ಸಮೂಹ ಉಜಿರೆ ನೂತನ ಅಧ್ಯಕ್ಷರಾಗಿ ಡಾ. ಬಿ.ಎ ಕುಮಾರ ಹೆಗ್ಡೆ ಆಯ್ಕೆ

ಉಜಿರೆ : ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಸಂಘಟನೆಯಾದ ಸಮೂಹ ಉಜಿರೆಯು 26ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಸಂಘಟನೆಯ ನೂತನ ಪದಾಧಿಕಾರಿಗಳನ್ನು ಕಾರ್‍ಯಕಾರಣಿಯು ಇತ್ತೀಚೆಗೆ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಸ್ಥಾಪಕಾಧ್ಯಕ್ಷೆ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ ಶ್ರೀ ಕ್ಷೇತ್ರ ಧರ್ಮಸ್ಥಳ, ಪ್ರಧಾನ ಮಾರ್ಗದರ್ಶಕರಾಗಿ ಡಾ. ಬಿ. ಯಶೋವರ್ಮ, ಅಧ್ಯಕ್ಷರಾಗಿ ಡಾ. ಬಿ.ಎ ಕುಮಾರ ಹೆಗ್ಡೆ, ಕಾರ್ಯದರ್ಶಿಗಳಾಗಿ ಡಾ. ಎಂ.ಪಿ ಶ್ರೀನಾಥ್, ಪ್ರೊ. ಮಹೇಶ್ ಕುಮಾರ್ ಶೆಟ್ಟಿ ಹೆಚ್, ಕೋಶಾಧಿಕಾರಿಯಾಗಿ ಬಿ. ಸೋಮಶೇಖರ ಶೆಟ್ಟಿ, ಸಲಹೆಗಾರರಾಗಿ ಪ್ರೊ. ಟಿ. ಕೃಷ್ಣಮೂರ್ತಿ ಉಜಿರೆ, ಎಸ್.ಜಿ ಭಟ್ ಉಜಿರೆ, ಕಮಲಾಕ್ಷ ಆಚಾರ್ ಬೆಳ್ತಂಗಡಿ, ಭುಜಬಲಿ ಧರ್ಮಸ್ಥಳ ಇವರುಗಳು ಆಯ್ಕೆಯಾದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.