ಮುಂಡಾಜೆ: ವಿಶ್ವಕರ್ಮ ಯುವ ಮಿಲನ್ ಕರ್ನಾಟಕ ರಾಜ್ಯ ಇದರ ಕಾರ್ಯದರ್ಶಿಯಾಗಿ ದಿನೇಶ್ ಆಚಾರ್ಯ ಮುಂಡಾಜೆ ಇವರನ್ನು ನೇಮಕಗೊಳಿಸಿ ಸಂಘಟನೆಯ ರಾಜ್ಯಾಧ್ಯಕ್ಷ ವಿಕ್ರಮ್ ಆಚಾರ್ಯ ಆದೇಶ ನೀಡಿದ್ದಾರೆ.
ಕಲೆ, ಕ್ರೀಡೆ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ದಿನೇಶ್ ಆಚಾರ್ಯ ಅವರು ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಕ್ರೀಯ ಸದಸ್ಯರಾಗಿದ್ದು ಪ್ರಸ್ತುತ 12 ವರ್ಷಗಳಿಂದ ಬೆಂಗಳೂರಿನ ಹುಳಿಮಾವು ಎಂಬಲ್ಲಿ ಈವೆಂಟ್ ಮನೇಜ್ಮೆಂಟ್ ಸಂಸ್ಥೆ ನಡೆಸುತ್ತಿದ್ದಾರೆ. ಯುವಜನ ಮೇಳಗಳಲ್ಲಿ ಮೈಸೂರು ವಿಭಾಗ ಮಟ್ಟದವರೆಗೆ ಸ್ಪರ್ಧಿಸುವ ಅವಕಾಶ ಪಡೆದಿರುವ ಅವರು ಅತ್ಯುತ್ತಮ ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಮಿಂಚುತ್ತಿದ್ದಾರೆ. ಬೆಂಗಳೂರಿನ ಯಕ್ಷಸಂಭ್ರಮ ಯಕ್ಷಗಾನ ತಂಡದ ಪ್ರಧಾನ ಹಾಸ್ಯಗಾರ ಪಾತ್ರದಲ್ಲಿ ಅಭಿನಯಿಸುತ್ತಿರುವ ಅವರು ಇತರ ಮೇಳಗಳಲ್ಲೂ ಬಣ್ಣಹಚ್ಚಿದ್ದಾರೆ.