ಉಜಿರೆಯಲ್ಲಿ ಪವರ್‌ಮಾಕ್ಸ್ ಬ್ಯಾಟರಿನ ಶಾಖೆ ಶುಭಾರಂಭ

ಉಜಿರೆ : ಪವರ್ ಮಾಕ್ಸ್‌ನ ನೂತನವಾಗಿ ಆರಂಭಗೊಂಡ ಉಜಿರೆ ಶಾಖೆಯು ಫೆ. 1ರಂದು ಉಜಿರೆ ರೆಬೆಲ್ಲೋ ಕಾಂಪ್ಲೆಕ್ಸ್ ಆರ್.ಕೆ ನಗರ ಮುಖ್ಯರಸ್ತೆಯಲ್ಲಿ ಶುಭಾರಂಭಗೊಂಡಿತು. ನೂತನ ಶಾಖೆಯನ್ನು ಉಜಿರೆ ಚರ್ಚ್‌ನ ಧರ್ಮಗುರುಗಳಾದ ವಂ. ಫಾ. ಜೋಸೆಫ್ ಮಸ್ಕರೇನ್ಹಸ್ ಆಶೀರ್ವದಿಸಿ, ಬೆಳ್ತಂಗಡಿ, ಉಜಿರೆ, ಗುರುವಾಯನಕೆರೆ ಗ್ರಾಹಕರಿಗೆ ಇದು ಇಂದು ಸಂತೋಷದ ಸುದ್ದಿ. ಯಾವುದೇ ಉದ್ಯಮವು ನಿಷ್ಠೆ ಮತ್ತು ಪ್ರಾಮಾಣಿಕದಿಂದ ಮಾಡಿದ ಸೇವೆ ಯಾವಾಗಲು ಉದ್ಯಮವನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಕಾಂಪ್ಲೆಕ್ಸ್‌ನ ಮಾಲಕ ಜೋಸೆಫ್ ರೆಬೆಲ್ಲೋ ಉಪಸ್ಥಿತರಿದ್ದರು. ಬಂದಂತಹ ಅತಿಥಿ ಗಣ್ಯರನ್ನು ಮಾಲಕರಾದ ಹೆಲಾರ್‍ಡ್ ಡಿಸೋಜ ಸ್ವಾಗತಿಸಿ, ವಂದಿಸಿದರು. ಶಾಖೆಯ ಶುಭಾರಂಭ ಪ್ರಯುಕ್ತ ಇನ್ವಟರ್‌ಗಳು ಮತ್ತು ಬ್ಯಾಟರಿಗಳು ನಂಬಲಾಸಾಧ್ಯವಾದ ಬೆಲೆಗಳಲ್ಲಿ ಲಭ್ಯ. ಪವರ್ ಮಾಕ್ಸ್‌ನ ಇನ್ವಟರ್, ಬ್ಯಾಟರಿ, ಟ್ರೋಲಿ ಕೇವಲ ರೂ. 15,489 ಹಾಗೂ 3 ವರ್ಷ ವ್ಯಾರಂಟಿ ಹಾಗೂ ಲುಮಿನಸ್ ಇನ್ವಟರ್ ಬ್ಯಾಟರಿ ಹಾಗೂ ಟ್ರೋಲಿ ಕೇವಲ ರೂ. 14,299 ದೊರೆಯುತ್ತದೆ. ಎಕ್ಸ್‌ಡ್ ಬ್ಯಾಟರಿ ರೂ. 13,000. ಹಾಗೂ ಅಮರೋನ್ ಬ್ಯಾಟರಿ ರೂ. 13,250 ಕಡಿಮೆ ದರಗಳಲ್ಲಿ ಲಭ್ಯ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.