ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 35 ರುದ್ರಭೂಮಿಗೆ ರೂ. 64.50 ಲಕ್ಷ ವಿನಿಯೋಗ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾರ್ವಜನಿಕ ಸಹಭಾಗಿತ್ವದಲ್ಲಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಡಾ| ವೀರೇಂದ್ರ ಹೆಗ್ಗಡೆಯವರ ಆಶಯದಂತೆ ರಾಜ್ಯಾದ್ಯಂತ ಶಾಲಾ ಕಟ್ಟಡಗಳು, ಶಾಲಾ ಶೌಚಾಲಯಗಳು, ಹಾಲು ಉತ್ಪಾದಕ ಸಹಕಾರಿ ಸಂಘಗಳಿಗೆ ಅನುದಾನ, ಸಭಾಭವನ ನಿರ್ಮಾಣ ಮುಂತಾದ ವಿವಿಧ ಉದ್ದೇಶಗಳಿಗೆ ಅನುದಾನ ನೀಡುವುದರೊಂದಿಗೆ ಅವುಗಳ ಕಾಮಗಾರಿ ಗುಣಮಟ್ಟವನ್ನು ಉತ್ತಮಪಡಿಸುವಲ್ಲಿ ಸಮುದಾಯ ಅಭಿವೃದ್ಧಿ ವಿಭಾಗವು ಶ್ರಮಿಸುತ್ತಿದೆ.
ಸಮುದಾಯ ವಿಭಾಗದ ಇನ್ನೊಂದು ಮಹತ್ತರವಾದ ಕೊಡುಗೆ ರುದ್ರಭೂಮಿ. ಮನುಷ್ಯನ ಕೊನೆಯ ಕ್ಷಣವು ಸುಖಾಂತ್ಯದಲ್ಲಿ ಉತ್ತಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂರೈಸಬೇಕು ಎಂಬುದೇ ರುದ್ರಭೂಮಿಯ ಅಗತ್ಯತೆಯ ವಿಶೇಷ. ಇದನ್ನು ಮನಗಂಡು ಹೆಗ್ಗಡೆಯವರು ರುದ್ರಭೂಮಿಗೆ ಅಗತ್ಯವಾದ ನೆರವನ್ನು ನೀಡುತ್ತಿದ್ದಾರೆ. ಅನೇಕ ರುದ್ರಭೂಮಿ ಸ್ಥಳಗಳು ಒತ್ತುವರಿ ಸಮಸ್ಯೆಯಿಂದ ಕಾಣೆಯಾಗಿದ್ದು ಈ ಕಾರ್ಯಕ್ರಮದ ಪ್ರಭಾವದಿಂದ ಅವುಗಳಿಗೂ ಮರುಜೀವ ದೊರಕಿದಂತಾಗಿದೆ. ಈ ಕಾರ್ಯಕ್ರಮವು ಅತ್ಯಂತ ಜನಮೆಚ್ಚುಗೆಯನ್ನು ಗಳಿಸಿರುತ್ತದೆ. ರಾಜ್ಯಾದ್ಯಂತ ಬರುತ್ತಿರುವ ಬೇಡಿಕೆಯನ್ನು ಪರಿಶೀಲಿಸಿ ಅವರಿಗೆ ಸೂಕ್ತ ಮಾಹಿತಿ ಮಾರ್ಗದರ್ಶನ ನೀಡಿ ರುದ್ರಭೂಮಿ ಅಗತ್ಯತೆಯ ಕುರಿತು ಮನವರಿಕೆ ಮಾಡಲಾಗುತ್ತಿದೆ. ರುದ್ರಭೂಮಿ ಎಂದರೆ ಅದರಲ್ಲಿ ದಹನಶೆಡ್, ಕಟ್ಟಿಗೆ ದಾಸ್ತಾನು ಕೊಠಡಿ, ವಿಶ್ರಾಂತಿ ಕೊಠಡಿ, ತುಳಸಿವನ, ತ್ಯಾಜ್ಯಗುಂಡಿ, ಸೂಕ್ತ ವಿದ್ಯುತ್ ಮತ್ತು ನೀರಾವರಿ ಸಂಪರ್ಕ, ಉತ್ತಮ ಬಂದೋಬಸ್ತ್‌ನ ವ್ಯವಸ್ಥೆ ಮತ್ತು ಸರಿಯಾಗಿ ನಿರ್ವಹಣೆ ಮಾಡುವ ಸಮಿತಿ ಮುಂತಾದವುಗಳ ಸಮರ್ಪಕವಾಗಿದ್ದಲ್ಲಿ ಹಿಂದೂ ರುದ್ರಭೂಮಿಯ ಮಾದರಿ ಯಾಗಿ ನಿರ್ವಹಣೆಯಾಗ ಬಲ್ಲದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್‌ರವರ ಅಭಿಪ್ರಾಯವಾಗಿದೆ.
ಪ್ರಸ್ತುತ ವರ್ಷದಲ್ಲಿ ಒಟ್ಟು 11 ಜಿಲ್ಲೆಯ 18 ತಾಲೂಕಿನ 35 ಹಿಂದೂ ರುದ್ರಭೂಮಿಗಳ ಅಭಿವೃದ್ಧಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. ೬೪.೫೦ ಲಕ್ಷ ಮೊತ್ತವನ್ನು ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್. ಮಂಜುನಾಥ್‌ರವರ ಶಿಫಾರಸ್ಸಿನಂತೆ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿರುತ್ತಾರೆ ಎಂದು ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಬಿ. ಜಯರಾಮ ನೆಲ್ಲಿತ್ತಾಯ ತಿಳಿಸಿದ್ದಾರೆ. ಪ್ರಸ್ತುತ ವರ್ಷ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ 3 ರುದ್ರಭೂಮಿಗೆ 6 ಲಕ್ಷ, ಸುಳ್ಯ ತಾಲೂಕಿನ 2 ರುದ್ರಭೂಮಿಗೆ 4 ಲಕ್ಷ, ಬಂಟ್ವಾಳದ 5 ರುದ್ರಭೂಮಿಗೆ ರೂ.9.50 ಲಕ್ಷ, ಮಂಗಳೂರಿನ 6 ರುದ್ರಭೂಮಿಗೆ 12 ಲಕ್ಷ ಮಂಜೂರುಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.