ಉಜಿರೆಯಲ್ಲಿ ತುಳು ಶಿವಳ್ಳಿ ಸ್ನೇಹಸಂಧ್ಯಾ 2018

Advt_NewsUnder_1
Advt_NewsUnder_1
Advt_NewsUnder_1

ಸ್ನೇಹ ಸಮ್ಮಿಲನದಿಂದ ಸಂಘಟನೆಯ ಬಲವರ್ಧನೆ: ವಿಜಯರಾಘವ ಪಡ್ವೆಟ್ನಾಯ

ಉಜಿರೆ :ಬೆಳ್ತಂಗಡಿ ತಾಲೂಕಿನ ವಿವಿಧ ವಲಯಗಳ ತುಳು ಶಿವಳ್ಳಿ ಸಮಾಜ ಬಾಂಧವರು ವರ್ಷದಲ್ಲೊಂದು ದಿನವಾದರೂ ತಮ್ಮೆಲ್ಲ ಕಷ್ಟ ಸುಖಗಳನ್ನು ಮರೆತು ಒಂದೇ ಕುಟುಂಬದ ಸದಸ್ಯರಂತೆ ಆತ್ಮೀಯ ವಾತಾವರಣದಲ್ಲಿ ಸೌಹಾರ್ದ ಕೂಟದಲ್ಲಿ ಭಾಗವಹಿಸುವುದರಿಂದ ಸ್ನೇಹ ಸೌಹಾರ್ದತೆ ಬೆಳೆಯುವುದರೊಂದಿಗೆ ಸಂಘಟನೆಯ ಬಲವರ್ಧನೆಯಾಗುವುದು ಎಂದು ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಗೌರವಾಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ ಹೇಳಿದರು.
ಅವರು ಜ. 27ರಂದು ಉಜಿರೆಯ ಹಿಜಂಕುರಿ ಪದ್ಮಶ್ರೀ ಮನೆಯ ಆವರಣದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ನೇತೃತ್ವ, ಉಜಿರೆ ಮತ್ತು ಧರ್ಮಸ್ಥಳ ವಲಯಗಳ ಸಹಭಾಗಿತ್ವ ಹಾಗೂ ಕುವೆಟ್ಟು, ಮಚ್ಚಿನ, ಅಳದಂಗಡಿ, ಬಂದಾರು, ನಿಡ್ಲೆ, ಅರಸಿನಮಕ್ಕಿ ಮತ್ತು ಕೊಕ್ಕಡ ವಲಯಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆದ ಸ್ನೇಹಸಂಧ್ಯಾ 2018 ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮಾರಂಭದಲ್ಲಿ ವಿವಿಧ ವಯೋಮಾನದವರಿಗಾಗಿ ಬಾಲ ಕಿಶೋರ, ಬಾಲಕಿಶೋರಿ, ಶಿವಳ್ಳಿ ಕಿಶೋರ, ಶಿವಳ್ಳಿ ಕಿಶೋರಿ, ಶಿವಳ್ಳಿ ಕುಮಾರ, ಶಿವಳ್ಳಿ ಕುಮಾರಿ, ಉತ್ತಮ ಯುವಕ, ಉತ್ತಮ ಯುವತಿ, ಸ್ನೇಹ ಸಂಧ್ಯಾ ಯಂಗ್ ಸ್ಟಾರ್, ಸ್ನೇಹ ಸಂಧ್ಯಾ ಯಂಗ್ ಲೇಡಿ, ಅತ್ಯುತ್ತಮ ಪುರುಷ, ಅತ್ಯುತ್ತಮ ಮಹಿಳೆ, ಸೂಪರ್ ತಾತ ಮತ್ತು ಸೂಪರ್ ದೊಡ್ಡ ಸ್ಪರ್ಧೆಗಳನ್ನು ಏರ್ಪಡಿಸಿ ಪಾರಿತೋಷಕ ವಿತರಿಸಲಾಯಿತು.
ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕಾರ್ಯದರ್ಶಿ ರಾಜಪ್ರಸಾದ ಪೋಳ್ನಾಯ, ಉಪಾಧ್ಯಕ್ಷ ನಾಗೇಶ ರಾವ್, ಉಜಿರೆ ವಲಯಾಧ್ಯಕ್ಷ ಗೋಪಾಲಕೃಷ್ಣ ಭಟ್, ಕಾರ್ಯದರ್ಶಿ ಶ್ರೀಧರ ಕೆ.ವಿ., ಧರ್ಮಸ್ಥಳ ವಲಯಾಧ್ಯಕ್ಷ ಗಿರೀಶ್ ಕುದ್ರೆಂತ್ತಾಯ, ಕಾರ್ಯದರ್ಶಿ ವಸಂತ ಭಟ್, ಸ್ನೇಹಸಂಧ್ಯಾ ಸಮಿತಿ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ, ಪರಾರಿ ವೆಂಕಟ್ರಮಣ ಹೆಬ್ಬಾರ್, ಆತಿಥೇಯ ಶ್ರೀಮತಿ ಸವಿತಾ ಮತ್ತು ವೇದಮೂರ್ತಿ ಶ್ರೀಪತಿ ಎಳಚಿತ್ತಾಯ, ಗಾಯತ್ರಿ ಶ್ರೀಧರ್, ಸ್ವರ್ಣ ಶ್ರೀರಂಗ ನೂರಿತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ವಲಯಗಳ ಮಹಿಳೆಯರು ಮತ್ತು ಮಕ್ಕಳು ಸಂಗೀತ, ನೃತ್ಯ, ರೂಪಕ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಧರ್ಮಸ್ಥಳ ವಲಯದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಪಡ್ವೆಟ್ನಾಯ, ಮನೋರಮ ತೋಳ್ಪಾಡಿತ್ತಾಯ, ವಸಂತ ಭಟ್, ಉಜಿರೆ ವಲಯದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾರ್ಗವಿ ಶಬರಾಯ, ಕುವೆಟ್ಟು ವಲಯದ ಕಾರ್ಯಕ್ರಮವನ್ನು ಕಾಶಿನಾಥ್ ನಿರೂಪಿಸಿದರು. ಮುರಳೀಕೃಷ್ಣ ಆಚಾರ್ ಸ್ನೇಹ ಸಂಧ್ಯಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಸ್ತಿ ವಿಜೇತರು : ಲಕ್ಕಿ ಚೇರ್ ಪರ್ಸನ್ – ಪ್ರಜ್ವಲ್ ಆಚಾರ್ಯ ಉರುವಾಲು ಬಂದಾರು, ಅದೃಷ್ಟ ವ್ಯಕ್ತಿ- ಕು. ಸುಪ್ರಿಯಾ ಪಡ್ವೆಟ್ನಾಯ ಉಜಿರೆ, ಅದೃಷ್ಟ ದಂಪತಿ -ಶ್ರೀಪತಿ ಅಂರ್ಬುಡತ್ತಾಯ ದಂಪತಿಗಳು ಧರ್ಮಸ್ಥಳ. ದಿ ಪದ್ಮಾವತಿ ಮತ್ತಿ ದಿ. ಶ್ರೀನಿವಾಸ ಎಳಚಿತ್ತಾಯರ ಸ್ಮರಣಾರ್ಥ ರಾತ್ರಿ ಖ್ಯಾತ ಕಲಾವಿದರಿಂದ ಕರ್ಮಬಂಧ, ಸುದರ್ಶನ ಕರಗ್ರಹಣ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.