ಮುಂಡಾಜೆ ಪರಶುರಾಮ ದೇವಸ್ಥಾನ ವತಿಯಿಂದ ಲೋಕ ಕಲ್ಯಾಣಾರ್ಥ ಪಾದಯಾತ್ರೆ

ಮುಂಡಾಜೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮಂಜುಶ್ರೀ ಭಜನಾ ಮಂಡಳಿ, ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ, ನವಗ್ರಹ ಸಹಿತ ಶ್ರೀ ಶನೈಶ್ಚರ ಶ್ರೀ ಧನ್ವಂತರಿ ಪೂಜಾ ಸಮಿತಿ, ಮತ್ತು ಶ್ರೀ ಸನ್ಯಾಸಿ ಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಫೆ. 10 ರಂದು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಿಂದ ಮಠ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಯಿತು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಾಬು ಪೂಜಾರಿ ಕೂಳೂರು, ಕಾರ್ಯದರ್ಶಿ ಚಂದ್ರಕಾಂತ ಪ್ರಭು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಎಸ್ ಗೋಖಲೆ, ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಅಡೂರು ಗೋಪಾಲಕೃಷ್ಣ ರಾವ್, ದುರ್ಗಾಪರಮೇಶ್ವರಿ ದೇವಸ್ಥಾನದ ಸಮಿತಿ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ತಾ.ಪಂ ಸದಸ್ಯೆ ಲೀಲಾವತಿ, ಗ್ರಾ.ಪಂ ಸದಸ್ಯರಾದ ಚೆನ್ನಕೇಶವ, ಅಶ್ವಿನಿ ಎ ಹೆಬ್ಬಾರ್, ಗಣೇಶ ಬಂಗೇರ ಕೂಳೂರು, ಪ್ರಧಾನ ಅರ್ಚಕ ಸತ್ಯನಾರಾಯಣ ಹೊಳ್ಳ, ಮೊದಲಾದವರು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.