ಲಯನ್ಸ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಮತ್ತು ಸೇವಾ ಚಟುವಟಿಕೆಗಳ ಅನಾವರಣ ಲಯನ್ಸ್ ಕ್ಲಬ್‌ಗೆ ಸೇವೆಯೇ ಜಾತಿ: ರಾಜ್ಯಪಾಲ ಲ| ಎಚ್.ಆರ್. ಹರೀಶ್

Advt_NewsUnder_1
Advt_NewsUnder_1

Lion rajyapalara betiಬೆಳ್ತಂಗಡಿ : ಲಯನ್ಸ್ ಕ್ಲಬ್‌ಗೆ ಜಾತಿಯ ಭೇದವಿಲ್ಲ, ಎಲ್ಲಿ ಜನ ಕಷ್ಟದಲ್ಲಿದ್ದಾರೆ, ದುಃಖಿತರಿದ್ದಾರೆ, ಎಲ್ಲಿ ಸೇವೆ ಪಡೆಯಲು ಅರ್ಹರು ಇದ್ದಾರೆ ಅವರಿಗೆ ಪ್ರಾಮಾಣಿಕತೆಯಿಂದ ಸೇವೆ ಒದಗಿಸಿಕೊಡುವುದೇ ನಮ್ಮ ಕರ್ತವ್ಯ, ನಮ್ಮದು ಸೇವೆಯೇ ಜಾತಿ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಲ| ಎಚ್.ಆರ್. ಹರೀಶ್ ಹೇಳಿದರು.
ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಬೆಳ್ತಂಗಡಿ ಮತ್ತು ಅಳದಂಗಡಿ ಕ್ಲಬ್‌ಗಳಿಗೆ ಲಯನ್ಸ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ನಿಮಿತ್ತ ನ. 10 ರಂದು ಎಸ್‌ಡಿಎಂ ಕಲಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಬೆಳ್ತಂಗಡಿ ಸ್ಥಾಪಕ ಸದಸ್ಯರ ಗೌರವಾರ್ಪಣೆಯನ್ನು ಅತ್ಯಂತ ಮಾದರಿಯಾಗಿ ಏರ್ಪಡಿಸಿದ್ದೂ ಮಾತ್ರವಲ್ಲದೆ ಧರಣೇಂದ್ರ ಕೆ. ಜೈನ್, ವಿಜಯ ಕುಮಾರ್ ಜೈನ್ ಅವರ ನೇತೃತ್ವದಲ್ಲಿ ವರ್ಷಪೂರ್ತಿ ವಿಭಿನ್ನ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ, ಅಲ್ಲದೆ ನನ್ನ ಭೇಟಿಯ ಸಂದರ್ಭವೂ ಕೂಡ ವಿವಿಧ ಧರ್ಮೀಯರ ಕ್ಷೇತ್ರಗಳಿಗೆ ಭೇಟಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಕೆ. ಧರಣೇಂದ್ರ ಜೈನ್ ಮಾತನಾಡಿ, ಪ್ರಶಸ್ತಿಯ ಉದ್ದೇಶದಿಂದ ನಾವು ಯಾವುದೇ ಸೇವಾ ಕಾರ್ಯ ಮಾಡುತ್ತಿಲ್ಲ, ಎಲ್ಲಾ ಸದಸ್ಯರ ಕೂಡುವಿಕೆಯೊಂದಿಗೆ ನಿಸ್ವಾರ್ಥವಾಗಿ ಅವರಿಂದ ಆಗುತ್ತಿರುವ ಒಂದೊಂದೇ ನೈಜ ಸೇವಾ ಕಾರ್ಯಗಳು ಸಮಾಜದಲ್ಲಿ ದೊಡ್ಡ ಪರಿಣಾಮವಾಗಿ ಮಾರ್ಪಡುತ್ತಿದೆಯಷ್ಟೇ ಎಂದರು.
