ಮಹಾವೀರ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್ ಶುಭಾರಂಭ

ಉಜಿರೆ : ಉಜಿರೆ ಎಸ್.ಡಿ.ಎಂ ಕಾಲೇಜು ರಸ್ತೆಯ ಚೈತ್ರಿಕ ಟವರ್‍ಸ್‌ನಲ್ಲಿ ಮಹಾವೀರ ಟೆಕ್ಸ್‌ಟೈಲ್ಸ್ ಇಂದು(ಫೆ. 16) ಶುಭಾರಂಭಗೊಂಡಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರು ವಂ. ಫಾ. ಜೋಸೆಫ್ ಮಸ್ಕರೇನ್ಹಸ್, ಉಜಿರೆ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎಂ. ಹಮೀದ್, ಉಜಿರೆ ಕೆ.ಎನ್.ಎಸ್ ಟವರ್‍ಸ್‌ನ ಮಾಲಕ ಮೋಹನ್ ಶೆಟ್ಟಿಗಾರ್, ಸಿವಿಲ್ ಇಂಜಿನಿಯರ್ ಜಗದೀಶ್ ಪ್ರಸಾದ್, ಉದ್ಯಮಿ ಪಿ. ಸದಾಶಿವ ರಾವ್ ಭಾಗವಹಿಸಿದ್ದರು. ಬಂದಂತಹ ಅತಿಥಿಗಳನ್ನು ಮಾಲಕರು ಸ್ವಾಗತಿಸಿ, ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.