ನಿಸರ್ಗ ವೆಜ್ ರೆಸ್ಟೋರೆಂಟ್ ಪ್ರಾರಂಭೋತ್ಸವ

ಉಜಿರೆ: ಬೆಳಾಲು ರಸ್ತೆ ಉಜಿರೆಯ ಸಾಯಿರಾಮ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ `ನಿಸರ್ಗ ವೆಜ್ ರೆಸ್ಟೋರೆಂಟ್’ ಇದರ ಪ್ರಾರಂಭೋತ್ಸವವು ಫೆ.೫ರಂದು ಜರುಗಿತು. ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ನೂತನ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಉಜಿರೆ ಪೇಟೆಯಲ್ಲಿ ಆರಂಭಗೊಂಡ ಈ ಸಂಸ್ಥೆಯು ಜನರ ಬಯಕೆಗಳನ್ನು ಈಡೇರಿಸುವುದರ ಮೂಲಕ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಆಶೀರ್ವಾದ ನೀಡಿದರು.
ಮುಖ್ಯ ಅತಿಥಿ ಉಜಿರೆ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಅವರು ಬೆಳೆಯುತ್ತಿರುವ ಉಜಿರೆ ನಗರಕ್ಕೆ ಇಂತಹ ಉದ್ಯಮಗಳ ಅಗತ್ಯತೆಯಿದ್ದು, ಈ ಸಂಸ್ಥೆ ಉನ್ನತಕ್ಕೇರಲಿ ಎಂದರು. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪಿ. ತಿಮ್ಮಪ್ಪ ಗೌಡ ಬೆಳಾಲು ಮಾತನಾಡಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾಲಕರ ತಾಯಿ ಶ್ರೀಮತಿ ತಿಮ್ಮು ಕಾರಿಂಜ, ಕಟ್ಟಡ ಮಾಲಕರಾದ ವಿಶ್ವಜಿತ್, ಬೆಳಾಲು ಗ್ರಾ.ಪಂ ಪಿಡಿಒ ಮೋಹನ್ ಬಂಗೇರ ಕಾರಿಂಜೆ, ಕುಲಾಲ-ಕುಂಬಾರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ, ತಾ.ಪಂ. ಉಪಾಧ್ಯಕ್ಷೆ ವೇದಾವತಿ ಹಾಗೂ ಹೋಟೆಲ್ ಮಾಲಕರ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು. ಮಾಲಕರಾದ ಶ್ರೀಮತಿ ಜಾಹ್ನವಿ ಮತ್ತು ಜಿನ್ನಪ್ಪ ಕಾರಿಂಜ ಅವರು ಆಗಮಿಸಿದ ಅತಿಥಿ-ಗಣ್ಯರನ್ನು ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.