HomePage_Banner_
HomePage_Banner_
HomePage_Banner_

ಕ್ರೀಡಾಪಟು ಕಳೆಂಜದ ದೀಕ್ಷಿತಾ ಮಲೆಕುಡಿಯ ಈಗ ಎಲುಬಿನ ಕ್ಯಾನ್ಸರ್ ರೋಗಪಟು..! 8 ಲಕ್ಷ ಬೇಕೆಂದಿರುವ ಆಪರೇಷನ್ ಮೊತ್ತಕ್ಕಾಗಿ ನೆರವಿನ ಹಸ್ತ ಚಾಚಿದ ಬಡ ಕುಟುಂಬ

Advt_NewsUnder_1

ವಿಳಾಸ: ಡೀಕಯ್ಯ ಮಲೆಕುಡಿಯ (ದೀಕ್ಷಿತಾ ತಂದೆ), ಬನತ್ತಾರು ಮನೆ, ಕಳೆಂಜ ಗ್ರಾಮ, ಕಾಯರ್ತಡ್ಕ ಅಂಚೆ ಬೆಳ್ತಂಗಡಿ ತಾಲೂಕು. ಸಂಪರ್ಕ ಸಂಖ್ಯೆ: 9980432540.
ಬ್ಯಾಂಕ್ ಖಾತೆ : 3782500100063701.
IFSC code: KARB0000378 ಕರ್ಣಾಟಕ ಬ್ಯಾಂಕ್

