ಶಟಲ್ ಬ್ಯಾಡ್ಮಿಂಟನ್ : ಜೀವನ್ ಎಸ್. ಗೌಡ ರಾಜ್ಯಮಟ್ಟದಲ್ಲಿ ಪ್ರಥಮ

ಉಜಿರೆ : ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಜ. 12 ರಿಂದ 15 ರವರೆಗೆ ನಡೆದ ರಾಜ್ಯಮಟ್ಟದ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ೧೫ರ ವಯೋಮಾನದ ಬಾಲಕರ ವಿಭಾಗದ ಸಿಂಗಲ್ಸ್ ಪಂದ್ಯಾವಳಿಯಲ್ಲಿ ಉಜಿರೆ ಎಸ್‌ಡಿಎಂ ಸಿಬಿಎಸ್‌ಇ 9ನೇ ತರಗತಿ ವಿದ್ಯಾರ್ಥಿ ಜೀವನ್ ಎಸ್ ಗೌಡ ಅವರು ರಾಜ್ಯಕ್ಕೇ ಪ್ರಥಮ ಸ್ಥಾನ ಮತ್ತು ಇದೇ ಪಂದ್ಯಾಕೂಟದ 17 ವಯೋಮಾನದ ಡಬಲ್ಸ್ ವಿಭಾಗದಲ್ಲಿ ರಾಜ್ಯಕ್ಕೇ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸದ್ರಿ ವಯೋಮಾನದ ಮಿತಿಯಲ್ಲಿ ಉತ್ಕೃಷ್ಠವಾದ ಕ್ರೀಡಾ ಕೌಶಲ ಪ್ರದರ್ಶಿಸಿದ ಜೀವನ್ ಅವರು, ಚುರುಕು ಮತ್ತು ಸ್ಪರ್ಧಾತ್ಮಕ ಆಟದ ಪ್ರದರ್ಶನದಲ್ಲಿ ಎದುರಾಳಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡು ಆಟದಲ್ಲಿ ಮುಂಚೂಣಿ ಕಾಯ್ದುಕೊಂಡು ಸ್ಥಾನ ಪಡೆದುಕೊಂಡರು. ಜೀವನ್ ಅವರು ಈ ಹಿಂದೆ ಖೇಲ್ ಇಂಡಿಯಾ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ಜಿಲ್ಲಾ ಮಟ್ಟದ ಅನೇಕ ಕ್ರೀಡಾಕೂಟದಲ್ಲಿ ಹಲವು ಬಹುಮಾನಗಳನ್ನು ಗಳಿಸಿಕೊಂಡಿದ್ದಾರೆ. ಜೀವನ್ ಅವರು ಕರ್ನಾಟಕ ರಕ್ಷಣಾ ವೇದಿಕೆ ತಾ| ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ ಮತ್ತು ಪುಷ್ಪಾ ಶ್ರೀನಿವಾಸ್ ದಂಪತಿ ಪುತ್ರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.