ಲಾಯಿಲ : ವಿದ್ಯುತ್ ಕಂಬದಿಂದ ಅಪಾಯ

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮ ಪಂಚಾಯತ್‌ಗೊಳಪಟ್ಟ ಆದರ್ಶ ನಗರ ಎಂಬಲ್ಲಿ ಹಲವಾರು ವರ್ಷ ಹಳೆಯದಾದ ಹೈಟೆನ್ಷನ್ ವಿದ್ಯುತ್ ಲೈನ್ ಧರ್ಮಸ್ಥಳ ಕಡೆಗೆ ಹಾದು ಹೋಗಿದ್ದು ಈ ವಿದ್ಯುತ್ ಕಂಬದ ಬುಡದ ಬಹಳ ಹಳೆಯ ಕಾಂಕ್ರೀಟ್ ಕಿತ್ತು ಹೋಗಿ ಯಾವ ಸಮಯದಲ್ಲಾದರು ಬೀಳುವ ಸ್ಥಿತಿಯಲ್ಲಿದೆ. ಇದರ ಬಗ್ಗೆ ಗ್ರಾಮಸ್ಥರು ಹಲವಾರು ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಇದರ ಬಗ್ಗೆ ಸ್ಪಂದನೆ ಸಿಗಲಿಲ್ಲ. ಬದಲಾಗಿ ಆ ವಿದ್ಯುತ್ ತಂತಿಯ ಅಡಿಯಲ್ಲಿ ವಾಸಿಸುವವರು ಮನೆ ಖಾಲಿ ಮಾಡಿ ಹೋಗಿ ಎಂಬ ಉಡಾಫೆಯ ಉತ್ತರ ಮಾತ್ರ ಗ್ರಾಮಸ್ಥರಿಗೆ ದೊರಕಿದ್ದು. ಇದರ ಮಧ್ಯೆ ಕಳೆದ ವರ್ಷ ಪತ್ರಿಕೆಯಲ್ಲಿ ಲೋಕಾಯುಕ್ತ ಮೆಸ್ಕಾಂ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಎಂಬ ವರದಿಯನ್ನು ನೋಡಿ ಅವರಿಗೂ ಮನವಿ ಸಲ್ಲಿಸಲಾಯಿತು. ಇದನ್ನು ಪರಿಶೀಲಿಸಿದ ಅಧಿಕಾರಿಗಳು ತಕ್ಷಣ ಕಾರ್ಯಪ್ರವರ್ತರಾಗಿ ಮುಂದೆ ನಡೆಯುವ ಅನಾಹುತವನ್ನು ಮನಗಂಡ ಅಧಿಕಾರಿಗಳು ಅಲ್ಲಿಂದ ವಿದ್ಯುತ್ ಕಂಬಗಳನ್ನು ತೆರವುಗೂಳಿಸಿ ಬೇರೆ ಕಡೆಗೆ ಸ್ಥಳಾಂತರಗೊಳಿಸಲು ಅನುಮತಿ ನೀಡಿದರು. ಇದರ ಖರ್ಚು ವೆಚ್ಚಗಳನ್ನು ಸ್ಥಳೀಯ ಪಂಚಾಯತ್ ಭರಿಸುವುದಾಗಿ ಒಪ್ಪಿಕೊಂಡು ವರ್ಷಗಳು ಕಳೆದರೂ ಒಂದಲ್ಲ ಒಂದು ಕಾರಣ ಹೇಳಿ ಗ್ರಾಮಸ್ಥರನ್ನು ವಂಚಿಸುವ ಪ್ರಯತ್ನ ಸ್ಥಳೀಯ ಪಂಚಾಯತ್ ಅಧಿಕಾರಿಗಳಿಂದ ನಡೀತಾ ಇದೆ. ಮುಂದೆ ವಿದ್ಯುತ್ ತಂತಿ ಕಡಿದು ಬಡ ಗ್ರಾಮಸ್ಥರ ಪ್ರಾಣಹಾನಿ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿ ಕಳಕಳಿಯ ಮನವಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.