ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರು ವಲಯ ಜಿಲ್ಲಾ ಮಟ್ಟದ ಕ್ರೀಡಾ ಕೂಟ-ಸರ್ವಜ್ಞ ಟ್ರೋಫಿ

ಪುಂಜಾಲಕಟ್ಟೆ : ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರು ವಲಯ, ವಲಯ ಕ್ರೀಡಾಕೂಟ ಸಮಿತಿ ಮಡಂತ್ಯಾರು ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಸರ್ವಜ್ಞ ಟ್ರೋಫಿ-2018 ಜ.28ರಂದು ಬಸವೇಶ್ವರ ದೇವಸ್ಥಾನ ವಠಾರ ಬಸವನಗುಡಿಯಲ್ಲಿ ಜರುಗಿತು.
ಕ್ರೀಡಾಕೂಟವನ್ನು ಬೆಳ್ತಂಗಡಿ ತಾ.ಪಂ. ಉಪಾಧ್ಯಕ್ಷೆ ವೇದಾವತಿ ದೀಪ ಬೆಳಗಿಸಿ ಉದ್ಘಾಟಿಸಿ, ಕ್ರೀಡಾಕೂಟಗಳು ಸಮಾಜದ ಸಂಘಟನೆ ಹಾಗೂ ಸೌಹಾರ್ದತೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ರೀಡಾಕೂಟ ಸಮಿತಿ ಅಧ್ಯಕ್ಷ ರಾಜೇಶ್ ಕೋಡ್ಯೆಲು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಸವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ಶೆಟ್ಟಿ ಮುಗೆರೋಡಿ, ಮಡಂತ್ಯಾರು ಗ್ರಾ.ಪಂ. ಪಿಡಿಒ ನಾಗೇಶ್ ಎಂ, ತಾ.ಪಂ. ಸದಸ್ಯೆ ವಸಂತಿ ಲಕ್ಷ್ಮಣ್, ಮೂಲ್ಯರ ಯಾನೆ ಕುಂಬಾರರ ಸಂಘ ಮಚ್ಚಿನ ಕಾರ್ಯದರ್ಶಿ ನಾಣ್ಯಪ್ಪ ಮೂಲ್ಯ, ಮಚ್ಚಿನ ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ, ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರ ಬಿ.ಎಸ್ ಕುಲಾಲ್, ಕುಂಭನಿಧಿ ಗೋಳಿಯಂಗಡಿ ಸಂಘಟನಾ ಕಾರ್ಯದರ್ಶಿ ದಿನಕರ ಕುಲಾಲ್, ಗಣೇಶ್ ವುಡ್ ಇಂಡಸ್ಟ್ರೀಸ್‌ನ ಮಾಲಕ ಗಣೇಶ್ ಮೂಲ್ಯ ಅನಿಲಡೆ ಭಾಗವಹಿಸಿ ಶುಭ ಕೋರಿದರು. ದಿನೇಶ್ ಎಂ. ಸ್ವಾಗತಿಸಿದರು. ಹರೀಶ್ ಬಳ್ಳಮಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಶವತಿ ಧನ್ಯವಾದವಿತ್ತರು.
ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭ ಉದ್ಯಮಿ ಚಂದ್ರಹಾಸ ಪಲ್ಲಿಪಾಡಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿ ಕರಾವಳಿ ಕುಂಬಾರರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಲ| ಹರೀಶ್ ಕಾರಿಂಜ ಮಾತನಾಡಿ ಫೆ.೪ರಂದು ರಾಜ್ಯದಲ್ಲೇ ಪ್ರಥಮ ಬಾರಿಗೆ ನಡೆಯಲಿರುವ ಕುಲಾಲ-ಕುಂಬಾರರ ಸಮಾವೇಶ ಹಾಗೂ ಹಕ್ಕೊತ್ತಾಯ ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಕೋರಿದರು.
