ಸ್ಥಾನಿಕ ಬ್ರಾಹ್ಮಣ ಸಮುದಾಯದಿಂದ ಡಾ| ಹೆಗ್ಗಡೆಯವರಿಗೆ ಅಭಿನಂದನೆ

ಧರ್ಮಸ್ಥಳ : ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ನೇತೃತ್ವದಲ್ಲಿ ಹಾಗೂ ಸ್ಥಾನಿಕ ಬ್ರಾಹ್ಮಣ ಮಹಾ ಮಂಡಲ ಮಂಗಳೂರು ಇದರ ಸಹಯೋಗದೊಂದಿಗೆ ಸ್ಥಾನಿಕ ಬ್ರಾಹ್ಮಣ ಸಮುದಾಯದ ಪರವಾಗಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ 50ನೇ ವರ್ಷದ ಪಟ್ಟಾಭಿಷೇಕ ವರ್ಧ್ಯುಂತ್ಸವದ ಆಚರಣೆ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಭಿನಂದನೆಯನ್ನು ಸಲ್ಲಿಸಲಾಯಿತು.
ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಡಾ| ಡಿ. ವೀರೇಂದ್ರ ಹೆಗ್ಗಡೆ ದಂಪತಿಯವರಿಗೆ ಬ್ರಹ್ಮಶ್ರೀ ವಾಗ್ಮೀಶಾ ಶಾಸ್ತ್ರಿ ಇವರ ನೇತೃತ್ವದಲ್ಲಿ ವೇದ ಷೋಷಣೆಯೊಂದಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು. ಸ್ಥಾನಿಕ ಬ್ರಾಹ್ಮಣ ಮಹಾ ಮಂಡಲದ ಅಧ್ಯಕ್ಷ ಜಗನ್ನಿವಾ ರಾವ್ ಹೆಗ್ಗಡೆಯವರಿಗೆ, ಸನ್ಮಾನ ಪತ್ರವನ್ನು ನೀಡಿದರು. ದೇವಾನಂದ ಭಟ್ ಸನ್ಮಾನ ಪತ್ರವನ್ನು ವಾಚಿಸಿದರು.
ಕಾರ್ಯಕ್ರಮವನ್ನು ಪಿ.ಲಕ್ಷೀನಾರಾಯಣ ರಾವ್ ಧರ್ಮಸ್ಥಳ, ಹರೀಶ್ ರಾವ್ ಧರ್ಮಸ್ಥಳ, ದಿವಾಕರ ರಾವ್ ಕನ್ಯಾಡಿ, ಸತೀಶ್ ರಾವ್ ಧರ್ಮಸ್ಥಳ, ಕೃಷ್ಣ ರಾವ್ ಧರ್ಮಸ್ಥಳ ಇವರು ಸಂಘಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿಯ ಎಲ್ಲಾ ಪೂರ್ವಧ್ಯಕ್ಷರೂ, ಮಹಿಳಾ ವೇದಿಕೆಯ ಪದಾಧಿಕಾರಿಗಳೂ, ಯುವ ವೇದಿಕೆಯ ಸದಸ್ಯರೂ ಹಾಗೂ ಸ್ಥಾನಿಕ ಬ್ರಾಹ್ಮಣ ಸಮಾಜದ 300 ಜನ ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಬಿ.ಕೆ. ಧನಂಜಯ ರಾವ್, ಅಧ್ಯಕ್ಷರು ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಇವರು ನಿರ್ವಹಿಸಿದರು. ಕಾರ್ಯದರ್ಶಿ ದಿನೇಶ್ ಕುಮಾರ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.