ತಾ.ಪಂ ಮಾಜಿ ಅಧ್ಯಕ್ಷ ಎನ್. ಜತ್ತನ್ನ ಗೌಡ ಮತ್ತು ಶ್ರೀಮತಿ ಅಪ್ಪಿ ಜೆ. ಗೌಡರ ವೈವಾಹಿಕ ಸುವರ್ಣೋತ್ಸವ ಸಂಭ್ರಮ

Advt_NewsUnder_1
Advt_NewsUnder_1
Advt_NewsUnder_1

ಬೆಳಾಲು : ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಬೆಳಾಲಿನ ಏರ್ದೊಟ್ಟು ನಿವಾಸಿ ಎನ್.ಜತ್ತನ್ನ ಗೌಡ ಮತ್ತು ಶ್ರೀಮತಿ ಅಪ್ಪಿ ಜೆ.ಗೌಡರ ವೈವಾಹಿಕ ಜೀವನದ 50 ಸಂವತ್ಸರಗಳ ಸಂದರ್ಭದಲ್ಲಿ ಸುವರ್ಣೋತ್ಸವ ಸಂಭ್ರಮ ಫೆ.8 ರಂದು ಬೆಳಾಲಿನ ಶ್ರೀ ಸೌಧ ಮನೆಯಲ್ಲಿ ಜರಗಿತು.
ಕಾರ್ಯಕ್ರಮದ ಪ್ರಯುಕ್ತ ವಿಟ್ಲ ವಿಠಲ ನಾಯಕ್ ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ನೆರವೇರಿತು. ಈ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಯು.ವಿಜಯ ರಾಘವ ಪಡ್ವೆಟ್ನಾಯ, ಬೆಳ್ತಂಗಡಿ ಶಾಸಕ ಹಾಗೂ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ.ವಸಂತ ಬಂಗೇರ, ಭಾರತೀಯ ಜನತಾ ಪಕ್ಷ ಜಿಲ್ಲಾ ಪ್ರಬಾರಿ ನ್ಯಾಯವಾದಿ ಕೆ.ಪ್ರತಾಪಸಿಂಹ ನಾಯಕ್, ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಜಿ.ಸೋಮೇ ಗೌಡ, ಗೌಡ ಯುವ ವೇದಿಕೆ ಅಧ್ಯಕ್ಷ ಜಯಾನಂದ ಗೌಡ ಟಿ., ತಾಲೂಕು ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ ಮತ್ತು ಪದಾಧಿಕಾರಿಗಳು, ವಕೀಲರುಗಳು, ಶ್ರೀ ಕ್ಷೇತ್ರ ಧ.ಗ್ರಾ ಯೋಜನೆಯ ನಿರ್ದೇಶಕ ಬೂದಪ್ಪ ಗೌಡ, ಇಲಾಖಾಧಿಕಾರಿಗಳು, ಅಭಿಮಾನಿಗಳು, ಹಿತೈಷಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಜತ್ತನ್ನ ಗೌಡರ ಪುತ್ರರಾದ ಜಯಾನಂದ ಗೌಡ, ಮೋಹನ ಗೌಡ, ಶ್ರೀನಿವಾಸ ಗೌಡ, ಪುತ್ರಿ ಜಯಂತಿ, ಸೊಸೆಯಂದಿರಾದ ಹರಿಣಾಕ್ಷಿ, ಜಯಲಕ್ಷ್ಮೀ, ವಿದ್ಯಾ ಎಸ್. ಗೌಡ ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದು ಗಣ್ಯ ರನ್ನು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.