ಮುಖ್ಯ ಅತಿಥಿಗಳಾಗಿದ್ದ ಲಯನ್ಸ್ ಜಿಲ್ಲಾ ಸಂಪುಟದ ಪ್ರ. ಕಾರ್ಯದರ್ಶಿ ಲ| ವಸಂತ ಕುಮಾರ್ ಶೆಟ್ಟಿ ಮಂಗಳೂರು, ಪ್ರಾಂತ್ಯಾಧ್ಯಕ್ಷ ಲ| ನಿತ್ಯಾನಂದ ನಾವರ, ವಲಯಾಧ್ಯಕ್ಷ ಲ| ವೆಂಕಟೇಶ್ ಎಂ.ಬಿ ಮತ್ತು ಲ| ವಾಸು ಮೂಡಬಿದ್ರೆ, ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿ ಕೆ. ಶಿವಪ್ರಸಾದ್ ಹೆಗ್ಡೆ ಮೂಡಬಿದ್ರೆ, ಜಿಲ್ಲಾ ಸಂಯೋಜಕ ಲ| ಪ್ರವೀಣ್ ಕುಮಾರ್ ಇಂದ್ರ ವೇಣೂರು ಶುಭ ಕೋರಿದರು. ಸಭಾಸದರ ನೆಲೆಯಲ್ಲಿ ಪಾಂತ್ಯ 7ರ ಅಧ್ಯಕ್ಷ ಕುಡ್ಪಿ ಅರವಿಂದ ಶೆಣೈ, ಮೋಟಿವೇಟ್ ವಿಭಾಗದ ಸಂಯೋಜಕ ಲ| ಮೆಲ್ವಿನ್ ಡಿಸೋಜಾ ಕಿನ್ನಿಗೊಳಿ ಮತ್ತು ಶಾಶ್ವತ ಕಾಮಗಾರಿ ನಿರ್ದೇಶಕ ಲ| ಡಾ. ಗೀತ್‌ಪ್ರಕಾಶ್ ವಿಟ್ಲ ಶುಭ ಕೋರಿದರು. ವೇದಿಕೆಯಲ್ಲಿ ನಾರಾವಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಮುರಳಿ ಬಿ, ವೇಣೂರು ಕ್ಲಬ್ ಅಧ್ಯಕ್ಷ ಲ| ನಿತೇಶ್ ಎಚ್, ಮೂಡಬಿದ್ರೆ ಕ್ಲಬ್ ಅಧ್ಯಕ್ಷ ಲ| ರಾಮಚಂದ್ರ ಆಚಾರ್ಯ, ಆಲಂಗಾರು ಕ್ಲಬ್ ಅಧ್ಯಕ್ಷ ಲ| ಜೆರಾಲ್ಡ್ ಪಿಂಟೊ, ಮಂಗಳೂರು ಕ್ಲಬ್ ಅಧ್ಯಕ್ಷ ಲ| ವೆಂಕಟೇಶ್ ಬಾಳಿಗ ಉಪಸ್ಥಿತರಿದ್ದರು.
ಸನ್ಮಾನ: ವೇದಿಕೆಯಲ್ಲಿ ರಾಜ್ಯಪಾಲ ಎಚ್. ಆರ್. ಹರೀಶ್ ಮತ್ತು ಅವರ ಧರ್ಮಪತ್ನಿ, ಲಯನ್ಸ್ ಜಿಲ್ಲೆಯ ಪ್ರಥಮ ಮಹಿಳೆ ಲ| ನಮಿತಾ ಹರೀಶ್ ಅವರನ್ನು ಸನ್ಮಾನಿಸಲಾಯಿತು. ಸ್ಥಾಪಕ ಸದಸ್ಯರಾದ ಲ| ಎಂ.ಜಿ. ಶೆಟ್ಟಿ ಮತ್ತು ಲ| ವಿ.ಆರ್. ನಾಯಕ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಲಾಂಗೂಲ ಚಾಲಕ ಲ| ದೇವಿಪ್ರಸಾದ್, ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಕುವೆಟ್ಟು ಪಂಚಾಯತ್ ಅಧ್ಯಕ್ಷ ಅಶೋಕ್ ಕೋಟ್ಯಾನ್ ಅವರಿಗೆ ವಿಶೇಷ ಸನ್ಮಾನ ನೆರವೇರಿಸಲಾಯಿತು. ಯೋಧರಿಗೆ ನಮನ ಕಾರ್ಯಕ್ರಮದಡಿ ಗುರುವಾಯನಕೆರೆಯ ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಅವರಿಗೆ ಸನ್ಮಾನ ನೆರವೇರಿಸಿ ಅಭಿನಂದಿಸಲಾಯಿತು. ಚೈತ್ರಾ ಲಾಯಿಲ ಅವರಿಗೆ ಲ| ಸುರೇಶ್ ಶೆಟ್ಟಿ ಪ್ರಾಯೋಜಕತ್ವದ ವಿದ್ಯಾನಿಧಿ ಹಸ್ತಾಂತರ, ಶಾಶ್ವತ ಕಾಮಗಾರಿಯಡಿ ಸುಶೀಲಾ ದೇವಾಡಿಗ ಕಲ್ಮಂಜ ಅವರಿಗೆ ಮನೆ ನಿರ್ಮಾಣದ ಜವಾಬ್ಧಾರಿ ಹೊತ್ತು ಸಂಪೂರ್ಣ ನಿರ್ವಹಣೆ ಮಾಡಿದ ಲ| ಅಶ್ರಫ್ ಆಲಿಕುಂಞಿ ಅವರ ಮೂಲಕ ಮನೆಯ ಕೀಲಿಕೈ ಹಸ್ತಾಂತರ ಸಹಿತ ಇತರ ಸೇವಾ ಚಟುವಟಿಕೆಗಳನ್ನು ನಡೆಸಲಾಯಿತು. ಲಯನ್ಸ್ ಜಿಲ್ಲೆಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವ ಲ| ಪ್ರಕಾಶ್ ಶೆಟ್ಟಿ ನೊಚ್ಚ ಅವರನ್ನು ರಾಜ್ಯಪಾಲರ ವತಿಯಿಂದ ಪುರಸ್ಕರಿ ಸಿದರು.
