ಪಟ್ರಮೆ : ದಿ.ಬೋಳೊಡಿ ಭಟ್ ಸ್ಮಾರಕ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

patrame tangudana udhgataneಪಟ್ರಮೆ : ಪಟ್ರಮೆ ಗ್ರಾಮದ ಅಭಿವೃದ್ದಿಯ ಹರಿಕಾರ ದಿ. ಬೋಳೊಡಿ ವೆಂಕಟ್ರಮಣ ಭಟ್ ಸ್ಮರಣಾರ್ಥ ಅವರ ಅಭಿಮಾನಿಗಳು ಮತ್ತು ಮನೆಯವರು ಪಟ್ರಮೆ ಗ್ರಾಮದ ಶಾಂತಿಕಾಯ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣದ ಉದ್ಘಾಟನೆ ಮತ್ತು ಈ ತಂಗುದಾಣವನ್ನು ಗ್ರಾಮಪಂಚಾಯತಿಗೆ ಹಸ್ತಾಂತರ ಗೊಳಿಸುವ ಕಾರ್ಯಕ್ರಮವು ನ.28 ರಂದು ನಡೆಯಿತು.
ಬೆಳ್ತಂಗಡಿಯ ಶಾಸಕ ಕೆ. ವಸಂತ ಬಂಗೇರ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿ, ದಿ. ಬೋಳೊಡಿ ಭಟ್ಟರ ಮಹತ್ತರ ಪ್ರಯತ್ನದಿಂದಾಗಿ ಪಟ್ರಮೆ ಗ್ರಾಮಕ್ಕೆ ಸರಕಾರಿ ವ್ಯವಸ್ಥೆಯ ಹೆಚ್ಚಿನ ಎಲ್ಲಾ ಸವಲತ್ತುಗಳು ಬರುವಂತಾಗಿದೆ. ನನ್ನ 5 ಬಾರಿ ಶಾಸಕ ಅವಧಿಯಲ್ಲೂ ದಿ. ಭಟ್ಟರು ಪಟ್ರಮೆ ಗ್ರಾಮದ ಅಭಿವೃದ್ದಿಗಾಗಿ ನನ್ನನ್ನು ಪದೇ ಪದೇ ಉತ್ತೇಜಿಸುತ್ತಿದ್ದರು ಅನ್ನುವುದನ್ನು ನೆನಪಿಸಿಕೊಂಡ ಶಾಸಕರು, ಇಂದು ಅದೇ ಬೋಳೊಡಿ ಭಟ್ಟರ ಸ್ಮರಣಾರ್ಥ ಅವರ ಅಭಿಮಾನಿಗಳು ಮತ್ತು ಮನೆಯವರು ಸೇರಿ ಇಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಸುಂದರವಾದ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿದ್ದು ಇದನ್ನು ಸಂತೋಷದಿಂದ ಭಟ್ಟರ ನೆನಪಿಗಾಗಿ ಲೋಕಾರ್ಪಣೆ ಗೊಳಿಸುತ್ತಿದ್ದೇನೆ ಎಂದರು.
ನ್ಯಾಯವಾದಿ, ಬೋಳೋಡಿ ಮನೆ ಬಿ.ಎಂ. ಭಟ್ ಅಧ್ಯಕ್ಷತೆ ವಹಿಸಿ ತಂಗುದಾಣವನ್ನು ನಿರ್ಮಿಸಲು ಹೊರಟಾಗ ಕೆಲವೊಂದು ಅಡರು ತೊಡರುಗಳು ಎದುರಾಗಿದ್ದರೂ, ಸ್ಥಳೀಯ ಗ್ರಾಮಸ್ಥರು, ಬೋಳೋಡಿ ಭಟ್ಟರ ಅಭಿಮಾನಿಗಳು ತುಂಬು ಹೃದಯದ ಸಹಕಾರವನ್ನು ನೀಡಿದ್ದು ಈ ಸಂದರ್ಭ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ನುಡಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ಹಿರಿಯ ರೈತ ಕಾರ್ಮಿಕ ಮುಖಂಡ ಕೆ. ಆರ್. ಶ್ರೀಯಾನ್, ಬೋಳೋಡಿ ಭಟ್ಟರ ಧರ್ಮಪತ್ನಿ ಬಿ.ವಿ. ಭವಾನಿ, ಕರ್ನಾಟಕ ರಕ್ಷಣಾ ವೇದಿಕೆ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶ್ರೀನಿವಾಸ ಗೌಡ, ಪಟ್ರಮೆ ಗ್ರಾ.ಪಂ. ಅಧ್ಯಕ್ಷ ನವೀನ, ಪಟ್ರಮೆ ಗ್ರಾ.ಪಂ. ಸದಸ್ಯ ಶ್ಯಾಮರಾಜ್ ಬೋಳೋಡಿ, ಉಪಾಧ್ಯಕ್ಷೆ ಬಾಬಿ, ಗ್ರಾ.ಪಂ. ಸದಸ್ಯರುಗಳಾದ ಶೀಲಾವತಿ, ಮಾಲತಿ, ಬಾಲಕೃಷ್ಣ ಗೌಡ ,ಕೆಇಬಿ ಕಿರಿಯ ಅಭಿಯಂತರ ಪುಟ್ಟರಾಜು, ಬೋಳೋ ಡಿ ಭಟ್ಟರ ಅಳಿಯ ಸುಬ್ರಹ್ಮಣ್ಯ ಭಟ್, ಉಮಾ ಎಸ್ ಭಟ್, ಶಿವ ಶರಣ್, ಕಿರಣಪ್ರಭಾ, ಸುಮಂಗಲಾ ಉಪಸ್ಥಿತರಿದ್ದರು. ಬೋಳೋಡಿ ಭಟ್ಟರ ಅಭಿಮಾನಿಗಳು ಮತ್ತು ಮನೆಯವರು ನಿರ್ಮಿಸಿದ ಪ್ರಯಾಣಿಕರ ತಂಗುದಾಣವನ್ನು ಪಟ್ರಮೆ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಶಾಸಕರು ಹಸ್ತಾಂತರಿಸಿದರು.
ಬೆಳ್ತಂಗಡಿ ತಾಲೂಕು ಡಿವೈಎಫ್ ಐ ಅಧ್ಯಕ್ಷ ಧನಂಜಯ ಗೌಡ ಪಟ್ರಮೆ ಸ್ವಾಗತಿಸಿ, ಪುಷ್ಪಾ ಶ್ರೀನಿವಾಸ್ ವಂದಿಸಿ, ಬಿ.ಎಂ. ಭಟ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.