ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಮಂಗಳಗಿರಿಯಲ್ಲಿ ಕಾಲಾವಧಿ ನೇಮೋತ್ಸವ

Advt_NewsUnder_1
Advt_NewsUnder_1
Advt_NewsUnder_1

ಮುಂಡೂರು: ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ ಮುಂಡೂರುನಲ್ಲಿ ಕಾಲಾವಧಿ ನೇಮೋತ್ಸವ ಫೆ.12 ಮತ್ತು ಫೆ.13ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಫೆ.12ರಂದು ಬೆಳಗ್ಗೆ 7ರಿಂದ ಗಣಹೋಮ, ನವಕ ಕಲಶ ಅಭಿಷೇಕ, ಬೆಳಗ್ಗೆ 10ರಿಂದ ಶ್ರೀ ನಾಗಬ್ರಹ್ಮ ದೇವರಿಗೆ ತನು ತಂಬಿಲ, ಆಶ್ಲೇಷಬಲಿ, ದೈವಗಳಿಗೆ ಪರ್ವ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ ದುರ್ಗಾಪೂಜೆ, ಸಂಜೆ 7ರಿಂದ ಉದ್ಭವ ಮಹಾಗಣಪತಿಗೆ ಮತ್ತು ಶ್ರೀ ದೇವಿ ನಾಗಾಂಬಿಕಾ ಅಮ್ಮನವರಿಗೆ ಜೋಡುರಂಗಪೂಜೆ, ರಾತ್ರಿ 9ರಿಂದ ಶ್ರೀ ನಾಗಂಭಿಕಾ ಭಜನಾ ಮಂಡಳಿಯ ಸದಸ್ಯರಿಂದ ಕಿರುಹಾಸ್ಯ ನಾಟಕ `ಆಯಗ್ ಬಿ.ಪಿ!’ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಸ್ಯ ಪ್ರಹಸನಗಳು ಪ್ರದರ್ಶನಗೊಂಡಿತು.
ಫೆ.13ರಂದು ಬೆಳಗ್ಗೆ 7ಕ್ಕೆ ಶ್ರೀ ದೇವಿ ನಾಗಾಂಬಿಕಾ ಅಮ್ಮನವರಿಗೆ ಪಂಚಾಮೃತ ಅಭಿಷೇಕ, 10ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ಜರುಗಿತು. ಸಂಜೆ 6ಕ್ಕೆ ಶ್ರೀ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ, ರಾತ್ರಿ 7ಕ್ಕೆ ದೈವದ ಭಂಡಾರವನ್ನು ಮೆರವಣಿಗೆಯಲ್ಲಿ ತಂದ ಬಳಿಕ ಅಮ್ಮನವರ ಉತ್ಸವ ನಡೆಯಿತು. ರಾತ್ರಿ ಗುರುಮಿತ್ರ ಸಮೂಹ ಬೆಳ್ತಂಗಡಿಯವರಿಂದ ನೃತ್ಯವೈಭವ ಜರುಗಿತು. ರಾತ್ರಿ 10ಕ್ಕೆ ಶ್ರೀ ವರಾಹಿ, ಮಂತ್ರಮೂರ್ತಿ, ಶ್ರೀ ನಾಗಕಲ್ಲುರ್ಟಿ, ಶ್ರೀ ಶಕ್ತಿದೇವತೆ ದೈವಗಳ ಮತ್ತು ಶ್ರೀ ನಾಗಾಂಬಿಕಾ ಅಮ್ಮನವರ ಭೇಟಿ ಮತ್ತು ಉತ್ಸವ ಬಲಿ, ರಾತ್ರಿ 10.30ಕ್ಕೆ ಶ್ರೀ ದೈವಗಳು ಕೆಳಗಿನ ಅಂಕಣಕ್ಕೆ ಇಳಿದು ಬಾರೀ ಸಂಖ್ಯೆಯಲ್ಲಿ ಭಾಗವಹಿಸಿದ ಊರ-ಪರವೂರ ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಲ್ಲಿ ನೇಮೋತ್ಸವ ನಡೆಯಿತು.
ದೇವಸ್ಥಾನದ ಮೊಕ್ತೇಸರ ರಾಜೀವ್, ಶ್ರೀ ನಾಗಂಬಿಕಾ ಭಜನಾ ಮಂಡಳಿ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಜಯರಾಜ್, ಶ್ರೀ ನಾಗಕಲ್ಲುರ್ಟಿ ಭಕ್ತವೃಂದದವರು ಊರ, ಪರವೂರ ಭಕ್ತರು ಸಹಕಾರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.