ಬಂದ್ ಕರೆ ನೀಡುವುದು ಸಂವಿಧಾನ ಬಾಹಿರ : ಹೈಕೋರ್ಟ್

Advt_NewsUnder_1
Advt_NewsUnder_1
Advt_NewsUnder_1

ಬಂದ್ ಕರೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ 

ಸುದ್ದಿ ಆಂದೋಲನಕ್ಕೆ ಸಂದ ಜಯ : ಬಂದ್ ಕರೆ ಕೊಡುವುದರ ವಿರುದ್ಧ ಸುದ್ದಿ ವೇದಿಕೆ ರಂತರಆಂದೋಲನ ನಡೆಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಬಲಾತ್ಕಾರದ ಬಂದ್ ನಡೆಸಬಾರದು, ಬಂದ್ ಕರೆ ಕೊಟ್ಟವರೇ ಕಷ್ಟ ನಷ್ಟಕ್ಕೆ ಹೊಣೆ ಹೊರಬೇಕೆಂದು ಸುದ್ದಿ ಬಳಗ ಹಮ್ಮಿಕೊಂಡಿದ್ದ ಜನಾಂದೋಲನಕ್ಕೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿತ್ತು. ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಬೆಳ್ತಂಗಡಿ ತಾಲೂಕುಗಳಲ್ಲಿ ನಡೆದಿದ್ದ ಸುದ್ದಿ ಆಂದೋಲನಕ್ಕೆ ವಿದ್ಯಾರ್ಥಿಗಳು, ವ್ಯಾಪಾರಿಗಳು, ಜನಸಾಮಾನ್ಯರು, ವಕೀಲರು, ವೈದ್ಯರು, ಶಿಕ್ಷಣ ಸಂಸ್ಥೆಗಳ ಪ್ರಮುಖರು, ವಿವಿಧ ರಾಜಕೀಯ ಪಕ್ಷ, ಸಂಘ-ಸಂಸ್ಥೆಗಳ ಪ್ರಮುಖರು ಬೆಂಬಲ ನೀಡಿದ್ದರು. ಮಾತ್ರವಲ್ಲದೆ ಬಂದ್ ವಿರೋಧಿಸಿ, ಸುದ್ದಿ ವೇದಿಕೆಯ ಆಂದೋಲನ ಬೆಂಬಲಿಸಿ ತಾ.ಪಂ., ನಗರಸಭೆ, ಎಪಿಎಂಸಿ, ಗ್ರಾ.ಪಂ.ಗಳು, ಶಿಕ್ಷಣ ಸಂಸ್ಥೆಗಳು, ಸಹಕಾರಿ ಸಂಘಗಳು ನಿರ್ಣಯ ಅಂಗೀಕರಿಸಿದ್ದವು. ಹಲವಾರು ಮಂದಿ ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ಬಲಾತ್ಕಾರದ ಬಂದ್‌ಗೆ ಬೆಂಬಲವಿಲ್ಲ ಎಂಬ ಬೋರ್ಡು ಹಾಕಿದ್ದರು. ಇದರಿಂದ ದ.ಕ. ಜಿಲ್ಲೆಯಲ್ಲಿ ಬಂದ್ ವಿರುದ್ಧದ ಅಭಿಪ್ರಾಯ ಬಹಿರಂಗ ಅಭಿವ್ಯಕ್ತಿಯಾಗ ತೊಡಗಿತು. ಜಿಲ್ಲಾಡಳಿತ ಕೂಡಾ ಬಲಾತ್ಕಾರದ ಬಂದ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಿಸತೊಡಗಿತು. ಆದರೂ ಕೆಲವು ಮಂದಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಬಂದ್ ಬೇಕೆ ಬೇಕು ಎಂಬ ನಿಲುವು ಪ್ರಕಟಿಸುತ್ತಿದ್ದರು.
ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ವಿರುದ್ಧ ಮತ್ತು ಸಂಪಾದಕ ಡಾ| ಯು.ಪಿ.ಶಿವಾನಂದರ ವಿರುದ್ಧ ಅಪಪ್ರಚಾರ ನಡೆಸತೊಡಗಿದ್ದರು. ಈ ಅಪಪ್ರಚಾರದ ವಿರುದ್ಧ ಪತ್ರಿಕೆ ಹೋರಾಟ ಆರಂಭಿಸಿ, ಪತ್ರಿಕೆಯನ್ನು 2 ವಾರ ಸ್ಥಗಿತಗೊಳಿಸಿ, ಜನರ ಬೆಂಬಲ ಪಡೆದು ಪುನರಾರಂಭಗೊಳಿಸಿದ್ದು ಸ್ಮರಿಸಿಕೊಳ್ಳಬೇಕಾದ ವಿಷಯ. ಇವೆಲ್ಲಕ್ಕೂ ಮೂಲ ಪತ್ರಿಕೆಯ ಬಲಾತ್ಕಾರದ ಬಂದ್ ವಿರೋಧಿ ನಿಲುವೇ ಆಗಿತ್ತು.
ಇದೀಗ ಕರ್ನಾಟಕ ಹೈಕೋರ್ಟ್ ಬಂದ್ ಕೂಡದು ಎಂದು ತೀರ್ಪು ನೀಡಿರುವುದು ಸುದ್ದಿಯ ಆಂದೋಲನಕ್ಕೆ ದೊರೆತ ಜಯವೆಂದೇ ಪರಿಗಣಿಸಲ್ಪಡುತ್ತದೆ.