 ಕಳೆಂಜ ಗ್ರಾಮದ ಬನತ್ತಾರು ಮನೆ ನಿವಾಸಿ, ಕೂಲಿ ಕಾರ್ಮಿಕ ದಂಪತಿ ಡೀಕಯ್ಯ ಮಲೆಕುಡಿಯ ಮತ್ತು ಜಯಂತಿ ಇವರ ದ್ವಿತೀಯ ಪುತ್ರಿ, ಕಳೆಂಜ ಸರಕಾರಿ ಶಾಲಾ 7ನೇ ತರಗತಿ ಬಾಲಕಿ ದೀಕ್ಷಿತಾ (11ವ.) ಈಗ ಎಲುಬು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆ ಮತ್ತು ಆಪರೇಷನ್‌ಗಾಗಿ 8 ಲಕ್ಷ ರೂ ಬೇಕಾಗಬಹುದೆಂದು ವೈದ್ಯರು ನೀಡಿದ ಸಲಹೆಯಿಂದ ಕಂಗಾಲಾಗಿರುವ ಕುಟುಂಬ ಬಾಲೆಯ ರಕ್ಷಣೆಗಾಗಿ ತಲೆಮೇಲೆ ಕೈ ಹೊತ್ತು ಕುಳಿತುಕೊಂಡಿದ್ದು ನೆರವಿಗಾಗಿ ದಾನಿಗಳ ಮುಂದೆ ಹೃದಯ ಬಿಚ್ಚಿಟ್ಟಿದ್ದಾರೆ.
ಉತ್ತಮ ಕ್ರೀಡಾಪಟುವಾಗಿರುವ ದೀಕ್ಷಿತಾ ಕಬಡ್ಡಿ ಆಟಕ್ಕಾಗಿ ಪೂರ್ವ ಸಿದ್ಧತಾ ವ್ಯವಸ್ಥೆ ಮಾಡಿಕೊಂಡಿರುವಾಗ ಬಿದ್ದು ಆದ ಸಣ್ಣ ಗಾಯಕ್ಕಾಗಿ ವೈದ್ಯರ ಬಳಿ ಹೋದಾಗ ವಿಚಾರ ಬೆಳಕಿಗೆ ಬಂದಿದೆ. ಕ್ರಿಯಾಶೀಲವಾಗಿ ಎಂದಿನಂತೆ ಶಾಲೆಗೆ ಹೋಗಿ ಬರುತ್ತಿದ್ದು ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿ ದೀಕ್ಷಿತಾ ಕುಟುಂಬವೀಗ ವಿಧಿಯ ಪರೀಕ್ಷೆಗೆ ಕಣ್ಣೀರು ಸುರಿಸುತ್ತಾ ಕುಳಿತಿದೆ. ಪ್ರಾರಂಭದಲ್ಲಿ ತಾಲೂಕಿನ ಆಸ್ಪತ್ರೆ, ಬಳಿಕ ಮಂಗಳೂರಿನ 2 ಪ್ರಸಿದ್ಧ ಖಾಸಗಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಎಂ.ಆರ್.ಐ. ಸ್ಕ್ಯಾನಿಂಗ್ ಸಹಿತ ಇರುವ ಉನ್ನತ ಪರೀಕ್ಷೆ ಕೈಗೊಂಡು ಕೊನೆಗೆ ನೀಡಿದ ಉತ್ತರ ಕುಟುಂಬದ ಪಾಲಿಗೆ ಆಘಾತಕಾರಿಯಾದದ್ದು. ಗ್ರಹಚಾರಕ್ಕೆ ಈ ಕುಟುಂಬ ಬಿಪಿಎಲ್ ಕಾರ್ಡ್ ಬದಲು ಹೊಂದಿರುವುದು ಎಪಿಎಲ್ ಕಾರ್ಡ್, ಮನೆಯಲ್ಲಿರುವ ೫೦ ಸೆಂಟ್ಸ್ ಜಾಗ ಬಿಟ್ಟು ಇತರೆಡೆ ಕೂಲಿ ಮಾಡಿ ಜೀವನ ಸಾಗಿಸುವ ಇವರು ಎಪಿಎಲ್ ಅಲ್ಲದೆ ಇನ್ನೇನು?!. ಪಾಪ ಅದನ್ನು ಸರಿಪಡಿಸಿಕೊಳ್ಳಲು ಆಗುತ್ತದೆ ಎಂಬ ಅರಿವೂ ಕೂಡ ಆ ಕುಟುಂಬಕ್ಕಿಲ್ಲ, ಹಿರಿ ಮಗಳು ದಿವ್ಯ ಕಾಯರ್ತಡ್ಕ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.
ವಿಚಾರ ತಿಳಿದ ತಕ್ಷಣ ಬೆಳ್ತಂಗಡಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾಗಿರುವ, ಗ್ರಾಮಸ್ಥ ಶ್ರೀಧರ ರಾವ್ ಕಳೆಂಜ ಕುಟುಂಬದ ಜೊತೆ ಸ್ಪಂದಿಸಿದ್ದು ಎರಡೆರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ದಾನಿಗಳನ್ನು ಸಂಪರ್ಕಿಸುವ ಕಾರ್ಯ ಮಾಡುತ್ತಿದ್ದಾರೆ. ಮಕ್ಕಳ ಸಹಾಯವಾಣಿ ಸಹಿತ ಇತರರಿಗೂ ವಿಚಾರ ತಿಳಿಯವಂತೆ ಮಾಡಿ ಸಹಾಯಹಸ್ತ ಒದಗಿ ಬರುವಂತೆ ಶ್ರಮಿಸುತ್ತಿದ್ದಾರೆ. ಧರ್ಮಸ್ಥಳ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಕೂಡ ಕುಟುಂಬವನ್ನು ಸಂಪರ್ಕಿಸಿ, ಸಾಂತ್ವನ, ನೆರವು ಭರವಸೆ ವ್ಯಕ್ತಪಡಿಸಿದ್ದಾರೆ. ತಾ.ಪಂ. ಮಾಜಿ ಅಧ್ಯಕ್ಷ ವಿಜಯ ಕುಮಾರ್ ಅವರು ತಿಳಿಸಿ ಶಾಸಕ ಬಂಗೇರರಿಗೂ ಮಾಹಿತಿ ಲಭಿಸಿದ್ದು, ಎಪಿಎಲ್ ಕಾರ್ಡ್ ಇರುವುದನ್ನು ಬಿಪಿಎಲ್ ಮಾಡಿಸಿ ಸರಕಾರದಿಂದ ಸೂಕ್ತ ನೆರವು ದೊರೆಯುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸರಕಾರದ ನಿಧಿಗಳಾದ ಪ್ರಧಾನಮಂತ್ರಿ, ಮುಖ್ಯಮಂತ್ರಿ ಪರಿಹಾರ ನಿಧಿ ಅಧ್ಯಾವುದೇ ಸಿಕ್ಕಿದರೂ ಕೂಡ ಚಿಕಿತ್ಸಾ ಮೊತ್ತಕ್ಕೆ ಅದು ಸರಿಸಮನಾಗಲು ಸಾಧ್ಯವೇ ಇಲ್ಲ. ಕೊನೆಗೆ ಉಳಿದಿರುವುದು ಒಂದೇ ಪರಿಹಾರ… ದಾನಿಗಳು ನೀಡುವ ನೆರವು ಮಾತ್ರ. ಆದುದರಿಂದ ಮನೆಮಗಳು ದೀಕ್ಷಿತಾ ರೋಗಮುಕ್ತವಾಗಲು ನೀವೆಲ್ಲಾ ದೀಕ್ಷೆ ಕೈಗೊಳ್ಳಬೇಕಾಗಿದೆ. ಇದೇ ಸುದ್ದಿ ಪತ್ರಿಕೆಯ ಈ ಬರಹದ ಕಳಕಳಿ…

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.