ಅರಸಿನಮಕ್ಕಿ : ವಾರ್ಷಿಕ ಸಮಾವೇಶ, ಸನ್ಮಾನ, ಪುಸ್ತಕ ವಿತರಣೆ, 1 ಕೋಟಿ ರೂ. ವೆಚ್ಚದ ಸಭಾಭವನಕ್ಕೆ ಶಿಲಾನ್ಯಾಸ ಸಮಾರಂಭ

ಅರಸಿನಮಕ್ಕಿ : ಮೂಲ್ಯರ ಯಾನೆ ಕುಲಾಲರ ಸಂಘ ಅರಸಿನಮಕ್ಕಿ ಮತ್ತು ಮಹಿಳಾ ಸಂಘ ಅರಸಿನಮಕ್ಕಿ ಇದರ ಆಶ್ರಯದಲ್ಲಿ ಹೊಸ ಸಭಾಭವನ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ, 23ನೇ ವಾರ್ಷಿಕ ಸಂಭ್ರಮ ಮತ್ತು ಸಮಾಜ ಬಾಂಧವರ ಕಲಿಕೆಗೆ ಪ್ರೋತ್ಸಾಹ ನೀಡುವ ಪುಸ್ತಕ ವಿತರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಫೆ. 18ರಂದು ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ವಿಟ್ಲ ಕುಲಾಲರ ಸಂಘದ ಸ್ಥಾಪಕಾಧ್ಯಕ್ಷ ರಮಾನಾಥ ವಿಟ್ಲ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ ಕೃಷ್ಣಪ್ಪ ಕುಲಾಲ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಸಕ ವಸಂತ ಬಂಗೇರ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ ಕುಲಾಲ್, ಗುರುವಾಯನಕೆರೆ ಕುಲಾಲರ ಸಂಘದ ಉಪಾಧ್ಯಕ್ಷ ದಿನಕರ ಬಂಗೇರ, ಅರಸಿನಮಕ್ಕಿ ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಹರಿಪ್ರಸಾದ್, ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ಜಗನ್ನಾಥ ಗೌಡ ಅಡ್ಕಾಡಿ, ಕುಲಾಲರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ, ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮೋಹನ ಶೆಟ್ಟಿಗಾರ್, ಅರಸಿನಮಕ್ಕಿ ಶಾಲಾ ಮುಖ್ಯ ಶಿಕ್ಷಕ ಸಂಜೀವ ನಾಯ್ಕ್ ಎನ್, ಹಕ್ಕೊತ್ತಾಯ ಸಮಿತಿ ಪ್ರ. ಕಾರ್ಯದರ್ಶಿ ಪುಷ್ಪರಾಜ್ ಲಾಯಿಲ, ಕಾಪು ಉಪ್ಪರಡ್ಕ ದೈವಸ್ಥಾನ ಸಮಿತಿ ಅಧ್ಯಕ್ಷ ಎಮ್ ಗೋಪಾಲ ಶೆಟ್ಟಿಗಾರ್, ಅರಸಿನಮಕ್ಕಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀಕರ ರಾವ್ ಅಡ್ಕಾರಿ, ವಾಸ್ತು ಶಿಲ್ಪಿ ಮನ್ಮಥ ಆಚಾರ್ಯ, ಶಿಲ್ಪಾ ಕನ್‌ಸ್ಟ್ರಕ್ಷನ್ ನೆಲ್ಯಾಡಿ ಇದರ ಇಂಜಿನಿಯರ್ ಶಿವಣ್ಣ ಪಿ ಹೆಗ್ಡೆ, ಬಂದಾರು ಗ್ರಾ.ಪಂ ಅಧ್ಯಕ್ಷ ಉದಯ ಕುಲಾಲ್ ಬಿ.ಕೆ, ಮಹಿಳಾ ಘಟಕದ ಅಧ್ಯಕ್ಷೆ ಸರಸ್ವತಿ ಪಿ.ಕೆ, ರಂಜಿತ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.