ಹೈಕೋರ್ಟ್ ಆದೇಶ ಸ್ವಾಗತಾರ್ಹ – ಸಂಸದ ಕಟೀಲ್ : ಬಂದ್ ಅಸಾಂವಿಧಾನಿಕ ಎಂದು ಹೈಕೋರ್ಟ್ ಒಳ್ಳೆಯ ತೀರ್ಪನ್ನು ನೀಡಿದೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ದ.ಕ. ಹೇಳಿದ್ದಾರೆ. ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಅವರು ಬಂದ್‌ಗೆ ಕರೆ ನೀಡುವುದು ಸರಿಯಲ್ಲ. ಅದರಿಂದ ತೊಂದರೆಗಳಾದರೆ ಅದರ ಖರ್ಚು ವೆಚ್ಚವನ್ನು ಕರೆ ನೀಡಿದವರೇ ನೀಡಬೇಕೆಂದು ಈ ಹಿಂದೆಯೇ ಕೋರ್ಟ್ ಹೇಳಿತ್ತು. ಈಗ ಒಳ್ಳೆಯ ಆದೇಶವನ್ನು ಹೈಕೋರ್ಟ್ ನೀಡಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಬಂದ್‌ಗೆ ಕರೆ ನೀಡದಿರುವುದೇ ಉತ್ತಮ-ಶಾಸಕ ಬಂಗೇರ : `ಬಂದ್ ಅಸಾಂವಿಧಾನಿಕ’ ಎಂದು ಹೈಕೋರ್ಟು ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಮುಷ್ಕರ, ಚಳವಳಿ ಮಾಡಲೇ ಬಾರದು ಎಂದು ಹೇಳಲಾಗದು. ಬಂದ್, ಮುಷ್ಕರ, ಚಳವಳಿ ಯಾವುದು ಮಾಡುವುದಿದ್ದರೂ ಸಾರ್ವಜನಿಕರಿಗೆ ಸಮಸ್ಯೆಯಾಗಬಾರದು, ಯಾವುದೇ ರೀತಿಯ ತೊಂದರೆಗಳಾಗಬಾರದು. ಆಸ್ತಿ-ಪಾಸ್ತಿ ಸೋತ್ತುಗಳಿಗೆ ಹಾನಿ ಮಾಡಿ ನಷ್ಟವನ್ನು ಉಂಟುಮಾಡುವ ಬಂದ್‌ಗಳು ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಅದಕ್ಕಾಗಿ ಯಾವುದೇ ಸಮಸ್ಯೆಗಳು ಬಂದಾಗ ಬಂದ್‌ಗೆ ಕರೆ ನೀಡುವ ಬದಲು ಇದನ್ನು ಸೌಹಾರ್ದಯುತವಾಗಿ ಎಲ್ಲರೂ ಸೇರಿ ಪರಿಹರಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಿ ಪ್ರಯತ್ನಿಸುವುದೇ ಎಲ್ಲರಿಗೂ ಸುಖ ಎಂದು ತಿಳಿಸಿದ್ದಾರೆ.

