ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಪಾದಾಭಿಷೇಕ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳದಲ್ಲಿ ಮಹಾ ಮಸ್ತಕಾಭಿಷೇಕ : ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ 2019 ರ ಫೆಬ್ರವರಿ ತಿಂಗಳಿನಲ್ಲಿ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಪ್ರಕಟಿಸಿದರು.

ಧರ್ಮಸ್ಥಳ : ದೇಹ ನಶ್ವರ, ಆತ್ಮ ಶಾಶ್ವತ. ಶರೀರ ಬದಲಾಗಬಹುದು, ಆದರೆ ಆತ್ಮ ಬದಲಾಗುವುದಿಲ್ಲ. ವ್ಯವಹಾರ ಮತ್ತು ನಿಶ್ಚಯವನ್ನು (ನಿಜವನ್ನು) ಅರಿತು ನಾವು ಮೋಕ್ಷ ಸಾಧನೆ ಮಾಡಬೇಕು. ಮೋಕ್ಷ-ಪ್ರಾಪ್ತಿ ನಮ್ಮ ಗುರಿಯಾಗಿರಬೇಕು. ಮುನಿಗಳ ಆಹಾರ-ವಿಹಾರದಲ್ಲಿ ಸೇವೆ ಮಾಡುವುದರಿಂದ ಪುಣ್ಯ ಸಂಚಯವಾಗುತ್ತದೆ ಎಂದು ನರಸಿಂಹ ರಾಜಪುರದ ಸಿಂಹನಗದ್ದೆ ಬಸ್ತಿ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ಫೆ.3 ರಂದು ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆದ ಸಂದರ್ಭ ಮಂಗಲ ಪ್ರವಚನ ನೀಡಿದರು.
ಇಂದ್ರಾದಿ ದೇವತೆಗಳು ಮಾತ್ರ ಅಭಿಷೇಕ ಮಾಡುತ್ತಾರೆ. ಬಾಹುಬಲಿ ಸ್ವಾಮಿ ಮೂರ್ತಿಯ ಚರಣ ಸ್ಪರ್ಶ ಮಾಡಿ ಪಾದಾಭಿಷೇಕ ಮಾಡಿದವರೆಲ್ಲ ದೇವತೆಗಳಿಗೆ ಸಮಾನರು ಎಂದು ಅವರು ಹೇಳಿದರು.
ಧರ್ಮಸ್ಥಳ ಬಸದಿಯಲ್ಲಿರುವ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ರತ್ನಗಿರಿಯಲ್ಲಿರುವ ಭಗವಾನ್ ಬಾಹುಬಲಿಯ ದಿವ್ಯ ಸಂದೇಶವನ್ನು ಅವರು ವಿವರಿಸಿದರು.
ಸೋಂದಾ ಸ್ವಾದಿ ಜೈನ ಮಠದ ಭಟ್ಟಾಕಳಂಕ ಸ್ವಾಮೀಜಿ ಮಾತನಾಡಿ, ನಾವು ನಿತ್ಯವೂ ಮಾಡುವ ಶುಭಾಶುಭ ಕರ್ಮಗಳಿಂದ ಪುಣ್ಯ, ಪಾಪದ ಫಲ ಆತ್ಮನಿಗೆ ಅಂಟಿಕೊಳ್ಳುತ್ತದೆ. ನಮ್ಮನ್ನು ನಾವು ಅರಿತುಕೊಂಡು ಜಪ, ತಪ, ಧ್ಯಾನ ಹಾಗೂ ಸತ್ಕರ್ಮಗಳ ಮೂಲಕ ಆತ್ಮ ಕಲ್ಯಾಣ ಮಾಡಿಕೊಳ್ಳಬೇಕು ಎಂದರು. ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ನಮ್ಮ ಆಚಾರ-ವಿಚಾರಗಳು ಧರ್ಮ ಮತ್ತು ಸಂಸ್ಕೃತಿಯ ನೆಲೆಯಲ್ಲಿದ್ದಾಗ ಮಾತ್ರ ನಾವು ಶಾಂತಿ, ನೆಮ್ಮದಿ ಪಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು. ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪ್ರೊ. ಎಸ್. ಪ್ರಭಾಕರ್. ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.