಗೌಡ ಎಳ್ಳುಗದ್ದೆ, ಶಿಲ್ಪಿ ರಾಜಗೋಪಾಲ, ಅಣ್ಣು ಮೊಲಿ, ಜಯಕುಮಾರ್ ಕೆಲ್ಲಗುತ್ತು ಇವರನ್ನು ಗೌರವಿಸಲಾಯಿತು.

ಬೆಳ್ತಂಗಡಿ: ದೈವ ದೇವರು ಹಾಗೂ ಮಾನವನಿಗೆ ಅವಿನಾಭಾವ ಸಂಬಂಧವಿದೆ. ಧರ್ಮದ ನೆಲೆಯಲ್ಲಿ ನಾವು ದೈವಿಕ ಶಕ್ತಿಯನ್ನು ನಂಬುತ್ತೇವೆ. ನಮ್ಮ ದೇಹವೇ ದೇವಾಲಯವಾಗಿದೆ. ಧರ್ಮ ಶಾಶ್ವತವಾಗಿ ಉಳಿಯಬೇಕಾದರೆ ದೇವರ ಉತ್ಸವ, ಬ್ರಹ್ಮಕಲಶೋತ್ಸವಾಧಿ ಕಾರ್ಯಗಳು ನಡೆಯುವುದು ಅಗತ್ಯವಾಗಿದೆ ಎಂದು ಸಂಪುಟ ನರಸಿಂಹ ಮಠ ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನ ಇದರ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.19ರಂದು ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಪುಷ್ಪರಥ ವನ್ನು ದೇವರಿಗೆ ಸಮರ್ಪಿಸಿ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ನಮ್ಮ ಒಂದು ವರ್ಷದ ಉತ್ಸವ ದೇವರಿಗೆ ನಿತ್ಯೋತ್ಸವವಾಗಿದೆ. ದೇವಸ್ಥಾನದಲ್ಲಿ ಜಾತ್ರೆಯ ಧ್ವಜಾ ರೋಹಣ ಎಂದರೆ ಆಕಾಶ ಮಾರ್ಗದಲ್ಲಿ ಸಂಚರಿಸುವ
ಎಲ್ಲಾ ದೇವರಿಗೆ ಆಹ್ವಾನ ನೀಡುವುದಾಗಿದೆ. ಅದಕ್ಕಾಗಿ ಧ್ವಜಾರೋಹಣದ ಬಳಿಕ ಗ್ರಾಮದಿಂದ ಯಾರೂ ಹೊರಗೆ ಹೋಗಬಾರದು ಎಂಬ ನಿಯಮ ಬಂದಿದೆ. ಪ್ರತಿ 12 ವರ್ಷಕ್ಕೊಮ್ಮೆ ದೇವರಿಗೆ ಬ್ರಹ್ಮಕಲಶೋತ್ಸವ ನಡೆಯಬೇಕು. ದೇವರ ಸಾನ್ನಿಧ್ಯವನ್ನು ಹೆಚ್ಚಿಸುವುದೇ ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಧಾರ್ಮಿಕ ಉಪನ್ಯಾಸ ನೀಡಿದ ಆಗಮ ವಿದ್ವಾಂಸ ಪಂಜ ಭಾಸ್ಕರ ಭಟ್ ಅವರು ದೇವರ ಅಷ್ಟಬಂಧ ಅವಧಿ 12 ವರ್ಷ ಮಾತ್ರ. ನಂತರ ಪುನಃ ಅಷ್ಟಬಂಧ ನಡೆಯಬೇಕಾಗುತ್ತದೆ. 54 ವಿವಿಧ ದ್ರವ್ಯಗಳ ಕಲಶದ ಜೊತೆ ಬ್ರಹ್ಮಕಲಶ ಮಾಡಿದಾಗ ಸಾನಿಧ್ಯ ಪರಿಪೂರ್ಣವಾಗುತ್ತದೆ. ನಶಿಸಿಹೋದ ಸೃಷ್ಟಿಯನ್ನು ವೃದ್ಧಿಸುವುದು ಕೂಡಾ ಬ್ರಹ್ಮಕಲಶದ ಉದ್ದೇಶವಾಗಿದೆ. ದೇವರಿಗೆ ಶುದ್ಧ ಹಾಲು, ಹೂವನ್ನು ಅರ್ಪಿಸಬೇಕು ಆದರೆ ಇಂದಿನ ಸನ್ನಿವೇಶದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಅಶುದ್ಧವಾದ ಮಾಲಿನ್ಯದ ಪರಿಹಾರಕ್ಕಾಗಿ ಇಂತಹ ಕಾರ್ಯಕ್ರಮಗಳು ನಡೆಸಲಾಗುತ್ತಿದೆ ಎಂದು ಬ್ರಹ್ಮಕಲಶ ಹಾಗೂ ರಥೋತ್ಸವದ ಉದ್ದೇಶಗಳನ್ನು ವಿವರಿಸಿದರು.
ಮುಖ್ಯ ಅಭಾಗ್ಯತರಾಗಿ ಭಾಗವಹಿಸಿದ್ದ ನ.ಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅವರು ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದಂತಹ ಕಾರ್ಯಕ್ರಮಗಳ ಮೂಲಕ ಧರ್ಮದ ಜಾಗೃತಿಯಾಗಿ ಸಮಾಜದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ವೇದ ಮೂರ್ತಿ ನಂದಕುಮಾರ್ ತಂತ್ರಿಯವರು ಬ್ರಹ್ಮಕಲಶೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು.
ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕೆಲ್ಲಗುತ್ತು ಸಬ್ರಬೈಲು ಜಯವರ್ಮರಾಜ ಬಲ್ಲಾಳ್ ಸ್ವಾಗತಿಸಿ, ದೇವರ ಸಂಕಲ್ಪ ಇದ್ದರೆ ದೇವಾಲಯದ ಯಾವುದೇ ಕಾರ್ಯ ಯಶಸ್ವಿಯಾಗಿ ನಡೆಯುತ್ತದೆ. ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಅವರ ಅಪೇಕ್ಷೆಯಂತೆ ನಾವು ಕುತ್ಯಾರು ದೇವಸ್ಥಾನದ ಆಡಳಿತವನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ಕೆಲ್ಲಗುತ್ತು ವಿಜಯಲಕ್ಷ್ಮೀ ಆರಿಗ ಉಪಸ್ಥಿತರಿದ್ದರು. ಬೆಳ್ತಂಗಡಿ ಸಾಯಿ ಮಂದಿರದ ಕು|ಅಕ್ಷತಾ ಇವರು ಪ್ರಾರ್ಥನೆ ಹಾಡಿದರು. ಶಿಕ್ಷಕ ಲ| ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಆಡಳಿತ ಮೊಕ್ತೇಸರ ಕೆ. ರಾಜವರ್ಮರಾಜ್ ಬಲ್ಲಾಳ್ ಧನ್ಯವಾದವಿತ್ತರು. ರಾತ್ರಿ ದೇವರ ಉತ್ಸವ, ಪಲ್ಲಕಿ ಉತ್ಸವ, ಅಷ್ಠಾವಧಾನ ಸೇವೆ ಚಂದ್ರಮಂಡಲೋತ್ಸವ, ಅಶ್ವಥಕಟ್ಟೆ ಪೂಜೆ ಜರುಗಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.