ಬಂದ್ ಕರೆ ಕೊಡುವುದು ತಪ್ಪು- ರಾಜೇಂದ್ರ ಕುಮಾರ್ : ದೇಶದ ಯಾವುದೇ ರಾಜ್ಯ ದಲ್ಲಿ ಯಾವುದೇ ಕಾರಣಕ್ಕೆ ಬಂದ್ ಕರೆ ಕೊಡುವುದು ಸರಿಯಲ್ಲ. ಬಂದ್ ಮಾಡಿಸಿದರೆ ರಾಜ್ಯದ, ದೇಶದ ಬೊಕ್ಕಸಕ್ಕೆ ಎಷ್ಟೋ ನಷ್ಟವಾಗುತ್ತದೆ. ಈ ನಷ್ಟವನ್ನು ಬಂದ್ ಕರೆಕೊಡುವವರು ಕೊಡುತ್ತಾರಾದರೆ ಆದೀತು. ಯಾವುದೋ ಒಂದು ಕಾರಣಕ್ಕೆ ಬಂದ್ ಕರೆಕೊಡುವುದು, ಜನರಿಗೆ ತೊಂದರೆ ಆಗುವುದು, ಕಷ್ಟ ನಷ್ಟ ಆಗುವುದು – ಇದೆಲ್ಲ ತಪ್ಪು. ಆದ್ದರಿಂದ ಹೈಕೋರ್ಟು ತೀರ್ಪು ಸ್ವಾಗತಾರ್ಹ ಎಂದು ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷರು ಡಿ.ಸಿ.ಸಿ. ಬ್ಯಾಂಕ್ ಮಂಗಳೂರು ತಿಳಿಸಿದರು.

ಬಲಾತ್ಕಾರದ ಬಂದ್‌ನ್ನು ಬಂದ್ ಮಾಡುವ ಬಗ್ಗೆ ಹೈಕೋರ್ಟ್ ಆದೇಶ : ಜನಾಭಿಪ್ರಾಯ ಆಹ್ವಾನ-ಬಲಾತ್ಕಾರದ ಬಂದ್ ಬಗ್ಗೆ ಸುದ್ದಿ ಆಂದೋಲನ ಪ್ರತಿಪಾದಿಸಿದ ವಿಷಯಗಳು ಹೈಕೋರ್ಟ್ ಡಿದ ಆದೇಶಗಳೇ ಆಗಿವೆ.ಸುದ್ದಿ ಬಲಾತ್ಕಾರದ ಬಂದ್ ಬಗ್ಗೆ ಆಂದೋಲನ ನಡೆಸಿದಾಗ ಹೆಚ್ಚಿನ ಜನ ಅದನ್ನು ಬೆಂಬಲಿಸಿದ್ದಾರೆ. ಆದರೆ ವಿರೋಧಿಸಿದವರೂ ಇದ್ದಾರೆ. ಯಾವುದೇ ಕಾನೂನು, ಆದೇಶ ಅನುಷ್ಠಾನಕ್ಕೆ ಬರಬೇಕಾದರೆ ಅದಕ್ಕೆ ಜನರ ಒಪ್ಪಿಗೆ ಬೇಕು.
ಈ ಹಿನ್ನಲೆಯಲ್ಲಿ ಬಂದ್ ಬಗ್ಗೆ ಮತ್ತು ಅದರಿಂದ ತೊಂದರೆಗೊಳಗಾಗುವವರ ಬಗ್ಗೆ ಹೈಕೋರ್ಟ್ ನೀಡಿದ ಆದೇಶವನ್ನು ಜನತೆ ಓದಿ ನೋಡಿ ತಮ್ಮ ಅಭಿಪ್ರಾಯಗಳನ್ನು ಸುದ್ದಿಯೊಡನೆ, ಸುದ್ದಿ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಕಾಗಿ ವಿನಂತಿ. -ಸುದ್ದಿ ವೇದಿಕೆ

