ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶಾರದಾ ನಗರ: ಪ್ರತಿಷ್ಠಾ ವರ್ಧಂತ್ಯುತ್ಸವ

ಮುಂಡಾಜೆ: ಮುಂಡಾಜೆ ಶಾರದಾನಗರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಅಮ್ಮನವರ ಪ್ರೇರಣಾನುಸಾರ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಶ್ರೀ ಚಂಡಿಕಾಯಾಗ ಮತ್ತು ಶ್ರೀ ರಂಗ ಪೂಜಾದಿ ಕಾರ್ಯಕ್ರಮಗಳು ಫೆ. 3 ರಂದು ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮ ನಿಮಿತ್ತ ಬೆಳಗ್ಗಿನಿಂದಲೇ ಶ್ರೀ ಕ್ಷೇತ್ರದಲ್ಲಿ ವೈಧಿಕ ವಿಧಿ ವಿಧಾನಗಳು ನಡೆದವು. ವೇದಮೂರ್ತಿ ಶ್ರೀ ಪಂಜೆರ್ಪು ಸುರೇಶ್ ಐತಾಳ್ ಮತ್ತು ಪ್ರಧಾನ ಅರ್ಚಕರಾದ ಸತ್ಯನಾರಾಯಣ ಹೊಳ್ಳ ಕಾನರ್ಪ ಅವರ ನೇತೃತ್ವದಲ್ಲಿ ಚಂಡಿಕಾಯಾಗ ಮತ್ತು ಉಳಿದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.
ಮಧ್ಯಾಹ್ನ ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಕೂಡ ವಿಶೇಷ ನೆಲೆಯಲ್ಲಿ ಅನ್ನದಾನ ನಡೆದು ಸುಮಾರು ಸಾವಿರಕ್ಕೂ ಮಿಕ್ಕಿದ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ರಾತ್ರಿ ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂದು ಯಕ್ಷಗಾನ ಬಯಲಾಟವು ಸಂಪನ್ನಗೊಂಡಿತು.
ಆಡಳಿತ ಮಂಡಳಿ ಮೊಕ್ತೇಸರರಾದ ಅಡೂರು ಗೋಪಾಲಕೃಷ್ಣ ರಾವ್, ಅರ್ಚಕರಾದ ರಾಜಶೇಖರ ಭಟ್, ಸಮಿತಿ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಕಾರ್ಯದರ್ಶಿ ಶೀನಪ್ಪ ಗೌಡ, ಕೋಶಾಧಿಕಾರಿ ಚೆನ್ನಕೇಶವ ಅರಸಮಜಲು ಸಹಿತ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಿದರು. ಡಿ. ಶಿವಯ್ಯ ಗೌಡ, ಬಾಲಕೃಷ್ಣ ಶೆಟ್ಟಿ, ಎಂ. ವಿಶ್ವನಾಥ ಶೆಟ್ಟಿ, ನೋಣಯ್ಯ ನಾಯ್ಕ, ನಾರಾಯಣ ಪೂಜಾರಿ ದೂಂಬೆಟ್ಟು, ಜಯರಾಮ ಪುಟ್ಟ, ಗಣೇಶ್ ಬಂಗೇರ ಕೂಳೂರು, ಬಾಬು ಪೂಜಾರಿ ಕೂಳೂರು, ಜಯರಾಂ ಕೆ. ಕಲಾವಿದ, ಭಜನಾ ಮಂಡಳಿ ಸದಸ್ಯರು ಸಹಿತ ಇತರರೆಲ್ಲರೂ ಪೂರಕ ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.