ರಾಜ್ಯಪಾಲರ ಮನ್ನಣೆ: ಉತ್ತಮ ಸೇವೆಗಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಧರಣೇಂದ್ರ ಕೆ ಜೈನ್, ಕಾರ್ಯದರ್ಶಿ ಲ| ಸುರೇಶ್ ಶೆಟ್ಟಿ ಲಾಲ, ಕೋಶಾಧಿಕಾರಿ ಲ| ವಿನ್ಸೆಂಟ್ ಟಿ. ಡಿಸೋಜಾ, ಅಳದಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ವಿಜಯಕುಮಾರ್ ಜೈನ್, ಕಾರ್ಯದರ್ಶಿ ಸುಕೇಶ್ ಜೈನ್, ಕೋಶಾಧಿಕಾರಿ ಹಿಲಾರಿ ಫೆರ್ನಾಂಡಿಸ್ ಅವರಿಗೆ ರಾಜ್ಯಪಾಲರು ವಿಶೇಷ ಪಿನ್ ತೊಡಿಸಿ ಗೌರವಿಸಿದರು. ಸೇವಾ ಚಟುವಟಿಕೆಯ ಪಿನ್‌ಅನ್ನು ಲ| ಅಶ್ರಫ್ ಆಲಿಕುಂಞಿ ಅವರಿಗೆ ನೀಡಿ ಪುರಸ್ಕರಿಸಿದರು. ಪ್ರಶಂಸ ಬ್ಯಾನರನ್ನು ಲ| ನಿತ್ಯಾನಂದ ನಾವರ, ಲ| ರಾಜು ಶೆಟ್ಟಿ ಬೆಂಗೆತ್ಯಾರು, ಲ| ರಾಮಕೃಷ್ಣ ಗೌಡ, ಲ| ವಿ.ಆರ್. ನಾಯಕ್ ಅವರಿಗೆ ರಾಜ್ಯಪಾಲರು ಹಸ್ತಾಂತರಿಸಿದರು.
ಗೌರವದ ಪಿನ್ನ್ ಅನ್ನು ಲ| ಸೀತಾರಾಮ ರಾವ್, ಲ| ರಘುರಾಮ ಗಾಂಭೀರ, ಲ| ವಿ.ಆರ್. ನಾಯಕ್, ಲ| ಎಂ.ಜಿ ಶೆಟ್ಟಿ ಮತ್ತು ಲ| ರಾಮಕೃಷ್ಣ ಗೌಡ ಅವರಿಗೆ ಹಸ್ತಾಂತರಿಸಿದರು. ಅಳದಂಗಡಿ ಕ್ಲಬ್ ಅಧ್ಯಕ್ಷ ಲ| ವಿಜಯ ಕುಮಾರ್ ಜೈನ್ ಸ್ವಾಗತಿಸಿದರು. ಲ| ವಸಂತ ಶೆಟ್ಟಿ ಅತಿಥಿಗಳನ್ನು ಬರಮಾಡಿಕೊಂಡರು. ಲ| ಎಲೋಶಿಯಸ್ ಲೋಬೊ ನೀತಿ ಸಂಹಿತೆ ಪಠಿಸಿದರು. ಲ| ಸುರೇಶ್ ಶೆಟ್ಟಿ ಲಾಲ ಮತ್ತು ಲ| ಸದಾನಂದ ಕುದ್ಯಾಡಿ ವರದಿ ಮಂಡಿಸಿದರು. ಹೊಸದಾಗಿ ಸೇರ್ಪಡೆಗೊಂಡ ರಾಮ ಪಿ. ಸಾಲ್ಯಾನ್ ಮತ್ತು ಮಂಜುನಾಥ ಅವರ ಪರಿಚಯ ವನ್ನು ಲ| ನಾಮದೇವ ರಾವ್ ನಿರ್ವಹಿಸಿ ದರು. ಲ| ವಿನ್ಸೆಂಟ್ ಟಿ. ಡಿಸೋಜಾ ಪ್ರಾರ್ಥನೆ ಹಾಡಿದರು. ರಾಜ್ಯಪಾಲರ ಪ್ರಶಂಸನಾ ಪತ್ರವನ್ನು ಲ| ವಿ.ಆರ್. ನಾಯಕ್ ವಾಚಿಸಿದರು. ಚಿತ್ರ: ಮನು ಮದ್ದಡ್ಕ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.