ಬಂದ್ ನಡೆಸಲು ಕರೆ ನೀಡುವುದು ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಫೆ.2ರಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಬಂದ್ ನಡೆಸುವ ಮೂಲಕ ಮತ್ತೊಬ್ಬರ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕ ಉಚ್ಛ ನ್ಯಾಯಾಲಯದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ. ರಮೇಶ್‌ರವರನ್ನೊಳಗೊಂಡ ವಿಭಾಗೀಯ ಪೀಠವು ಬಂದ್ ಕರೆ ನೀಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು
ಸರಕಾರಕ್ಕೆ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬಂದ್ ಕರೆ ನೀಡುವುದು ಅಸಂವಿಧಾ ನಿಕವಾಗಿದೆ ಮತ್ತು ಬಂದ್ ನಡೆಸುವುದರಿಂದ ಮತ್ತೊಬ್ಬರ ಮೂಲಭೂತ ಹಕ್ಕುಗಳಿಗೆ ತೊಂದರೆಯನ್ನು ಉಂಟು ಮಾಡುವಂತಾಗುತ್ತದೆ. ಪ್ರತಿಭಟನೆ ಮಾಡಬೇಕೆಂದಿದ್ದರೆ ಮೆರವಣಿಗೆ, ಸಾರ್ವಜನಿಕ ಸಭೆ, ಉಪವಾಸ ಸತ್ಯಾಗ್ರಹ, ಹರತಾಳಗಳನ್ನು ಆಚರಿಸಬಹುದು ಎಂದು ಹೇಳಿರುವ ನ್ಯಾಯ ಪೀಠವು ಬಂದ್ ನಡೆಸುವ ಮೂಲಕ ಜನ ಸಾಮಾನ್ಯರಿಗೆ ತೊಂದರೆ ನೀಡ ಬಾರದು ಎಂದು ಎಚ್ಚರಿಕೆ ನೀಡಿದೆ. ಈ ಮೂಲಕ ಬಂದ್ ಬೇಕು ಎಂದು ವಾದಿಸುತ್ತಿದ್ದವರಿಗೆ ಮುಖಭಂಗವಾಗಿದೆ.
ಮಹದಾಯಿ ವಿವಾದಕ್ಕೆ ಸಂಬಂಧಿಸಿ ಫೆ.೪ರಂದು ಬೆಂಗಳೂರು ಬಂದ್ ನಡೆಸಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿದ್ದವು. ಫೆ.೪ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಬಂದ್ ಕರೆ ನೀಡಿರುವುದು ರಾಜಕೀಯ ವಲಯದಲ್ಲಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಮಧ್ಯೆ ಬಂದ್ ಕರೆಯನ್ನು ಪ್ರಶ್ನಿಸಿ ಬೆಂಗಳೂರಿನ ಸ್ವಯಂಸೇವಾ ಸಂಸ್ಥೆ ಶ್ರದ್ಧಾದ ಪೋಷಕರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು ಬಂದ್ ಕರೆ ನೀಡಲು ಯಾರಿಗೂ ಅಧಿಕಾರ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಪದೇ ಪದೇ ಬಂದ್ ನಡೆಸುವುದರಿಂದ ಸಾರ್ವಜನಿಕರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಬಂದ್ ಅಸಂವಿಧಾನಿಕ ಎಂದು ನ್ಯಾಯ ಪೀಠ ಹೇಳಿದೆ. ಜ.೨೫ರಂದು ಮೈಸೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರು ಭೇಟಿ ನೀಡುವ ವೇಳೆ ಮಹದಾಯಿ ವಿಚಾರಕ್ಕೆ ಸಂಬಂಧಿಸಿ ಕನ್ನಡ ಪರ ಸಂಘಟನೆಯ ಮುಂದಾಳು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳು ಬಂದ್ ಕರೆ ನೀಡಿರುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪ್ರಧಾನಮಂತ್ರಿಯವರ ಭೇಟಿಯ ವೇಳೆ ಮಹದಾಯಿ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರು ಬಂದ್ ನಡೆಸಲು ಉದ್ದೇಶಿಸಿದ್ದ ವಾಟಾಳ್ ನಾಗರಾಜ್ ಬಣಕ್ಕೆ ಹೈಕೋರ್ಟ್‌ನ ಆದೇಶ ಬಿಸಿ ಮುಟ್ಟಿಸಿದೆ ಪರಿಣಾಮವಾಗಿ ವಾಟಾಳ್ ನೇತೃತ್ವದ ಕನ್ನಡಪರ ಸಂಘಟನೆಗಳ ಒಕ್ಕೂಟ ಬಂದ್ ಕರೆಯನ್ನು ಹಿಂಪಡೆದುಕೊಂಡು ಪ್ರತಿಭಟನೆಯಲ್ಲಿ ಮೆರವಣಿಗೆಗೆ ಸೀಮಿತಗೊಳಿಸಿವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.