ಮಾರ್ಚ್ 8, 9 ರಂದು ಮೂಢನಂಬಿಕೆ ಮತ್ತು ನಂಬಿಕೆ ಕುರಿತ ಜಾಗತಿಕ ಸಮಾವೇಶ

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣಮಹೋತ್ಸವ ವರ್ಷದ ಅಂಗವಾಗಿ ಮಾರ್ಚ್ 8, 9 ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ಧಾರ್ಮಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಧರ್ಮಾಚರಣೆಯಲ್ಲಿರುವ ನಂಬಿಕೆಗಳು, ಕಟ್ಟುಕಟ್ಟಳೆಗಳು, ಆಚರಣೆಗಳು ಇವುಗಳನ್ನು ಕೇಂದ್ರ ಬಿಂದುವಾಗಿರಿಸಿಕೊಂಡು ನಂಬಿಕೆ ಮತ್ತು ಅದರಾಚೆಗೆ ಎಂಬ ಶೀರ್ಷಿಕೆಯಲ್ಲಿ ಜಗತ್ತಿನ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ವಿವಿಧ ನಂಬಿಕೆಗಳ ಪ್ರತಿಪಾದನೆ ಮತ್ತು ವಿಮರ್ಶೆಯನ್ನು ನಡೆಸುವ ಉದ್ದೇಶದಿಂದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಭಾರತೀಯ ವಿದ್ಯಾಭವನ, ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ನಾವು ಅನೂಚೂನವಾಗಿ ನಂಬಿಕೊಂಡು ಬಂದಿರುವ ಹಲವಾರು ಶಾಸ್ತ್ರಗಳು ಉದಾಹರಣೆಗೆ ಜ್ಯೋತಿಷ್ಯ, ಹಸ್ತಸಾಮುದ್ರಿಕಾ, ಜನ್ಮಜನ್ಮಾಂತರ ಫಲಗಳು, ಆಣೆ, ಭಾಷೆ, ಪ್ರಮಾಣ ಮುಂತಾದವುಗಳನ್ನು ವಿಮರ್ಶೆಗೊಳಪಡಿಸಿ ಜೊಳ್ಳು ಗಟ್ಟಿಯನ್ನು ಬೇರ್ಪಡಿಸುವ ಅಗತ್ಯವಿದೆಯಿಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಎನ್.ಸುರೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್ ಮತ್ತಿತರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.