ಅತಿಥಿಗಳಾಗಿ ವಗ್ಗ ಕುಲಾಲ ಸಂಘದ ಅಧ್ಯಕ್ಷ ಜಯರಾಮ ಉರುಡಾಯಿ, ಕುಲಾಲ ಕುಂಬಾರ ಯುವ ವೇದಿಕೆ ತಾಲೂಕು ಅಧ್ಯಕ್ಷ ಲೋಕೇಶ್ ಕೆ. ಕುಲಾಲ್, ಎಸ್.ಕೆ. ಇಂಡಸ್ಟ್ರೀಸ್ ಪುಂಜಾಲಕಟ್ಟೆಯ ಮಾಲಕ ಶೇಖರ ಕುಲಾಲ್ ಮಾಲಾಡಿ, ಮಚ್ಚಿನ ಸೇವಾ ಸಹಕಾರಿ ಸಂಘದ ನಿರ್ದೇಶಕಿ ಸುಜಾತಾ ಪಾಲು, ಕಂಟ್ರಾಕ್ಟರ್ ಗೋಪಾಲ ಮೇಸ್ತ್ರೀ ಬಳ್ಳಮಂಜ ಭಾಗವಹಿಸಿ ಶುಭ ಹಾರೈಸಿದರು. ಕ್ರೀಡಾಕೂಟ ಸಮಿತಿ ಅಧ್ಯಕ್ಷ ರಾಜೇಶ್ ಕೋಡ್ಯೇಲು, ಪ್ರಧಾನ ಕಾರ್ಯದರ್ಶಿ ದಿನೇಶ್ ಎಂ. ಮಾಲಾಡಿ, ರೋಹಿಣಿ ನಡಿಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಳಸಿ ಅಂತರ ಸ್ವಾಗತಿಸಿದರು. ಸಂತೋಷ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಎಂ. ಅಂತರ ಸ್ಪರ್ಧಾ ವಿಜೇತರ ವಿವರ ನೀಡಿದರು. ಸುಧಾಕರ ಕುಲಾಲ್ ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ ಸಮಿತಿ ಗೌರವಾಧ್ಯಕ್ಷ ವಸಂತ ಮಡಕ್ಕಿಲ. ಸಂಜೀವ ಮೂಲ್ಯ ಅಳಕೆ, ಉಪಾಧ್ಯಕ್ಷ ರಾದ ಸುಖೇಶ್ ಬಳ್ಳಮಂಜ, ಶ್ರೀನಿವಾಸ ಮಡೆಕ್ಕಿಲ, ಜೊತೆ ಕಾರ್ಯದರ್ಶಿಗಳಾದ ದಿನೇಶ್ ಪಾಂಗಾಳ, ಅವಿನಾಶ್, ಪಾವಣ, ಅಕ್ಷಿತಾ, ಕೋಶಾಧಿಕಾರಿ ಸಚಿನ್, ಕ್ರೀಡಾ ಕಾರ್ಯದರ್ಶಿ ಮಿಥುನ್ ಕುಲಾಲ್, ಕ್ರೀಡಾ ಜೊತೆ ಕಾರ್ಯದರ್ಶಿ ಗಳಾದ ಗೋಪಾಲ ಮಾಸ್ಟರ್, ಚಿದಾನಂದ ಮಾಸ್ಟರ್, ಚೇತನ್, ಕೇಶವ ಬರ್ನ, ಉಮೇಶ್, ವಿಜಯ ಕುಲಾಲ್, ಉಮೇಶ್ ಮಡಕ್ಕಿಲ, ಕಾರ್ತಿಕ್ ಪಾರೆಂಕಿ, ಗೌರವ ಸಲಹೆಗಾರ ಹರೀಶ್ ಬಳ್ಳಮಂಜ, ವಿಠಲ ಮೂಲ್ಯ, ಮಿಥುನ್ ಕುಲಾಲ್ ಅಳಕೆ, ಯತೀಶ್ ನಡುಬೆಟ್ಟು ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಪೂರ್ಣ ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.