ಸುಂದರ ಮಲೆಕುಡಿಯರಿಗೆ ರಾಷ್ಟ್ರೀಯ ಆದಿವಾಸಿ ಸಮ್ಮೇಳನದಲ್ಲಿ ಗೌರವ

sundaraಬೆಳ್ತಂಗಡಿ : ಪಟ್ಟಭದ್ರ ಭೂಮಾಲೀಕರ ಕ್ರೂರ ಧಾಳಿಗೆ ಒಳಗಾಗಿಯೂ ಧೃತಿಗೆಡದೆ ನಿಂತ ನೆರಿಯ ಪ್ರದೇಶದ ನಿವಾಸಿ ಸುಂದರ ಮಲೆಕುಡಿಯರವರನ್ನು ಅಖಿಲ ಭಾರತ ಸಮ್ಮೇಳನದಲ್ಲಿ ಗೌರವಿಸಲು ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್‌ನ ಕೇಂದ್ರ ಕಾರ್ಯಕಾರಿ ಸಮಿತಿಯು ನಿರ್ಧರಿಸಿದೆ. ಈ ಮೂಲಕ ಆವರ ಕುಟುಂಬವನ್ನು, ಅವರ ಬೆಂಬಲಕ್ಕೆ ನಿಂತ ಮಲೆಕುಡಿಯ ಸಮುದಾಯವನ್ನು ಹಾಗೂ ಹೋರಾಟದಲ್ಲಿ ಕೈ ಜೋಡಿಸಿದ ಎಲ್ಲಾ ಪ್ರಗತಿಪರ, ಮಾನವೀಯ ವ್ಯಕ್ತಿ-ಶಕ್ತಿಗಳನ್ನು ಗುರುತಿಸಿ ಅಭಿನಂದಿಸುವುದು ತನ್ನ ಸ್ಪಂದನದ ವಿಧ ಎಂದು ಅದು ತಿಳಿಸಿದೆ.
ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ ಮುಗಿದಿಲ್ಲ. ಸ್ಥಾಪಿತ ಹಿತಾಸಕ್ತಿಗಳೆದುರಲ್ಲಿ ಮತ್ತಷ್ಟೂ ಜಟಿಲವಿದೆ. ಕರ್ನಾಟಕ ಸರಕಾರವೂ ತನ್ನ ಹೊಣೆಗಾರಿಕೆ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕಾದ ಕರ್ತವ್ಯದಲ್ಲಿ ಸೋತು, ರಾಜಿ ಮಾಡಿಕೊಂಡು ದೌರ್ಜನ್ಯ ನಡೆಸಿದ ಶಕ್ತಿಗಳಿಗೆ ಕುಮ್ಮಕ್ಕು ನೀಡುವಂತೆ ಪಕ್ಷಪಾತ ಹಾಗೂ ಬೇಜವಾಬ್ದಾರಿಯಿಂದ ವರ್ತಿಸಿದೆ. ಇದನ್ನು ಕಾನೂನಾತ್ಮಕವಾಗಿ ಮತ್ತು ಜನಸಮೂಹದ ಪ್ರಜಾಸತ್ತಾತ್ಮಕ ಹೋರಾಟಗಳ ಮೂಲಕ ಎದುರಿಸಲಾಗುವುದು. ನಕಾರಾತ್ಮಕ ಶಕ್ತಿಗಳ ಪ್ರಯತ್ನ ಏನೇ ಇರಲಿ . ಆದರೆ ಹೋರಾಟ ನ್ಯಾಯ ಸಮ್ಮತವಾಗಿದೆ. ಗೆದ್ದೇ ಗೆಲ್ಲುವ ವಿಶ್ವಾಸವಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಎಸ್.ವೈ.ಗುರುಶಾಂತ್ ಮಡಿಕೇರಿಯಲ್ಲಿ ನಡೆದ ರಾಜ್ಯ ಸಮಾವೇಶದಲ್ಲಿ ಗೌರವಿಸುವ ಕೇಂದ್ರದ ತೀರ್ಮಾನವನ್ನು ಪ್ರಕಟಿಸಿ ನುಡಿದರು. ರಾಷ್ಟ್ರೀಯ ಬುಡಕಟ್ಟು ಸಮುದಾಯಗಳ ಸಮ್ಮೇಳನವು ಜೂ. 20 ರಿಂದ 22ರ ವರೆಗೆ ವಿಶಾಖಪಟ್ಟಣಂನಲ್ಲಿ ಜರುಗಲಿದೆ. ರಾಜ್ಯದಿಂದ ೧೫ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದು ಈ ರಾಜ್ಯ ಸಮಾವೇಶದಲ್ಲಿ ಆರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.