ಬೆಳ್ತಂಗಡಿ ಸಂತೋಮ್ ಟವರ್‌ನಲ್ಲಿ ಸ್ಪಂದನಾ ಪಾಲಿ ಕ್ಲಿನಿಕ್ ಮತ್ತು ಲ್ಯಾಬೊರೇಟರಿ ಕಾರ್ಯಾರಂಭ

ಬೆಳ್ತಂಗಡಿ : ಒಂದೇ ಸೂರಿನಡಿ ಎಲ್ಲ ರೀತೀಯ ಆರೋಗ್ಯ ತಪಾಸಣೆ, ಪರೀಕ್ಷೆಗಳನ್ನು ನಡೆಸಬಹುದಾದ ಸ್ಪಂದನ ಪಾಲಿಕ್ಲಿನಿಕ್ ಮತ್ತು ಮಲ್ಟಿ ಲ್ಯಾಬೊರೇಟರಿ ಇದರ ಕಾರ್ಯಾರಂಭ ಜ. 10 ರಂದು ಬೆಳ್ತಂಗಡಿ ಬಸ್‌ಸ್ಟ್ಯಾಂಡ್ ಪಕ್ಕದ ಸಂತೋಮ್ ಟವರ್‌ನಲ್ಲಿ ನಡೆಯಿತು.
ರೆ. ಫಾ. ಟೋಮಿ ಮಟ್ಟಂ ಶುಭಾಶೀರ್ವಚನ ಸಲ್ಲಿಸುವ ಮೂಲಕ ನೂತನ ಮಳಿಗೆಗೆ ಚಾಲನೆ ನೀಡಿದರು. ಅಲ್ಲದೆ ಮೊದಲ ಗ್ರಾಹಕರಾಗಿ ಅವರು ಪರೀಕ್ಷೆಗಾಗಿ ರಕ್ತದ ಮಾದರಿಯನ್ನು ನೀಡಿದರು. ಈ ಸಂದರ್ಭ ಧರ್ಮ ಗುರುಗಳಾದ ರೆ. ಫಾ ಬಿನೋಯ್ ಕುರಿಯಾಲಶ್ಶೇರಿ, ರೆ. ಫಾ. ಸಲಿನ್ ಜೋಸೆಫ್, ಮಾನವಹಕ್ಕುಗಳ ಸಮಿತಿ ಬೆಳ್ತಂಗಡಿ ಅಧ್ಯಕ್ಷ ಪಿ.ಸಿ ಸೆಬಾಸ್ಟಿಯನ್, ಅನುಗ್ರಹ ಸ್ಕೂಲ್ ಬುಕ್ ಕಂಪೆನಿಯ ಅಶ್ರಫ್ ಫೈಝಿ, ಸ್ಪಂದನಾ ಕ್ಲಿನಿಕ್ ಮಾಲಕರಾದ ಪಿ.ಸಿ ಮೆಲ್ಬಿ, ಅವರ ಪತ್ನಿ ಮಂಜು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ನೂತನ ಕ್ಲಿನಿಕ್‌ನಲ್ಲಿ ಮುಂದಕ್ಕೆ ಜನರಲ್ ಫಿಸಿಶಿಯನ್, ಮೂಗು ಕಿವಿ ಗಂಟಲು ತಜ್ಞರು, ಮಕ್ಕಳ ತಜ್ಞರು, ನರರೋಗ ತಜ್ಞರು, ಕಿಡ್ನಿ, ಸ್ತ್ರೀ ರೋಗ ತಜ್ಞರು, ಮನೋರೋಗ ತಜ್ಞರು, ಮೊದಲಾದ ವೈದ್ಯರುಗಳು ನಿಗದಿತ ಸಮಯದಲ್ಲಿ ಲಭ್ಯರಿರಲಿದ್ದಾರೆ. ಜೊತೆಗೆ ಆಯುರ್ವೇದ ಕ್ಲಿನಿಕ್ ಕೂಡ ಪ್ರತ್ಯೇಕವಾಗಿ ತೆರೆಯಲಿದೆ. ಈಗ ಕಾರ್ಯಾರಂಭಿಸಿರುವ ಲ್ಯಾಬೊರೇಟರಿಯಲ್ಲಿ ಕಿಡ್ನಿ ಕ್ಷಮತೆ ಪರೀಕ್ಷೆ, ಕೊನ್ನಿನಂಶ (ಕೊಲೆಸ್ಟ್ರಾಲ್), ಪಿತ್ತಜನಕಾಂಗ (ಲಿವರ್), ರಕ್ತದ ಕಣ(ಬ್ಲೆಡ್ ಕೌಂಟ್), ಮಧುಮೇಹ(ಶುಗರ್), ಥೈರಾಯ್ಡ್ ಪರೀಕ್ಷೆ, ಫುಲ್ ಬಾಡಿ ಚೆಕಪ್, ಸಹಿತ ಎಲ್ಲಾ ತರದ ಸ್ಪೆಷಲ್ ಟೆಸ್ಟ್ ಮಾಡುವ ಸೌಲಭ್ಯ ಒಂದೇ ಸೂರಿನಡಿ ಲಭ್ಯವಿದೆ. ದಿನ 24 ಗಂಟೆ ಸೇವೆ ನೀಡುವ ಮೂಲಕ ಕ್ಲಿನಿಕ್‌ಗೆ ಬರಲು ಆಗದ ರೋಗಿಗಳ ಮನೆಗೇ ಹೋಗಿ ರಕ್ತದ ಮಾದರಿ ಸಂಗ್ರಹ ಸೇವೆ ಕೂಡ ಇದೆ ಎಂದು ಮಾಲಕ ಪಿ.ಸಿ ಮೆಲ್ಬಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.