ಫೆ.4 : ಬೆಳ್ತಂಗಡಿಯಲ್ಲಿ ಕುಲಾಲ-ಕುಂಬಾರ ಸಮಾವೇಶ ಮಾಣಿಲ ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಸಂಘಟನೆಗಳು ಸಮಾಜದ ಶ್ರೇಯೋಭಿವೃದ್ಧಿಗೆ ಚಿಂತಿಸಲಿ : ಸ್ವಾಮೀಜಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕುಲಾಲ/ಕುಂಬಾರರ ಸಮಾವೇಶ ಮತ್ತು ಹಕ್ಕೊತ್ತಾಯ ಸಮಿತಿ ಇದರ ನೇತೃತ್ವದಲ್ಲಿ, ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬೆಳ್ತಂಗಡಿ, ರಾಜ್ಯ ಕುಂಬಾರರ ಮಹಾ ಸಂಘ ಬೆಂಗಳೂರು, ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಕುಲಾಲ-ಕುಂಬಾರರ ಸಮಾವೇಶ ಮತ್ತು ಹಕ್ಕೋತ್ತಾಯ ಕಾರ್ಯಕ್ರಮ ಫೆ. 4ರಂದು ಬೆಳ್ತಂಗಡಿಯಲ್ಲಿ ನಡೆಯಲಿದೆ.
ರಾಜ್ಯದಲ್ಲೇ ಪ್ರಥಮವಾದ ಈ ಹಕ್ಕೊತ್ತಾಯ ಸಮಾವೇಶದ ಆಮಂತ್ರಣ ಪತ್ರ ಬಿಡುಗಡೆಯ ಸರಳ ಕಾರ್ಯಕ್ರಮ ಜ.14ರಂದು ಶ್ರೀ ಕ್ಷೇತ್ರ ಮಾಣಿಲದಲ್ಲಿ ನಡೆಯಿತು. ಶ್ರೀ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿ, ಸಮಾಜದ ಬಲವೃದ್ಧಿಗೆ ಹಾಗೂ ಹಿತಕಾಪಾಡಲು ಸಂಘಟನೆಗಳು ಅಗತ್ಯವಾಗಿದ್ದು, ಸ್ವಹಿತಾಸಕ್ತಿಯನ್ನು ಮರೆತು ಎಲ್ಲರೂ ಸಮಾಜವನ್ನು ಪ್ರೀತಿಸಿ ಜನರ ಶ್ರೇಯೋಭಿವೃದ್ಧಿಗೆ ಚಿಂತನೆ ನಡೆಸಬೇಕು. ಎಲ್ಲಾ ಸಂಘಟನೆಗಳಲ್ಲಿ ಭಿನ್ನಮತ ಎಂಬುದು ಸಾಮಾನ್ಯ ಆದರೆ ಒಟ್ಟು ಸಮಾಜದ ವ್ಯವಸ್ಥೆ ಎಂದಾಗ ಎಲ್ಲರೂ ಒಂದೇ ಮನಸ್ಸಿನಿಂದ ಒಟ್ಟಾಗಬೇಕು, ನಮ್ಮ ಹಿರಿಯರು ಸಂಸ್ಕೃತಿ, ಪರಂಪರೆಯನ್ನು ಉಳಿಸಿ-ಬೆಳೆಸಿ ನಮಗೆ ನೀಡಿದ್ದಾರೆ. ಇದನ್ನು ಮುಂದಿನ ಜನಾಂಗಕ್ಕೆ ನೀಡುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ ಇದಕ್ಕಾಗಿ ಇಂತಹ ಸಮಾವೇಶಗಳು ಇದಕ್ಕೆ ಪೂರಕವಾಗಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕುಲಾಲ ಕುಂಬಾರ ಯುವ ವೇದಿಕೆ ಹಾಗೂ ತಾಲೂಕು ಸಮಾವೇಶ ಮತ್ತು ಹಕ್ಕೋತ್ತಾಯ ಸಮಿತಿ ಅಧ್ಯಕ್ಷ ಹರೀಶ್ ಕಾರಿಂಜ, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ ಲಾಯಿಲ, ಕಾರ್ಯಾಧ್ಯಕ್ಷ ಉಮೇಶ್ ಕುಲಾಲ್ ಗುರುವಾಯನಕೆರೆ, ಗೌರವ ಸಲಹೆಗಾರರಾದ ಹೆಚ್. ಪದ್ಮಕುಮಾರ್ ಬೆಳ್ತಂಡಿ, ಲೋಕೇಶ್ ಕುಲಾಲ್ ಗುರುವಾಯನಕೆರೆ, ಕಾರ್ಯದರ್ಶಿ ಅಶೋಕ್ ಎಸ್. ಹಾರಬೆ, ಮಾಧ್ಯಮ ಸಮಿತಿ ಅಧ್ಯಕ್ಷ ಬಿ.ಎಸ್. ಕುಲಾಲ್ ಬೆಳ್ತಂಗಡಿ ಉಪಸ್ಥಿತರಿದ್ದರು.

Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.