ರಾಜ್ಯ ಮಟ್ಟದ ಯುವಜನ ಮೇಳ : ಬಹುಮುಖ ಪ್ರತಿಭೆ ಚಂದ್ರಹಾಸ ಬಳಂಜ ಏಕಪಾತ್ರಭಿನಯದಲ್ಲಿ ದ್ವಿತೀಯ

ಬೆಳ್ತಂಗಡಿ : ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಏಕಪಾತ್ರಭಿನಯದಲ್ಲಿ ಬಹುಮುಖ ಪ್ರತಿಭೆ ಚಂದ್ರಹಾಸ ಬಳಂಜ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರಿಗ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಜಿಲ್ಲೆಯ ಉನ್ನತ ಪ್ರಶಸ್ತಿ, ಜಿಲ್ಲಾ ಯುವ ಪ್ರಶಸ್ತಿ ಕೂಡ ಬಂದಿರುತ್ತದೆ. ಸ್ನಾತಕೋತ್ತರ ಪದವಿದರಾದ ಇವರು ನೃತ್ಯ, ಬರವಣಿಗೆ ಹಾಗೂ ಭಾಷಣ ನಿರೂಪಣೆ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ.
ಇವರು ಶ್ರೀ ಗುರುಮಿತ್ರ ಸಮೂಹದ ಕಾರ್ಯದರ್ಶಿಯಾಗಿ, ಬಳಂಜ ಬಿಲ್ಲವ ಸಂಘದ ನಿರ್ದೇಶಕರಾಗಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ನಿರ್ದೇಶಕರಾಗಿ, ಯುವವಾಹಿನಿ ಬೆಳ್ತಂಗಡಿ ಘಟಕದ ನಿರ್ದೇಶಕರಾಗಿ ಹೀಗೆ ಹತ್ತು-ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇವರು ನಾಲ್ಕೂರು ಗ್ರಾಮದ ಪುಣ್ಕೆದೊಟ್ಟು ಮನೆಯ ಶ್ರೀಮತಿ ಸುಶೀಲ ಮತ್ತು ಶ್ರೀಧರ ಪೂಜಾರಿಯ ಪುತ್ರ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.